ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ : ಕಲ್ಲಹಳ್ಳಿ ವಿರುದ್ಧ ಯರಗಟ್ಟಿಯಲ್ಲಿ ಪ್ರತಿಭಟನೆ
ಶಾಸಕ ರಮೇಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ : ಕಲ್ಲಹಳ್ಳಿ ವಿರುದ್ಧ ಯರಗಟ್ಟಿಯಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4
ಶಾಸಕ ರಮೇಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದ್ದು, ದೂರು ನೀಡಿದ ಕಲ್ಲಹಳ್ಳಿಯ ವಿರುದ್ಧ ಸೂಕ್ತ ತನಿಖೆ ನಡೆಯಿಸಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಗುರುವಾರದಂದು ಯರಗಟ್ಟಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿಸಿದರು.
ಯರಗಟ್ಟಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಅವರನ್ನು ಬೆಂಬಲಿಸಿದರು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿರುವ ಅವರ ಅಭಿಮಾನಿಗಳು ಶಾಸಕ ರಮೇಶ ಜಾರಕಿಹೊಳಿ ಅವರ ರಾಜಕೀಯ ಏಳ್ಗೆಗೆಯನ್ನು ಸಹಿಸದೆ ಕೆಲವರು ವ್ಯವಸ್ಥಿತವಾಗಿ ಅವರನ್ನು ಹನಿಟ್ಯ್ರಾಫ್ ಮಾಡುವ ಮೂಲಕ ಉದ್ದೇಶ ಪೂರ್ವಕವಾಗಿ ರಮೇಶ ಜಾರಕಿಹೊಳಿ ಅವರಿಗೆ ಕಪ್ಪು ಚುಕ್ಕೆ ತರಲು ಮಾಡಿದ ಷಡ್ಯಂತ್ರ ಇದ್ದಾಗಿದ್ದು, ರಮೇಶ ಜಾರಕಿಹೊಳಿ ಮತ್ತು ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ರೇಸನಲ್ಲಿ ಇರುವುದನ್ನು ಸಹಿಸಲಾಗದೆ ಕೆಲವರು ಈ ಕೃತ್ಯವನ್ನು ಎಸಗಿದ್ದಾರೆ.ತಕ್ಷಣ ಇದರ ಹಿಂದಿನ ಸತ್ಯವನ್ನು ಬಹಿರಂಗ ಪಡಿಸುವ ಕೆಲಸ ಮುಖ್ಯಮಂತ್ರಿಗಳು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯರಗಟ್ಟಿ ಕರವೇ ಅಧ್ಯಕ್ಷ ಡಿ ಕೆ ಯರಗಟ್ಟಿ,ಮುಖಂಡರುಗಳಾದ ಸರೇಶ ಭಜಂತ್ರಿ,ಚಂದ್ರು ತಲ್ಲೂರ,ಎಸ್.ಎಚ್. ನಾಯ್ಕರ,ವಾಲ್ಮೀಕಿ ಸಮಾಜದ ಹಿರಿಯರು,ಸುರೇಶ ಮುರಗೋಡ,ಗೌಡಪ್ಪ ಪಾಟೀಲ,ಬಸವರಾಜ ನಂದಿ,ದ್ಯಾಮನಾಯ್ಕ ಬಂಡ್ರೊಳಿ,ಯಲ್ಲಪ್ಪ ಕಳಸಿ ಮುಂತಾದವರು ಇದ್ದರು.