RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಬೆಟ್ಟಿಂಗ್ ಮಾಫಿಯಾ ಹೆಡೆಮುರಿ ಕಟ್ಟಲು ವಿಶೇಷ ತಂಡ ರಚನೆಗೆ ಎಸ್.ಪಿ ನಿಂಬರಗಿ ಪ್ಲಾನ್

ಗೋಕಾಕ :ಬೆಟ್ಟಿಂಗ್ ಮಾಫಿಯಾ ಹೆಡೆಮುರಿ ಕಟ್ಟಲು ವಿಶೇಷ ತಂಡ ರಚನೆಗೆ ಎಸ್.ಪಿ ನಿಂಬರಗಿ ಪ್ಲಾನ್ 

ಬೆಟ್ಟಿಂಗ್ ಮಾಫಿಯಾ  ಹೆಡೆಮುರಿ ಕಟ್ಟಲು ವಿಶೇಷ ತಂಡ ರಚನೆಗೆ ಎಸ್.ಪಿ ನಿಂಬರಗಿ ಪ್ಲಾನ್

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 24 : 

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸದ್ಧು ಮಾಡಿರುವ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳನ್ನು ಕಂಬಿ ಎಣಿಸಲು ಕಳುಹಿಸಲು ಜಿಲ್ಲಾ ಪೊಲೀಸರು ಸನ್ನದ್ಧರಾಗಿದ್ದು, ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಹಾಗೂ ಸ್ಥಳೀಯ ಪೊಲೀಸ ಅಧಿಕಾರಿಗಳನ್ನೊಳಗೊಂಡ ತಂಡವನ್ಶು ರಚನೆ ಮಾಡಿ ಈ ದಂಧೆಯಲ್ಲಿ ತೊಡಗಿರುವ  ಬುಕ್ಕಿಗಳನ್ನು ಜೈಲಿಗೆ ಅಟ್ಟಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಎಲ್ಲ ರೀತಿಯ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ .

ಕಳೆದ ಹಲವು ವರ್ಷಗಳ ಹಿಂದೆ ಅಂದಿನ ಬೆಳಗಾವಿ  ಎಸ್.ಪಿ ಯಾಗಿದ್ದ  ಸಂದೀಪ್ ಪಾಟೀಲ ಅವರು ಗೋಕಾಕ ನಗರದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು   ವ್ಯವಸ್ಥಿತವಾಗಿ ಮಟ್ಟಹಾಕಿದ್ದರ  ಪರಿಣಾಮ ಗೋಕಾಕದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾ ಕೆಲ ವರ್ಷಗಳಿಂದ ಸುದ್ದು ಮಾಡಿರಲಿಲ್ಲ ಆದರೆ ಇತ್ತೀಚಿನ ನಾಲ್ಕೆದು ವರ್ಷಗಳಿಂದ ಮತ್ತೆ ತಮ್ಮ ಬಾಲ ಬಿಚ್ಚಿರುವ ನಗರದ ಖತರನಾಕ ಬುಕ್ಕಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತಮ್ಮ ಕರಾಮತ್ತು ತೊರಿಸ  ತೊಡಗಿದ್ದಾರೆ.

ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯ ಬಗ್ಗೆ ಕಳೆದ ಒಂದು ವಾರದಿಂದ ದಿನಪತ್ರಿಕೆಯೊಂದರಲ್ಲಿ ಸರಣಿ ವರದಿಗಳು ಪ್ರಕಟಗೊಳ್ಳುತ್ತಿರುವುದನ್ನು ಗಮನಿಸಿರುವ ಪೊಲೀಸರು ಎಚ್ಚೆತ್ತುಕೊಂಡು ಈಗ ಈ ದಂಧೆಯಲ್ಲಿ ತೊಡಗಿರುವರನ್ನು ಮಟ್ಟಹಾಕಲು ಸರ್ವ ರೀತಿಯ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಟ್ಟಿ ವೀರರು ಇವರು :  ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಗೋಕಾಕನ ಬುಕ್ಕಿಗಳ ಹತ್ತಿರ ಕೋಟಿ, ಕೋಟಿ ಕಾಂಚನ ಸದ್ದು ಮಾಡುತ್ತಿದ್ದೆ ಎಂದು ಹೇಳಲಾಗುತ್ತಿದ್ದು, ಬುಕ್ಕಿಗಳು ನಗರದಲ್ಲಿ ಕೋಟಿ ಕೋಟಿ ಹಣ ಖರ್ಚುಮಾಡಿ ಮನೆಗಳನ್ನು ಕಟ್ಟಿಸಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ಮನೆ ಕಟ್ಟಬೇಕಾದರೆ ಹರ ಸಾಹಾಸ ಪಡುತ್ತಿರುವ ಈ ಸದ್ಯದ ಪರಿಸ್ಥಿತಿಯಲ್ಲಿ ಚಪ್ಪಲ ಅಂಗಡಿ,  ,ಸ್ಯ್ನಾಕ್ಸ ಅಂಗಡಿ, ಸ್ಟೇಷನರಿ ಅಂಗಡಿ ಸೇರಿದಂತೆ ಇತ್ಯಾದಿ ಅಂಗಡಿಗಳನ್ನು ತೆಗೆದು ಕೋಟಿ ಗಟ್ಟಲೆ ಆದಾಯ ಗಳಿಸಿ ಮನೆಗಳನು ಕಟ್ಟುವುದು ಅಸಾಧ್ಯದ ಮಾತು ಆದರೆ ಇಲ್ಲಿ ಬೆಟ್ಟಿಂಗ್ ಮಾಫಿಯಾದಲ್ಲಿ ತೊಡಗಿರುವವರು ಕೋಟಿ ಕೋಟಿ ಹಣ ವ್ಯಯಿಸಿ ಮನೆಗಳನ್ನು ಕಟ್ಟಿಸಿದ್ದು ಎಲ್ಲರ ಕಂಗ್ಗಣಿಗೆ ಗುರಿಯಾಗಿದ್ದಾರೆ.

ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಗಣಿಸಿರುವ ಗೋಕಾಕ ಹಾಗೂ ಜಿಲ್ಲಾ ಪೊಲೀಸರು ಈ ದಂಧೆಯಲ್ಲಿ ತೊಡಗಿರುವವರನ್ನು ಮಟ್ಟಹಾಕಲು ವ್ಯವಸ್ಥಿತವಾಗಿ ಪ್ಲಾನ್ ಮಾಡಿದ್ದು, ಎಸ್.ಪಿ ಲಕ್ಷ್ಮಣ ನಿಂಬರಗಿ ಅವರ ನೇತೃತ್ವದ ತಂಡ ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಸಾರ್ವಜನಿಕರು ಕಾಯುತ್ತಿದ್ದಾರೆ.

Related posts: