RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಚ್ಚಿತ : ಡಿ.ವಾಯ್.ಎಸ್.ಪಿ ಜಾವೇದ

ಗೋಕಾಕ:ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಚ್ಚಿತ : ಡಿ.ವಾಯ್.ಎಸ್.ಪಿ ಜಾವೇದ 

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಚ್ಚಿತ : ಡಿ.ವಾಯ್.ಎಸ್.ಪಿ ಜಾವೇದ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :

 

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ನಿರ್ದಿಷ್ಟ ಗುರಿಯೊಂದಿಗೆ ಗುರುವಿನ ಮಾರ್ಗದರ್ಶನದಲ್ಲಿ ಪ್ರಯತ್ನ ಶೀಲರಾದರೆ ಯಶಸ್ಸು ನಿಚ್ಚಿತ ಎಂದು ಇಲ್ಲಿಯ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಹೇಳಿದರು

ಸೋಮವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನ ದೀಪ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ವಿವಿಧ ಸಂಘ ಚುಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರತಿಭ್ವಾನ್ವಿತ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಶಿಕ್ಷಣ ಕ್ರೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು , ಕಠಿಣ ಪರಿಶ್ರಮದಿಂದ ಕಾರ್ಯಪ್ರವೃತ್ತರಾಗಿರಿ. ಬಡತನ ಸಾಧನೆಗೆ ಅಡಿ ಆಗಲಾಗರದು ಛಲ ಮುಖ್ಯ . ಶಿಕ್ಷಣದೊಂದಿಗೆ ಕ್ರೀಡೆ ಇತರ ಚಟುವಟಿಕೆಗಳಲ್ಲೂ ಪಾಲ್ಗೋಂಡು ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಿ , ಉತ್ತಮ ನಡೆ ನುಡಿಯಿಂದ ಒಳ್ಳೆಯ ವ್ಯಕ್ತಿಯಾಗುವುದೆ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಂತೆ. ಸಾಧಕರಾಗಿ ಸಮಾಜದಲ್ಲಿ ಗೌರವ್ವಾನ್ವಿತ ವ್ಯಕ್ತಿಗಳಾಗಿ ವಿಶ್ವ ಮಾನವರಾಗಿರೆಂದು ಹಾರೈಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವನಾಥ ಕಡಕೋಳ ವಹಿಸಿದ್ದರು.
ವೇದಿಕೆಯ ಮೇಲೆ ಪದವಿ ಮಾಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ , ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ . ಆರ್.ಜಿ.ಭರಭರಿ, ಕಾರ್ಯದರ್ಶಿ ಆರ್.ಎಂ.ವಾಲಿ , ಕ್ರೀಡಾ ಹಾಗೂ ವಿವಿಧ ಸಂಘ ಚುಟುವಟಿಕೆಗಳ ಮುಖ್ಯಸ್ಥ ಎಸ್.ಎಸ್.ಸುಭಂಜಿ , ವಿದ್ಯಾರ್ಥಿ ಪ್ರತಿನಿಧಿ ತೇಜಸ್ ರೇಣದಾಳ ಇದ್ದರು.

ಪ್ರೋ ಜಿ‌.ವ್ಹಿ ಮಳಗಿ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ನಿಸರ್ಗ ಸವದತ್ತಿ ನಿರೂಪಿಸಿದರು. ಸುನೀಲ್ ಗುದ್ಲಿ ವಂದಿಸಿದರು.

Related posts: