ಗೋಕಾಕ:ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲುಸುವ ಮೂಲಕ ಸಚಿವ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸೋಣ : ದಾವಲಸಾಬ ಚಪ್ಪಿ
ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲುಸುವ ಮೂಲಕ ಸಚಿವ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸೋಣ : ದಾವಲಸಾಬ ಚಪ್ಪಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 26 :
ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲುಸುವ ಮೂಲಕ ಸಚಿವ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸೋಣ ಎಂದು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಾವಲಸಾಬ ಚಪ್ಪಿ ಹೇಳಿದರು
ಶುಕ್ರವಾರದಂದು ನಗರದ ಸಚಿವರ ಕಾರ್ಯಾಲದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಘಟಕದಿಂದ ಗೋಕಾಕ ನಗರ , ಗ್ರಾಮೀಣ ಹಾಗೂ ಅರಭಾವಿ ಅಲ್ಪಸಂಖ್ಯಾತ ಮೋರ್ಚಾಗಳ ಪದಾಧಿಕಾರಿಗಳು , ಕಾರ್ಯಕರ್ತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತೀ ಶೀಘ್ರದಲ್ಲೇ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಲ್ಲಿದ್ದು, ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿಯ ಪರವಾಗಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾಗಳ ಪದಾಧಿಕಾರಿಗಳು ಹಗಳಿರುಳು ಶ್ರಮವಹಿಸಿ ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಅಂತರದಿಂದ ಗೆಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶಕ್ತಿ ತುಂಬಬೇಕು.
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ರೂಪಿಸಿದಂತಹ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಲು ಭೂತ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯಕರ್ತರ ಪಡೆಗಳನ್ನು ರಚಿಸಿಕೊಂಡು ಪಕ್ಷದ ಪರ ಪ್ರಚಾರ ಮಾಡಬೇಕೆಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಫೀ ಜಮಾದರ ಕಳೆದ 6 ಅವಧಿಗೆ ಅಲ್ಪಸಂಖ್ಯಾತ ಸಮುದಾಯದವರು ಸಚಿವ ರಮೇಶ ಜಾರಕಿಹೊಳಿ ಬೆನ್ನಿಗೆ ನಿಂತು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದಂತೆ ಈ ಬಾರಿ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗುವವರನ್ನು ಗೋಕಾಕ ಮತ್ತು ಅರಭಾವಿ ಭಾಗದ ಅಲ್ಪಸಂಖ್ಯಾತ ಸಮುದಾಯದವರು ಅತ್ಯಂತ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಲು ಫನ ತೊಟ್ಟು ಕಾರ್ಯಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಶಕೀಲ ಧಾರವಾಡಕರ, ಜಿಲ್ಲಾ ಮೋರ್ಚಾದ ಉಪಾಧ್ಯಕ್ಷ ಇಬ್ರಾಹಿಂ ಹುಣಚಾಳ,ನಗರ ಘಟಕದ ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕುತಬುದ್ದೀನ ಗೋಕಾಕ, ಹಿರಯ ನಗರಸಭೆ ಸದಸ್ಯ ಅಬ್ದುಲರಹಮಾನ್ ದೇಸಾಯಿ, ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷ ಮಲ್ಲಿಕಜಾನ ತಲವಾರ ,ಕಾರ್ಯದರ್ಶಿ ಅಬ್ಬಾಸ ದೇಸಾಯಿ, ಮುಖಂಡುರುಗಳಾದ ಜಾವೇದ ಗೋಕಾಕ, ಸುರೇಶ ಸನದಿ, ಲಾಲಸಾಬ ಜಗದಾಳ, ಇಕ್ಬಾಲ್ ಸರಕಾವಾಸ ಇದ್ದರು.
ಸಭೆಯನ್ನು ವಕೀಲರಾದ ಎಲ್.ಎಸ್.ಬಂಡಿ ನಿರೂಪಸಿ ವಂದಿಸಿದರು.