ಗೋಕಾಕ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ : ಸಚಿವ ಜಾರಕಿಹೊಳಿ ಸ್ವಷ್ಟನೆ
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ : ಸಚಿವ ಜಾರಕಿಹೊಳಿ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 2 :
ಮಾಧ್ಯಮಗಳಿಗೆ ಭೀತ್ತರವಾಗಿದ್ದನ್ನು ಕೇಳಿ ನನಗೆ ಶಾಕ್ ಆಗಿದೆ . ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಇದರ ಬಗ್ಗೆ ಸಂಪೂರ್ಣ ತನಿಖೆಯಾಗಿಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು
ಸಚಿವ ರಮೇಶ ಜಾರಕಿಹೊಳಿ ಬಗ್ಗೆ ಮಾಧ್ಯಮಗಳಲ್ಲಿ ಭೀತ್ತರವಾಗುತ್ತಿರುವ ಸುದ್ದಿ ಬಳಿಕ ಖಾಸಗಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಅವರು ಸಿಡಿ ಬಗ್ಗೆ ಹಾಗೂ ಯುವತಿಯ ಬಗ್ಗೆ ನನಗೆ ಏನು ಗೋತ್ತಿಲ್ಲಾ ನಮ್ಮ ಕುಟುಂಬ ಹೆಮ್ಮರವಾಗಿ ಬೆಳೆದಿದೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ ನನ್ನಿಂದ ತಪ್ಪಾಗಿದ್ದರೆ ತನಿಖೆಯಾಗಿ ತಪ್ಪಿದ್ದರೆ ಯಾವುದೇ ಕ್ರಮ ತಗೆದುಕೊಳ್ಳಲಿ ಎಂದಿರುವ ಅವರು ನಾನು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತನಾಡುತ್ತೇನೇ ಎಂದು ಹೇಳಿದರು .
ವಿರೋಧಿಗಳ ಬಗ್ಗೆ ನಾನು ಮಾತನಾಡುವದಿಲ್ಲ , ಕಾನೂನು ತಜ್ಞರೊಂದಿಗೆ ಮಾತನಾಡಿ ಮುಂದೆ ಹೇಳುತ್ತೇನೆ ಕಳೆದ ಉಪ ಚುನಾವಣೆಯಲ್ಲಿ ಇಂತಹದ್ದೆ ಷಡ್ಯಂತ್ರ ಮಾಡಿದ್ದರು ಈಗ ಬೆಳಗಾವಿ ಲೋಕಸಭಾ ಉಪ ಚುನಾವಣೆ ಬಂದಿದ್ದು ಮತ್ತೆ ನನ್ನ ಹೆಸರು ಕೆಡಿಸುವ ವ್ಯವಸ್ಥಿತ ಷಡ್ಯಂತ್ರ ಇದ್ದು. ಆಗ ಜನರು ಅದಕ್ಕೆ ಸೂಕ್ತ ಉತ್ತರ ನೀಡಿದ್ದಾರೆ. ಈಗಲೂ ಸಹ ಜನರು ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಇದೊಂದು ರಾಜಕೀಯ ಗಿಮಿಕ್ ಆಗಿದೆ ಎಂದು ಸಚಿವರು ಸ್ವಷ್ಟನೆ ನೀಡಿದರು.