RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರಲಾಗುವುದು : ಮುರುಘರಾಜೇಂದ್ರ ಶ್ರೀ

ಗೋಕಾಕ:ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರಲಾಗುವುದು : ಮುರುಘರಾಜೇಂದ್ರ ಶ್ರೀ 

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರಲಾಗುವುದು : ಮುರುಘರಾಜೇಂದ್ರ ಶ್ರೀ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :

 
ಸಮ-ಸಮಾಜದ ನಿರ್ಮಾಣಕ್ಕಾಗಿ ನಮ್ಮ ಹೋರಾಟ ಪ್ರಗತಿಯಲ್ಲಿದ್ದು ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯಾತೀತ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರುವ ಮೂಲಕ ಚಿಂತಕರ ವಿಚಾರಧಾರೆಗಳನ್ನು ಗೋಕಾವಿ ನಾಡಿಗೆ ಪರಿಚಯಿಸುವ ಕಾರ್ಯ ಶ್ರೀ ಮಠದಿಂದ ಮಾಡಲಾಗುವುದು ಎಂದು ಶೂನ್ಯ ಸಂಪಾದನ ಮಠದ ಪರಮ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಬುಧವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕೃತಿ ಉತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭಾರತ ವಿಶ್ವ ಗುರುವಾಗಿದೆ. ವಿಶ್ವ ಗುರುವಾಗುವಲ್ಲಿ ನಮ್ಮ ಮಠವು ಕೂಡಾ ಅಳಿಲು ಸೇವೆಯನ್ನು ಸಲ್ಲಿಸುತ್ತದೆ. ನಮ್ಮ ಕಾರ್ಯಕ್ರಮಗಳು ರಾಷ್ಟ್ರ ಮತ್ತು ದೇಶ ಪ್ರೇಮವನ್ನು ಪ್ರೇರಣೆ ನೀಡಲು ಸಹಕಾರಿಯಾಗಿವೆ. ನಾವೆಲ್ಲ ಒಂದೇ ಎನ್ನುವ ಭಾವ ಮೂಡಿಸಿ ಭಾರತವೇ ಧರ್ಮ. ಸಂವಿಧಾನವೇ ನಮ್ಮ ಧರ್ಮ ಗ್ರಂಥ ಎಂಬ ಮನೋಭಾವ ನಮ್ಮಲ್ಲಿ ಮೂಡಬೇಕು . ಮೀಸಲಾತಿಗಾಗಿ ಹೋರಾಟ ಮಾಡದೇ ಸ್ವ ಸಾಮಾರ್ಥ್ಯದಿಂದ ಮುಂದೆ ಬರುವ ಕಾರ್ಯವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಶ್ರೀಮಠವು ಶ್ರಮಿಸುತ್ತಿದ್ದು, ಶರಣ ಸಂಸ್ಕೃತಿ ಉತ್ಸವದ ಎಲ್ಲಾ ಸಮಾವೇಶಗಳು ಯಶಸ್ವಿಯಾಗಿವೆ. ನಾಡಿನ ಮಹಾನ ಸಾಧಕರು ಶ್ರೀಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುತ್ತಿರುವುದರಿಂದ ಕಾಯಕಶ್ರೀ ಪ್ರಶಸ್ತಿಗೆ ಗೌರವ ಬಂದಿದೆ. ನಾವು ಸಹ ಸಾಧಕರಂತೆ ಆಗಬೇಕು ಎಂಬ ಛಲ ವಿದ್ಯಾರ್ಥಿಗಳು ಬರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತದೆ. ಗೋಕಾಕ ಜನರ ಪ್ರೋತ್ಸಾಹದಿಂದ ಈ ಉತ್ಸವ ಯಶಸ್ವಿಯಾಗಿ ಹೊರಹೊಮ್ಮಿದೆ ಎಂದು ಮುರುಘರಾಜೇಂದ್ರ ಶ್ರೀಗಳು ಹೇಳಿದರು. ಮುಂದೆ ರಾಜ್ಯಕ್ಕೆ ಅಷ್ಟೇ ಸಿಮಿತಗೊಳಿಸದೆ . ರಾಷ್ಟ್ರಕ್ಕೆ ಈ ಕಾರ್ಯಕ್ರಮ ಮಾದರಿಯಾಗುವಂತೆ ಈ ಕಾರ್ಯಕ್ರಮ ಮಾಡುತ್ತವೆ. ಎಂದು ಶ್ರೀಗಳು ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಪ್ಪಿನ ಬೆಟಗೇರಿಯ ಶ್ರೀ ಮ.ನಿ.ಪ್ರ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ವಹಿಸಿದ್ದರು. ಅತಿಥಿಗಳಾಗಿ ಬೆಳಗಾವಿಯ ಆರೋಗ್ಯ ಇಲಾಖೆಯ ಹೆಚ್ಚುವರಿ ಜಂಟಿ ನಿರ್ದೇಶಕಿ ಡಾ: ಶೈಲಜಾ ತಮ್ಮಣ್ಣವರ, ಬೆಳಗಾವಿಯ ವೈದ್ಯರಾದ ಡಾ: ನೀತಾ ದೇಶಪಾಂಡೆ, ಶಕುಂತಲಾ ಕಟ್ಟಿ ಇದ್ದರು.

Related posts: