RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಮ್ಮೇಳನಕ್ಕೆ ಅಪಸ್ವರ : ಕಸಾಪ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ : ಹಿರಿಯ ಸಾಹಿತಿ ಮಹಾನಿಂಗ ಮಂಗಿ ಗಂಭೀರ ಆರೋಪ

ಗೋಕಾಕ:ಸಮ್ಮೇಳನಕ್ಕೆ ಅಪಸ್ವರ : ಕಸಾಪ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ : ಹಿರಿಯ ಸಾಹಿತಿ ಮಹಾನಿಂಗ ಮಂಗಿ ಗಂಭೀರ ಆರೋಪ 

ಸಮ್ಮೇಳನಕ್ಕೆ ಅಪಸ್ವರ : ಕಸಾಪ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ : ಹಿರಿಯ ಸಾಹಿತಿ ಮಹಾನಿಂಗ ಮಂಗಿ ಗಂಭೀರ ಆರೋಪ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 23 :

 
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಮಹಾನಿಂಗ ಮಂಗಿ ಆರೋಪಿಸಿದ್ದಾರೆ

ಮಂಗಳವಾರದಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನೆರೆ ಹಾವಳಿ ಹಾಗೂ ಕರೋನಾ ವೈರಸ್ಸನಿಂದಾಗಿ ತತ್ತರಿಸಿರುವ ಗೋಕಾವಿ ನಾಡಿನಲ್ಲಿ ಅದ್ದೂರಿ ಸಮ್ಮೇಳನ ಅವಶ್ಯಕತೆ ಇತ್ತಾ ಎಂದು ವಾಗ್ದಾಳಿ ನಡೆಸಿದ ಅವರು, ಸಂಭಾವನೆ ನೀಡಿ ಚಿತ್ರ ನಟಿಯರನ್ನು ಕರೆ ತಂದು ಸಮ್ಮೇಳನ ನಡೆಸುವದು ಸರಿಯಲ್ಲ. ಸಾರ್ವಜನಿಕರು ನೀಡಿದ ಹಣ ದುರ್ಬಳಕೆಯಾಗಬಾರದು ಎಂದರು

ಗೋಕಾವಿ ನಾಡಿನಲ್ಲಿ ಅನೇಕ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು, ಸಾಹಿತ್ಯ ಪೋಷಕರು ಹಾಗೂ ಕನ್ನಡಪರ ಸಂಘಟನೆಗಳಿದ್ದು ಎಲ್ಲರನ್ನು ಗಣನೆಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಸಮ್ಮೇಳನ ನಡೆಸಲು ಮುಂದಾಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಸಾಹಿತಿ ಪ್ರೋ. ಚಂದ್ರಶೇಖರ ಅಕ್ಕಿ ಅವರು ಹಿರಿಯರಾಗಿದ್ದು, ಕಸಾಪ ಅಧ್ಯಕ್ಷರು ಮಾಡುತ್ತಿರುವ ತಪ್ಪುಗಳನ್ನು ತಿದ್ದುಯ ಕಾರ್ಯವನ್ನು ಮಾಡುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಆಮಂತ್ರಣ ಪತ್ರಿಕೆಯಲ್ಲಿ ಸಾಹಿತಿಗಳ ಕನ್ನಡಪರ ಹೋರಾಟಗಾರರ ಹೆಸರುಗಳನ್ನು ಹಾಕದೇ ಒಬ್ಬ ವ್ಯಕ್ತಿ ಕಸಾಪ ಅಧ್ಯಕ್ಷರನ್ನು ತಮ್ಮ ಕಪಿಮುಷ್ಠಿ ಯಲ್ಲಿಟ್ಟು ಕೊಂಡು ತಮಗೆ ಬೇಕಾದವರ ಹೆಸರುಗಳನ್ನು ಮಾತ್ರ ಹಾಕಿಸಿದ್ದು, ಇದನ್ನು ನೋಡಿಯೂ ಅಧ್ಯಕ್ಷ ಮಹಾಂತೇಶ ತಾಂವಶಿ ಸುಮ್ಮನಿದ್ದಾರೆ ಎಂದರೆ ಇವರ ನಡುವಿನ ನಿಗೂಢತೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ಕಸಾಪ ಸಂಘಟನಾ ಕಾರ್ಯದರ್ಶಿ ರಾಜೇಶ್ವರಿ ವಡೇಯರ ಮಾತನಾಡಿ, ಕಳೆದೆರಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ. ಸಾಹಿತ್ಯ ಸಮ್ಮೇಳನದ ಲೇಕ್ಕ ಪತ್ರಗಳನ್ನು ಸಭೆಯಲ್ಲಿ ಪ್ರಶ್ನಿಸಿದಾಗ ನನ್ನನ್ನು ಅವಮಾನಿಸಲಾಗಿದೆ ಎಂದು ದೂರಿದರು.
ಕನ್ನಡ ಸಾಹಿತ್ಯ ಪರಿಷತ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದ್ದೇನೆ . ಸೋಮವಾರದಂದು ಕಸಾಪದಿಂದ ಕರೆದ ಪತ್ರಿಕಾಗೋಷ್ಠಿಗೂ ನನ್ನನ್ನು ಕರೆಯಲಿಲ್ಲ. ಹಾಗೇಯೆ ಎಲ್ಲ ಪತ್ರಕರ್ತರನ್ನು ಅಹ್ವಾನಿಸಿಲ್ಲ. ಅಲ್ಲದೇ ಸಮ್ಮೇಳನದ ಪೂರ್ವಭಾವಿ ಸಭೆಗೆ ಹಾಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವರನ್ನು ಕರೆಯದೆ ತಮಗೆ ಬೇಕಾದವರನ್ನು ಹಾಗೂ ಒಂದಿಬ್ಬರು ಪತ್ರಕರ್ತರನ್ನು ಕರೆದು ಸಭೆಗಳು ಮತ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಹೀಗಾದರೆ ಕನ್ನಡ ಸಾಹಿತ್ಯ ಪರಿಷತ್ ಸಂಘಟನೆ ಹೇಗೆ ಆಗುವದು ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಬಸವರಾಜ ಕುರೇರ ಇದ್ದರು

Related posts: