ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಪುನಃ ಜಲಸಂಪನ್ಮೂಲ ಸಚಿವರಾಗಿ ಮಾಡಬೇಕೆಂದು ಆಗ್ರಹಿಸಿ ಖನಗಾಂವ ಮತ್ತು ಮಿಡಕನಟ್ಟಿ ಗ್ರಾಮಸ್ಥರ ಮನವಿ
ರಮೇಶ ಜಾರಕಿಹೊಳಿ ಅವರನ್ನು ಪುನಃ ಜಲಸಂಪನ್ಮೂಲ ಸಚಿವರಾಗಿ ಮಾಡಬೇಕೆಂದು ಆಗ್ರಹಿಸಿ ಖನಗಾಂವ ಮತ್ತು ಮಿಡಕನಟ್ಟಿ ಗ್ರಾಮಸ್ಥರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 7 :
ರಮೇಶ ಜಾರಕಿಹೊಳಿ ಅವರ ನಕಲಿ ಸಿಡಿ ತಯಾರಿಸಿದವರ ಮೇಲೆ ಯೋಗ್ಯ ಕಾನೂನು ಕ್ರಮ ಕೈಗೊಂಡು , ರಮೇಶ ಜಾರಕಿಹೊಳಿ ಅವರನ್ನು ಪುನಃ ಜಲಸಂಪನ್ಮೂಲ ಸಚಿವರಾಗಿ ಮಾಡಬೇಕೆಂದು ಆಗ್ರಹಿಸಿ ರವಿವಾರದಂದು ಖನಗಾಂವ ಮತ್ತು ಮಿಡಕನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಸ್ಥರು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರವಿವಾರದಂದು ಮುಂಜಾನೆ ಖನಗಾಂವ , ಮಿಡಕನಟ್ಟಿ, ದೇವೆಗೌಡನಟ್ಟಿ , ನಬಾಪೂರ, ಗಿಳಿಹೊಸೂರ, ಗುದ್ನಟ್ಟಿ, ಕೇಶಪ್ಪನಟ್ಟಿ, ಏಳಪಟ್ಟಿ ಗ್ರಾಮದ ಅಭಿಮಾನಿಗಳು ಸುಮಾರು 20 ಕಿ.ಮಿ ವರೆಗೆ ಪಾದಯಾತ್ರೆ ಮುಖಾಂತರ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರಿಗೆ ಮನವಿ ಅರ್ಪಿಸಿದರು
ಈ ಸಂದರ್ಭದಲ್ಲಿ ಸಿದ್ದಗೌಡಾ ಪಾಟೀಲ, ಬಸವಣ್ಣೆಪ್ಪ ಅಮ್ಮಣಿ ,ಪುಂಡಲೀಕ ವಣ್ಣೂರ , ಈಶ್ವರ ಬಾಗೋಜಿ, ಚಂದ್ರಪ್ಪ ಹಂಚಿನಮನಿ, ಕಣ್ಣಪ್ಪ ಗುಡದನವರ , ದುರ್ಗಪ್ಪ ಮರೆಯಪ್ಪಗೋಳ, ಯಲಗುಂಡ ಪೂಜೇರಿ, ಈಶ್ವರ ವಣ್ಣೂರ ,ಈಶ್ವರ ಪಾಟೀಲ, ರಾಮಣ್ಣ ಕುಡಿಹುಸಿ, ನಾಗಣ್ಣಗೌಡ ಪಾಟೀಲ, ಪ್ರಕಾಶ ವಣ್ಣೂರ, ಲಕ್ಷ್ಮಣ ಪೂಜೇರಿ, ಬಾಳೆಶ ಅಮ್ಮಣಿ, ರಾಯಪ್ಪ ಮೇಳೆದ ಸೇರಿದಂತೆ ಅನೇಕರು ಇದ್ದರು.