ಖಾನಾಪುರ:ತಾಲೂಕಿನ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ:ನಾಶೀರ ಬಾಗವಾನ
ತಾಲೂಕಿನ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ:ನಾಶೀರ ಬಾಗವಾನ
ಖಾನಾಪುರ ಸೆ 10: ಮಲೆನಾಡಿನ ಸೆರಗಿನಲ್ಲಿರುವ ನಮ್ಮ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿದೆ. ಇಲ್ಲಿ ತಾಲೂಕಿನಾದ್ಯಂತ ಹಲವು ಕ್ರೀಡಾಪಟುಗಳು ಗ್ರಾಮೀಣ ಕ್ರಿಡೆಗಳಾದ ಕಬ್ಬಡ್ಡಿ, ಶರ್ಯತ್ತು ಇನ್ನಿತರೆ ಆಟಗಳನ್ನು ಆಯೋಜಿಸಿ ಮನರಂಜನೆ ಮಾಡುವುದಷ್ಟಲ್ಲದೆ, ಗ್ರಾಮೀಣ ಕ್ರೀಡಾಪಟುಗಳಲ್ಲಿರುವ ಪ್ರತಿಭೆಯನ್ನು ಜನರ ಮುಂದೆ ತರಲು ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆಂದು ಕೊಡುಗೈ ದಾನಿಗಳಾದ ನಾಶೀರ ಅಣ್ಣಾ ಬಾಗವಾನ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದ ವಾಲ್ಮೀಕಿನಗರದಲ್ಲಿ ಆಯೋಜಿಸಿದ ಹೊನಲು ಬೆಳಕಿನ ಒಪನ್ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ನಮ್ಮ ನಾಡು ಕ್ರಾಂತಿವಿರ ಸಂಗೋಳ್ಳಿ ರಾಯಣ್ಣನ ನಾಡು, ಇಲ್ಲಿ ಹುಟ್ಟಿದ ಎಲ್ಲ ಯುವಕರು ರಾಯಣ್ಣನ ಹಾಗೇ ಘರ್ಜಿಸಬೇಕು. ಸತತ ಕಳೆದ 16ವರ್ಷಗಳಿಂದ ಇಡೀ ತಾಲೂಕಿನಾದ್ಯಂತ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ನನ್ನ ತನು-ಮನ-ಧನ ದಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತಿದ್ದೆನೆ. ಏಕೆಂದರೆ ನಮ್ಮ ತಾಲೂಕಿನ ಕ್ರೀಡಾಪಟುಗಲು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಿ ತಾಲೂಕಿನ ಕಿರ್ತಿ ಪತಾಕೆಯನ್ನು ಎತ್ತರಮಟ್ಟಕ್ಕೆ ಕೊಂಡೋಯ್ಯುವಂತಾಗಲಿ. ತಾಲೂಕಿನ ಕ್ರೀಡಾಪಟುಗಳಿಗೆ ಏನಾದರೂ ಸಹಾಯ ಬೇಕೆಂದರೆ ನೇರವಾಗಿ ನನ್ನ ಬಳಿ ಬಂದು ಸಹಾಯ ಪಡೆಯಬಹುದು.
ಲಿಂಗನಮಠ ಗ್ರಾಮದ ವಾಲ್ಮೀಕಿನಗರದಲ್ಲಿ ಆಯೋಜಿಸಿದ ಹೊನಲು ಬೆಳಕಿನ ಒಪನ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಲಿಂಗನಮಠ, ಕಕ್ಕೇರಿ, ಭುರಣಕಿ, ಮಾಸ್ಕೇನಟ್ಟಿ, ಮಂಗಳವಾಡ, ಬೀಡಿ, ಬೈಲೂರ, ಹಳಿಯಾಳ, ಬಿದ್ರೋಳ್ಳಿ, ಬೆಣಚಿ, ಹೊನ್ನಾಪೂರ, ಸಾಗರ, ಅಂಬೋಳ್ಳಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಿಂದ ಒಟ್ಟು 24ತಂಡಗಳು ಭಾಗವಹಿಸಿದ್ದವು.
ಈ ಪಂದ್ಯಾವಳಿಯಲ್ಲಿ ಮಂಗಳವಾಡ ಗ್ರಾಮದ ತಂಡ ಪ್ರಥಮ ಸ್ಥಾನ ಪಡೆದು 10001/-ರೂ. ಬಹುಮಾನ ತನ್ನದಾಗಿಸಿಕೊಂಡಿತು.
ಬೀಡಿ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದು 5001/- ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಬೆಣಚಿ ಗ್ರಾಮದ ತಂಡ ತೃತೀಯ ಸ್ಥಾನ ಪಡೆದು 2001/- ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಈ ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ರವೀ ಮೇದಾರ, ಮಹಾಂತೇಶ ಸಂಪಗಾವಿ, ಮಂಜುನಾಥ ಪಾಟೀಲ, ಆನಂದ ಪಾಟೀಲ, ಪ್ರಕಾಶ ಮುಗಳಿಹಾಳ ಕಾರ್ಯ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ನಾಸೀರ ಬಾಗವಾನ, ಗ್ರಾಪಂ ಅಧ್ಯಕ್ಷ ಡಾ-ಕೆ.ಬಿ.ಹಿರೇಮಠ, ಯುವ ನಾಯಕ ರಮೀಜ ಬಾಗವಾನ, ಬಸವರಾಜ ಮುಗಳಿಹಾಳ, ಗಫಾರಸಾಬ ಕಟ್ಟಿಮನಿ, ಎಮ್.ಎಮ್.ಸಾಹುಕಾರ, ಭಿಮಪ್ಪಾ ನಾಯಕ, ವಾಲ್ಮೀಕಿ ಸಂಘದ ಅಧ್ಯಕ್ಷ ಬಸವರಾಜ ನಾಯಕ, ರಾಜು ರಪಾಟಿ, ಶಾಮೀರ ಹಟ್ಟಿಹೊಳಿ, ಮಹಾಂತೇಶ ಪಾಟೀಲ, ಸಂಘದ ಸರ್ವ ಸದಸ್ಯರು, ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.
ಕಾರ್ಯಕ್ರವನ್ನು ನಾಶೀರ ಅಣ್ಣಾ ಬಾಗವಾನ ಅಭಿಮಾನಿ ಬಳಗದ ಅಧ್ಯಕ್ಷ ಪಾಂಡುರಂಗ ಮಿಟಗಾರ ನಿರೂಪಿಸಿದರು. ಪತ್ರಕರ್ತರಾದ ಕಾಶೀಮ ಹಟ್ಟಿಹೋಳಿ ಸ್ವಾಗತಿಸಿ, ವಂದಿಸಿದರು.