RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

ಗೋಕಾಕ:ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ 

ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 28 :

 
ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿಯ ಕರ್ನಾಟಕ ಸರಕಾರಿ ದಿನಗೂಲಿ ನೌಕರರ ಮಹಾಮಂಡಲ ಒಕ್ಕೂಟದವರು ರವಿವಾರದಂದು ನರಗದ ಸಚಿವರ ಕಾರ್ಯಾಲದಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಅರ್ಪಿಸಿದರು

ಕ್ಷೇಮಾಭಿವೃದ್ಧಿ ನೌಕರರಿಗೆ ರಾಜ್ಯ ಸರಕಾರದ ಕಾಯಂ ನೌಕರರಿಗೆ ಜಾರಿಗೊಳಿಸಿರುವ 6 ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು 2018 ರಲ್ಲಿ ಜಾರಿಗೆ ತಂದಿದ್ದು, ಅರ್ಹ ದಿನಗೂಲಿ ನೌಕರರಿಗೂ 2018 ರಿಂದಲೇ ಜಾರಿಯಾಗವಂತೆ ತಿದ್ದುಪಡೆ ತರಬೇಕು. ಅರ್ಹ ದಿನಗೂಲಿ ನೌಕರರಿಗೆ ಅಧಿನಿಯಮ 2012 ರ ನಿಯಮಗಳ ಮತ್ತು ಸುತ್ತೋಲೆಗಳ ಮೇರೆಗೆ ದೊರೆಯಬೇಕಾದ ಎಲ್ಲ ಸೌಲಭಗಳೂ ಈ ಅಧಿನಿಯಮ ಜಾರಿಗೆ ಬಂಧ ದಿನಾಂಕದಿಂದ ದೊರೆಯುವಂತೆ ಆದೇಶ ನೀಡಬೇಕು. ಅಧಿನಿಯಮ 2012 ರಲ್ಲಿತಂತೆ ಅರ್ಹ ದಿನಗೂಲಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯು ಪೂರ್ವಾನ್ವಯವಾಗುವಂತೆ ಜಾರಿಗೆ ತಂದು ದಿನಗೂಲಿ ನೌಕರರ ಬಾಳನ್ನು ಬೆಳಗಿಸಬೇಕಲ್ಲದೆ ಅರ್ಹ ದಿನಗೂಲಿ ನೌಕರರು ಬಳಸದೇ ಉಳಿದಿರುವ ಗಳಿಕೆ ರಜೆಯ ನಗದೀಕರಣ , ಅರ್ಹ ದಿನಗೂಲಿ ನೌಕರರಿಗೆ ಅನುಕಂಪದ ಆಧಾರದ ನೌಕರಿ ಸೌಲಭ್ಯ ವಿಸ್ತರಿಸುವುದರ ಜೊತೆಗೆ ಹಿಂದಿನ ದಿನಗೂಲಿ ಸೇವೆಗೆ ವೈಟೇಜ ಫಾರ ಸರ್ವಿಸ ಎಂದು ಮೂರು ವರ್ಷಕ್ಕೆ ಒಂದು ಇನ್ಕ್ರಿಮೆಂಟ್ ಕೊಟ್ಟು ಮೂಲವೇತನ ಫಿಕ್ಸ್ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ
ಈ ಸಂದರ್ಭದಲ್ಲಿ ಮಹಾಮಂಡಲದ ತಾಲೂಕಾ ಅಧ್ಯಕ್ಷ ಐ.ಎಂ ಸನದಿ, ಉಪಾಧ್ಯಕ್ಷ ಬಸವರಾಜ ಪ್ರಭುನಟ್ಟಿ, ಕಾರ್ಯದರ್ಶಿ ಎಲ್.ವಾಯ್.ಪವಾರ, ಪದಾಧಿಕಾರಿಗಳಾದ ಸಿದ್ರಾಮ ಪಾರನ್ನವರ, ಕೆಂಪಯ್ಯ ಪಕ್ಕೆನ್ನವರ , ಬಸವರಾಜ ಶಿಂಧಿಕುರಬೇಟ , ಕಾಸಿಮಸಾಬ ಮುಲ್ಲಾ, ಅಡಿವೇಶ ನಿರ್ವಾಣಿ ಇದ್ದರು.

Related posts: