RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪ್ರಕಣವನ್ನು ಸಿಬಿಐಗೆ ತನಿಖೆ ನೀಡಲು ಶಾಸಕ ರಮೇಶ ಬೆಂಬಲಿಗರ ಒತ್ತಾಯ : ಸಂಗನಕೇರಿ ಗ್ರಾಮದಲ್ಲಿ ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ

ಗೋಕಾಕ:ಪ್ರಕಣವನ್ನು ಸಿಬಿಐಗೆ ತನಿಖೆ ನೀಡಲು ಶಾಸಕ ರಮೇಶ ಬೆಂಬಲಿಗರ ಒತ್ತಾಯ : ಸಂಗನಕೇರಿ ಗ್ರಾಮದಲ್ಲಿ ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ 

ಪ್ರಕಣವನ್ನು ಸಿಬಿಐಗೆ ತನಿಖೆ ನೀಡಲು ಶಾಸಕ ರಮೇಶ ಬೆಂಬಲಿಗರ ಒತ್ತಾಯ : ಸಂಗನಕೇರಿ ಗ್ರಾಮದಲ್ಲಿ ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :

 
ಶಾಸಕ ರಮೇಶ ಜಾರಕಿಹೊಳಿ ರ ನಕಲಿ ಸಿ.ಡಿ ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಓಡಿ, ಸಿಬಿಐ ವಹಿಸುವಂತೆ ಆಗ್ರಹಿಸಿ ಶಾಸಕರ ಅಭಿಮಾನಿಗಳು ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಪ್ರತಿಭಟನೆ ನಡೆಯಿಸಿದರು .

ಗುರುವಾರದಂದು ಗ್ರಾಮದ ಭಗೀರಥ ವೃತ್ತದಲ್ಲಿ ಸೇರಿದ ಶಾಸಕರ ಅಭಿಮಾನಿಗಳು ಶಾಸಕರ ಪರ ಜಯಘೋಷ ಹಾಕಿ ಶಾಸಕರಿಗೆ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿ ಉಪ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಸಿ.ಡಿ ಪ್ರಕರಣ ಸಂಪೂರ್ಣ ನಕಲಿಯಾಗಿದ್ದು ಪ್ರಕರಣದ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕು ಶಾಸಕ ರಮೇಶ ಜಾರಕಿಹೊಳಿಯವರ ಜನಪ್ರೀಯತೆಯನ್ನು ಸಹಿಸದ ಕೆಲ ಪ್ರಭಾವಿ ವ್ಯಕ್ತಿಗಳು ಷಡ್ಯಂತ್ರ ರೂಪಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನಕಲಿ ಸಿ.ಡಿ ಬಗ್ಗೆ ಸಮಗ್ರ ತನಿಖೆ ನಡೆಸಲು ಈ ಪ್ರಕಣವನ್ನು ಸಿಬಿಐಗೆ ನೀಡಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಲಾಗಿದೆ.
ಈ ಸಂದರ್ಭದಲ್ಲಿ ಬಸವರಾಜ ಕ ಮಾಳೇದವರ ,ಸಿದ್ದು ಕಂಕಣವಾಡಿ, ಭೀಮಶಿ ಮಾಳೇದವರ, ಮಹೇಬೂಬ ಮುಲ್ಲಾ, ಕಾಶಪ್ಪಾ ಕೋಳಿ, ಹಣಮಂತ ಚಿಪ್ಪಲಕಟ್ಟಿ, ಮಲಗೌಡ ಮಾಳ್ಯಾಗೋಳ, ಇಬ್ರಾಹಿಂ ಮುಲ್ಲಾ, ಸುರೇಶ ಕಪರಟ್ಟಿ, ಪ್ರಶಾಂತ ಸಂಪಗಾವಿ, ರೇಣಕಪ್ಪಾ ಕಪರಟ್ಟಿ ಸೇರಿದಂತೆ ಇತರರು ಇದ್ದರು

Related posts: