ಗೋಕಾಕ:ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ : ಐಪಿಎಸ್ ಅಧಿಕಾರಿ ಡಿ.ರೂಪಾ
ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ : ಐಪಿಎಸ್ ಅಧಿಕಾರಿ ಡಿ.ರೂಪಾ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :
ಮೌಲ್ಯಗಳನ್ನುವರ್ದಿಸಿ, ವಚನಗಳ ಆಚರಣೆಯಿಂದ ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕದ ಮೊದಲ ಐಪಿಎಸ್ ಅಧಿಕಾರಿ ಹೇಳಿದರು
ಬುಧವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಿಂಗ ಬೇದ ಮಾಡದೆ ಮಹಿಳೆಯರಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸಿದರೆ ಸಮಾಜದ ಅಭಿವೃದ್ಧಿಗೆ ಸಹಕಾರಿ ಯಾಗುತ್ತದೆ.
ವಿದ್ಯಾರ್ಥಿಗಳು ಸಾಧನೆಗೆ ಬಡತನ ಹಾಗೂ ಗ್ರಾಮೀಣ ಭಾಗ ತೊಡಕಾಗದು. ಸಾಧನೆಯ ಛಲ ಬೇಕು .ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ರೀತಿಯ ಮಾಹಿತಿ ದೊರೆಯುತ್ತಿದ್ದು, ಅದರ ಸದುಪಯೋಗದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಶರಣ ಸಂಸ್ಕೃತಿ ನಮ್ಮ ನಾಡಿನ ಹೆಮ್ಮೆ ಇದು ಕರ್ನಾಟಕ ಬಿಟ್ಟು ಬೇರೆ ಕಡೆ ಕಂಡು ಬರುವುದಿಲ್ಲ,
ಮೂಢನಂಬಿಕೆ ಹೋಗಲಾಡಿಸುವಲ್ಲಿ ಶರಣ ಸಂಸ್ಕೃತಿ ಬಹುದೊಡ್ಡ ಪಾತ್ರ ಹೊಂದಿದ್ದೆ . ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು , ವ್ಯವಸ್ಥೆಯನ್ನು ನಾವು ದೊಸಿಸುತ್ತೇವೆ. ವ್ಯವಸ್ಥೆಯನ್ನು ದೊಸಿಸುವ ಬದಲು ಅದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಕಾರ್ಯಮಾಡಬೇಕು ಅಂದಾಗ ಮಾತ್ರ ಇದನ್ನು ತಡೆಯಲು ಸಾಧ್ಯ. ಮಕ್ಕಳನ್ನು ಕಷ್ಟ ಗೋತ್ತಾಗಬಾರದು ಎಂದು ನಾವು ಬೆಳೆಸುತ್ತವೆ. ಅವರಿಗೆ ಎಲ್ಲ ತಿಳಿಸುವ ಕಾರ್ಯ ಪೋಷಕರಿಂದ ಆಗಬೇಕು. ಮನುಷ್ಯನ ಆಸೆಗಳು ನಿಲ್ಲುವುದಿಲ್ಲ, ಇದರ ಬೆನ್ನತ್ತಿ ನಾವು ನಮ್ಮ ಮನಸ್ಸಿಗೆ ಬೇಕಾದ್ದದನ್ನು ಕೊಡುವುದಿಲ್ಲ. ಇದನ್ನು ನೀಡುವ ಶಕ್ತಿ ಆಧ್ಯಾತ್ಮಕ್ಕೆ ಇದೆ. ಮಕ್ಕಳನ್ನು ಆಧ್ಯಾತ್ಮಿಕವಾಗಿ ಬೆಳಸಲು ಮುಂದೆ ಬರಬೇಕು. ಜೀವನದಲ್ಲಿ ಏನೇನಾಗಬೇಕು ಅದು ಎಲ್ಲ ಆಗೇ ಆಗುತ್ತೇ ಆದರೆ ಅದನ್ನು ನಂಬಿ ಸುಮ್ಮನೆ ಕೂಡಬಾರದು. ನಾವು ಪ್ರಯತ್ನ ಶೀಲರಾಗಿ ಕಾರ್ಯಮಾಡಬೇಕು.
ತೊಂದರೆಗಳು ಕಷ್ಟಗಳು ಬರಬಹುದು ಅದು ಕೊನೆಯಲ್ಲ, ಭಯಪಟ್ಟು ಜನರು ಮುಂದೆ ಹೋಗುವದಿಲ್ಲ ಅದನ್ನು ಮೆಟ್ಟಿ ನಿಲ್ಲುವನ್ನುದನ್ನು ಇಂದಿನ ಮಕ್ಕಳಿಗೆ ನಾವು ಕಲಿಸಬೇಕು.
ಜೀವನದಲ್ಲಿ ಕುಗ್ಗಿ ನಿರಾಶರಾಗದೆ. ನಮ್ಮ ಕರ್ತವ್ಯದ ಕಡೆ ಗಮನ ಹರಿಸಿ ಕೆಲಸ ಮಾಡಬೇಕು ಎಂದು ಡಿ.ರೂಪಾ ಹೇಳಿದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಪ್ಪಿನ ಬೆಟಗೇರಿ ಮೂರು ಸಾವಿರ ಮಠದ ಶ್ರೀ ಮ.ನಿ.ಪ್ರ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ವಹಿಸಿ ಆರ್ಶಿವಚನ ನೀಡಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಮತ್ತು ದಾಸೋಹ ಮೂರ್ತಿಗಳಾದ ಶ್ರೀಈ ವೀಣಾ ಹಿರೇಮಠ , ಶ್ರೀಮತಿ ಸುಸ್ಮಿತಾಕುಮಾರಿ ಶೆಟ್ಟಿ ಅವರನ್ನು ಗೌರವಿಸಿ,ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪರಮ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು , ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಡಾ. ಶೈಲಜಾ ತಮ್ಮಣ್ಣವರ , ಡಾ. ನೀತಾ ದೇಶಪಾಂಡೆ , ಶಕುಂತಲಾ ಕಟ್ಟಿ ಇದ್ದರು.
ಎಸ್.ಕೆ.ಮಠದ ಸ್ವಾಗತಿಸಿ, ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.