RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಎಲ್ಲ ಸಮಸ್ಯೆಗಳಿಗೆ ಆಧ್ಯಾತ್ಮಿಕದಲ್ಲಿ ಪರಿಹಾರ ವಿದೆ : ಆರ್ಟ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿ ಶಂಕರ ಗುರುಜೀ

ಗೋಕಾಕ:ಎಲ್ಲ ಸಮಸ್ಯೆಗಳಿಗೆ ಆಧ್ಯಾತ್ಮಿಕದಲ್ಲಿ ಪರಿಹಾರ ವಿದೆ : ಆರ್ಟ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿ ಶಂಕರ ಗುರುಜೀ 

ಎಲ್ಲ ಸಮಸ್ಯೆಗಳಿಗೆ ಆಧ್ಯಾತ್ಮಿಕದಲ್ಲಿ ಪರಿಹಾರ ವಿದೆ : ಆರ್ಟ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿ ಶಂಕರ ಗುರುಜೀ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 2 :

 

ಎಲ್ಲ ಸಮಸ್ಯೆಗಳಿಗೆ ಆಧ್ಯಾತ್ಮಿಕದಲ್ಲಿ ಪರಿಹಾರ ವಿದ್ದು, ಆಧ್ಯಾತ್ಮಿಕ ಮನೋಭಾವವನ್ನು ಬೆಳಿಸಿಕೊಳ್ಳುವಂತೆ ಆರ್ಟ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿ ಶಂಕರ ಗುರುಜೀ ಹೇಳಿದರು

ಮಂಗಳವಾರದಂದು ನಗರದ ಶೂನ್ಯ ಸಂಪಾದನ ಮಠದ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ 16 ನೇ ಶರಣ ಸಂಸ್ಕೃತಿ ಉತ್ಸವದ ಕಾಯಕಶ್ರೀ ಪ್ರಶಸ್ತಿ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶವನ್ನು ನೀಡುತ್ತಾ ಅವರು ಮಾತನಾಡುತ್ತಾ ಇಂದಿನ ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕ ಹಾಗೂ ಯೋಗದ ಮೂಲಕ ನೇಮದಿಯನ್ನು ಪಡೆಯುದರರೊಂದಿಗ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಅನಿವಾರ್ಯ ಕಾರಣಗಳಿಂದಾಗಿ ಕಾಯಕಶ್ರೀ ಪ್ರಶಸ್ತಿ ಸಮಾರಂಭಕ್ಕೆ ಬರಲು ಆಗದ ಕಾರಣ ಗೋಕಾಕ ಜನತೆಗೆ ಹಾಗೂ ಶ್ರೀ ಮಠದ ಪೂಜ್ಯರಲ್ಲಿ ಕ್ಷಮೆಯಾಚಿಸಿ ಮುಂಬರುವ ದಿನಗಳಲ್ಲಿ ಗೋಕಾಕ ನಗರಕ್ಕೆ ಆಗಮಿಸಿ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸುತ್ತೇನೆಂದು ಶ್ರೀ ಶ್ರೀ ಶ್ರೀ ರವಿ ಶಂಕರ ಗುರುಜಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿ ಶರಣ ಸಂಸ್ಕೃತಿ ಉತ್ಸವಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಮತ್ತು ದಾಸೋಹ ಮೂರ್ತಿಗಳಾದ ಅನೀಲ ಪಟ್ಟೇದ, ಡಾ: ವಿಶ್ವನಾಥ ಶಿಂಧೋಳಿಮಠ ಅವರನ್ನು ಗೌರವಿಸಿ,ಸನ್ಮಾನಿಸಲಾಯಿತು.ಧಾರವಾಡದ ಅಲ್ಲಮವಚನಾಮೃತದ ರತಿಕಾ ನೃತ್ಯ ನಿಕೇತನ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಭಾವಿಮಠದ ಶ್ರೀ ಸಿದ್ಧಸಂಸ್ಥಾನಮಠದ ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಯೋಜಕ ವಿನಯ ಭಾರದ್ವಾಜ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿನಿಧಿ ಸ್ವಾಮಿ ಶರಣು ಬೆಂಗಳೂರಿನ ಬೋಸ್ಚ್ ಪ್ರಧಾನ ವ್ಯವಸ್ಥಾಪಕ ಬಿ.ವಿ.ನವೀನ ಇದ್ದರು.

ಎಸ್.ಕೆ.ಮಠದ ಸ್ವಾಗತಿಸಿ, ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.

Related posts: