ಗೋಕಾಕ:ಗರ್ಭಿಣಿ ಮಹಿಳೆಯೋರ್ವಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ತ್ರಿವಳಿ ಮಕ್ಕಳಿಗೆ ಜನ್ಮ :
ಗರ್ಭಿಣಿ ಮಹಿಳೆಯೋರ್ವಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ :
ತ್ರಿವಳಿ ಮಕ್ಕಳಿಗೆ ಜನ್ಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :
ಇಲ್ಲಿಯ ಡಾ: ಅಶೋಕ ಕೊಪ್ಪ ಅವರ ಶಾಂತಾ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೋರ್ವಳು ಶಸ್ತ್ರ ಚಿಕಿತ್ಸೆಯ ಮೂಲಕ ತ್ರೀವಳಿ ಮಕ್ಕಳಿಗೆ ಸೋಮವಾರದಂದು ಮುಂಜಾನೆ ಜನ್ಮ ನೀಡಿದ್ದಾಳೆಂದು ಡಾ: ಅಶೋಕ ಕೊಪ್ಪ ಅವರು ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಆರತಿ ಶಿವಪ್ಪ ಸಣ್ಣಕ್ಕಿ ಎಂಬ ಮಹಿಳೆಯು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಓರ್ವ ಹೆಣ್ಣು ಮಗು ಹಾಗೂ ಒಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸದರಿ ಮಹಿಳೆಗೆ 112 ಕೆಜಿ ತೂಕದವಳಾಗಿದ್ದು, 8 ವರ್ಷಗಳ ಹಿಂದೆ ಗರ್ಭಪಾತವಾಗಿತ್ತು. ಅಲ್ಲಿಂದ ಅವರಿಗೆ ಮಕ್ಕಳು ಆಗಿರಲಿಲ್ಲ, ಕಳೆದ ಒಂದುವರೆ ವರ್ಷದಿಂದ ಚಿಕಿತ್ಸೆಯನ್ನು ನೀಡಲಾಗಿ ಗರ್ಭಧಾರಣೆಯಾಗಿತ್ತು. ಹೆರಿಗೆ ದಿನಾಂಕ ಮುಂಚೆಯೇ ಹೊಟ್ಟೆಯ ನೋವು ಕಾಣಿಸಿಕೊಂಡಿದ್ದರಿಂದ ಪರೀಕ್ಷಿಸಿ ಶಸ್ತ್ರಚಿಕಿತ್ಸೆಯ ಮೂಲಕ ತ್ರೀವಳಿ ಮಕ್ಕಳನ್ನು ಹೊರತೆಗೆಯಲಾಗಿದ್ದು, ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆಂದು ಡಾ: ಅಶೋಕ ಕೊಪ್ಪ ಅವರು ತಿಳಿಸಿದ್ದಾರೆ.