ಗೋಕಾಕ:ಓದು ಒಂದು ತಪ್ಪಸು ಎಂದು ತಿಳಿದು ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಏನೆಲ್ಲಾ ಸಾಧಿಸಿ ತೊರಿಸಲು ಸಾಧ್ಯ : ಐಪಿಎಸ್ ಅಧಿಕಾರಿ ಡಿ.ರೂಪಾ
ಓದು ಒಂದು ತಪ್ಪಸು ಎಂದು ತಿಳಿದು ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಏನೆಲ್ಲಾ ಸಾಧಿಸಿ ತೊರಿಸಲು ಸಾಧ್ಯ : ಐಪಿಎಸ್ ಅಧಿಕಾರಿ ಡಿ.ರೂಪಾ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :
ಓದು ಒಂದು ತಪ್ಪಸು ಎಂದು ತಿಳಿದು ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಏನೆಲ್ಲಾ ಸಾಧಿಸಿ ತೊರಿಸಲು ಸಾಧ್ಯ ಎಂದು ಕರ್ನಾಟಕದ ಮೊದಲ ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದರು
ಬುಧವಾರದಂದು ನಗರದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದಲ್ಲಿ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು .
ಸಾಧನೆ ಮಾಡಬೇಕೆಂಬ ಹಂಬಲ ವಿದ್ಯಾರ್ಥಿ ದಿಸೆಯಲ್ಲಿ ಇರಬೇಕು ನಿಟ್ಟಿನಲ್ಲಿ ನಾವು ಅಭ್ಯಾಸವನ್ನು ಮಾಡಬೇಕು..ಸಮಾನ್ಯ ಜ್ಞಾನ ಹೆಚ್ಚಿಸಲು ಮೊಬೈಲ್ ತಂತ್ರಜ್ಞಾನದ ಅನುಕೂಲ ಪಡೆದು ಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಗೆ ತಂತ್ರಜ್ಞಾನ ತುಂಬಾ ಸಹಕಾರಿ. ಮಾಯಾಲೋಕಕ್ಕೆ ಹೋದರೆ ಅದು ವಿದ್ಯಾರ್ಥಿಗಳಿಗೆ ಭಾದಕ ವಾಗುವುದಲ್ಲಿ ಎರೆಡುಮಾತ್ತಿಲ್ಲ
ಮಹಿಳೆಯರಿಗೆ ಇನ್ನೂ ಸಮಾನತೆ ಬರಬೇಕು. ಮಹಿಳೆಯನ್ನು ಅಬಲೆ ಎಂದು ಭಾವಿಸದೆ. ಅವಳನ್ನು ಗೌರವಿಸುವ ಕಾಲ ಬರುಬೇಕು ಎಂದ ಡಿ.ರೂಪಾ ಅವರು ಮಹಿಳೆ ತನ್ನ ನಿರ್ಧಾರಗಳನ್ನು ತಾನೆ ತಗೆದುಕೊಂಡು ಮುನ್ನುಗಿದ್ದರೆ ಸಾಧನೆಗೆ ಯಾವುದೇ ಅಡಿಯಾಗದು .ಇದಕ್ಕೆ ಎಷ್ಟೆ ಬಾರಿ ಪುರುಷರು ಸಹಕರಿಸುವುದಿಲ್ಲ, ಗಂಡ ಮತ್ತು ಹೆಂಡತಿ ಸೇರಿ ಕೆಲಸ ಮಾಡವ ಸಂದರ್ಭದಲ್ಲಿ ಗಂಡ ಇದ್ದ ಜಾಗದಲ್ಲಿ ಹೆಂಡತಿ ಹೋಗುವ ಹಾಗೆ ಹೆಂಡತಿ ಇದ್ದ ಜಾಗದಲ್ಲಿ ಗಂಡನು ಬಂದು ಸಹಕರಿಸಿದಾಗ ಜೀವನ ಸರಿ ಹೋಗುತ್ತದೆ. ಆದರೆ ಪ್ರಸ್ತುತ ಇದು ಆಗುತ್ತಿಲ್ಲ.ಇದರಿಂದ ಸಮಾಜದಲ್ಲಿ ವಿಚ್ಚೇದನಗಳು ಹೆಚ್ಚುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ಐಪಿಎಸ್ ನಲ್ಲಿ ಮಹಿಳೆಯರಿಗಾಗಿ ಯಾವುದೇ ಕೋಟಾ ಇಲ್ಲಾ. ಮೊದಲು ಅಧಿಕಾರಿ ನಂತರ ಮಹಿಳೆ. ಇಲಾಖೆಯಲ್ಲಿ ಪುರುಷರಿಗೆ ಸರಿ ಸಮನಾದ ಕಾರ್ಯಗಳು ಮಹಿಳೆಯರು ಮಾಡಬೇಕು.
ಪೊಲೀಸ ಇಲಾಖೆಯಲ್ಲಿ ಮಹಿಳೆಯರು ಕೆಲಸ ಮಾಡೋಕೆ ಕಷ್ಟ . ಇಲಾಖೆಯಲ್ಲಿ ಮಹಿಳೆಯರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಮಹಿಳೆಯರು ಇಲಾಖೆಯಲ್ಲಿ ಮಾಡಿದ ಕಾರ್ಯಗಳು ಹೆಚ್ಚಿಗೆ ಬೆಳಕಿಗೆ ಬರುತ್ತವೆ. ಹಾಗೇನೆ ಏನಾದರೂ ತಪ್ಪು ಮಾಡಿದರೂ ಸಹ ಅವು ಹೆಚ್ಚು ಪ್ರಚಾರವನ್ನು ಪಡೆದುಕೊಳ್ಳುತ್ತವೆ. ಆದ್ದರಿಂದ ಕರ್ತವ್ಯದಲ್ಲಿ ಮಹಿಳೆ ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿ.ರೂಪಾ ಹೇಳಿದರು.
ಇದೇ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಎಲ್ಲ ವಿದ್ಯಾರ್ಥಿಗಳು ಪೊಲೀಸ ಐಪಿಎಸ್ ಅಧಿಕಾರಿ ರವಿ ಚನ್ನಣವರ ಜೊತೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳನ್ನು ಕೇಳಿ ರವಿ ಚನ್ನಣವರ ಅವರಿಂದ ಪ್ರೇರಣಾದಾಯಕ ಉತ್ತರಗಳನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು.