RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಸಮಸ್ಯೆಗಳು ಸಾವಿರ ಇದ್ದರು ಮನುಷ್ಯನಲ್ಲಿ ಅದರ ಪರಿಹಾರಗಳು ಇವೆ : ರವಿ ಡಿ ಚನ್ನಣವರ ಅಭಿಮತ

ಗೋಕಾಕ:ಸಮಸ್ಯೆಗಳು ಸಾವಿರ ಇದ್ದರು ಮನುಷ್ಯನಲ್ಲಿ ಅದರ ಪರಿಹಾರಗಳು ಇವೆ : ರವಿ ಡಿ ಚನ್ನಣವರ ಅಭಿಮತ 

ಸಮಸ್ಯೆಗಳು ಸಾವಿರ ಇದ್ದರು ಮನುಷ್ಯನಲ್ಲಿ ಅದರ ಪರಿಹಾರಗಳು ಇವೆ : ರವಿ ಡಿ ಚನ್ನಣವರ ಅಭಿಮತ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 1 :

 
ಖಿನ್ನತೆಗೆ ಒಳಗಾಗಿದ್ದಾನೆ ಎಂದರೆ ಅವನು ಯುವಕನೇ ಅಲ್ಲ. ಸಮಸ್ಯೆಗಳು ಸಾವಿರ ಇದ್ದರು ಮನುಷ್ಯನಲ್ಲಿ ಅದರ ಪರಿಹಾರಗಳು ಇವೆ. ನಮ್ಮಲ್ಲಿರುವ ಬಲ, ಶಕ್ತಿಯನ್ನು ನಂಬಿ ನಾವು ಬದುಕಬೇಕು. ಅಂದಾಗ ಯಾವುದೇ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣವರ ಹೇಳಿದರು .

ಸೋಮವಾರದಂದು ನಗರದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದಲ್ಲಿ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು .

ಸಮಸ್ಯೆಯ ಹಿಂದಿನ ಕಾರಣವನ್ನು ಹುಡಿಕಿ ಅದಕ್ಕೆ ಪರಿಹಾರ ಕಲ್ಪಿಸುವ ಕಡೆಗೆ ನಾವು ಮನಸ್ಸು ಮಾಡಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲ ಹಂತಗಳನ್ನು ದಾಟಲೇ ಬೇಕು ಆ ಸತ್ಯವನ್ನು ಅರಿತು ಬದುಕಿದರೆ ನಾವು ಅಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದು ಚನ್ನಣವರ ಹೇಳಿದರು

ಪಠ್ಯ ಪುಸ್ತಕಗಳ ಜೊತೆಗೆ ವರ್ಷಕ್ಕೆ ಏನಿಲ್ಲವೆಂದರೂ ಕನಿಷ್ಠ 10 ಪುಸ್ತಕಗಳನ್ನು ಓದಿ ಅದನ್ನು ಮನನ ಮಾಡಲು ಪ್ರಯತ್ನಿಸಬೇಕು ಹೀಗೆ ಮಾಡಿದರೆ ಸಾಧನೆ ಮಾಡಲು ನಿಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ.

ಪೊಲೀಸ ಇಲಾಖೆಗೆ ಹೆದರದೆ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಹೋಗಿ ಎಫ್ ಐ ಆರ್ ಎಂದರೇನು, ಗನ್ ಎಂದರೇನು, ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸೇರಿದಂತೆ ಪೊಲೀಸ ಇಲಾಖೆ ಬಗ್ಗೆ ತಿಳಿದುಕೊಳ್ಳಲು ಮುಂದಾಗಬೇಕು ಎಂದು ರವಿ ಅವರು ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಇಂದಿನಿಂದಲ್ಲಾ ಬಹಳ ವರ್ಷಗಳಿಂದ ಹಿಂತಹ ಪ್ರಕರಣಗಳು ನಡೆಯುತ್ತಿದೆ. ನಮ್ಮವರೇ ನಮ್ಮನ್ನು ಮೋಸ ಮಾಡುಲು ಹೊಂಚು ಹಾಕಿದಾಗ ಸಮಾಜದಲ್ಲಿ ಅಹಿತಕರ ಘಟನೆಗಳು ಜರುಗುತ್ತವೆ ವಿದ್ಯಾರ್ಥಿಗಳು ಇದಕ್ಕೆ ಹೆಚ್ಚಿನ ತಲೆ ಕೆಡಿಸಬೇಕಾಗಿಲ್ಲ. ಹಿಂತಹ ವ್ಯವಸ್ಥೆಯನ್ನು ದಾಟಿ ವಿದ್ಯಾರ್ಥಿಗಳು ಮುಂದೆ ಸಾಗಬೇಕು. ವಿದ್ಯಾರ್ಥಿಗಳು ಪರೀಕ್ಷೆಗಳ ಸಮಯದಲ್ಲಿ ಇಂತಹ ಕಷ್ಟಕರ ಸಂಗತಿಗಳು ಎದುರಾದರೆ ನಮಗೆ ಇನ್ನೂ ಹೆಚ್ಚಿನ ಸಮಯ ಸಿಕ್ಕಿತು ಎಂದು ಭಾವಿಸಿ ಹೆಚ್ಚು ಓದಬೇಕು . ಸರಕಾರ ಇಂತಹ ಪ್ರಕಣಗಳನ್ನು ಗಂಭೀರವಾಗಿ ಪರಿಗಣಿಸಿ ತುಂಬಾ ಕಠಿಣ ಕ್ರಮವನ್ನು ಕೈಗೊಳ್ಳಲು ಕಾನೂನು ರೂಪಿಸಿದೆ ಎಂದರು.

: ಪೊಲೀಸ ಅಧಿಕಾರಿಯ ವೇಷದಲ್ಲಿ ಬಂದಿದ್ದ ಮಗುವನ್ನು ಎತ್ತಿ ಪ್ರೀತಿಸುತ್ತಿರುವ ರವಿ ಡಿ ಚನ್ನಣವರ

ಯುಪಿಎಸ್ಸಿ ಪರೀಕ್ಷಗಳನ್ನು ಉತ್ತರ ಕರ್ನಾಟಕದದವರು ಗಂಭೀರವಾಗಿ ತಗೆದುಕೊಳ್ಳುತ್ತಿಲ್ಲ ಆದ್ದರಿಂದ ಉತ್ತರ ಕರ್ನಾಟಕದಿಂದ ಐಎಎಸ್ , ಐಪಿಎಸ್ ನಲ್ಲಿ ಹೆಚ್ಚಿನ ಸಾಧನೆ ಯಾಗುತ್ತಿಲ್ಲ. ಧೀಘ ಕಾಲದ ತಯಾರಿ ಮಾಡಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಯತ್ನ ಮಾಡದಿರುವುದರಿಂದ ದೊಡ್ಡ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಎಲ್ಲ ವಿದ್ಯಾರ್ಥಿಗಳು ಪೊಲೀಸ ಐಪಿಎಸ್ ಅಧಿಕಾರಿ ರವಿ ಚನ್ನಣವರ ಜೊತೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳನ್ನು ಕೇಳಿ ರವಿ ಚನ್ನಣವರ ಅವರಿಂದ ಪ್ರೇರಣಾದಾಯಕ ಉತ್ತರಗಳನ್ನು ಪಡೆದುಕೊಂಡರು

ಮಗುವನ್ನು ಎತ್ತುಕೊಂಡು ಮುದ್ದಾಡಿಸಿದ ರವಿ : ಸಂವಾದ ನಡೆದ ಸಂದರ್ಭದಲ್ಲಿ ಪೊಲೀಸ ಅಧಿಕಾರಿಯ ವೇಷದಲ್ಲಿ ಬಂದಿದ್ದ ಮಗುವನ್ನು ಗಮನಿಸಿದ ರವಿ ಡಿ ಚನ್ನಣವರ ಅವರು ಮಗುವನ್ನು ಎತ್ತುಕೊಂಡು ಪ್ರೀತಿಯಿಂದ ಮಾತನಾಡಿಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಪ್ರತಿನಿಧಿ ಹರೀಶ ವನ್ನಳ್ಳಿ ನಿರೂಪಿಸಿ ವಂದಿಸಿದರು
ಈ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು

Related posts: