ಬೆಂಗಳೂರು:ನಕಲಿ ವಿಡಿಯೋ ಬಿಡುಗಡೆ ಮಾಡಲು 15 ಕೋಟಿ ರೂ ಖರ್ಚು: ಶಾಸಕ ಬಾಲಚಂದ್ರ ಜಾರಕಿಹೊಳಿ
ನಕಲಿ ವಿಡಿಯೋ ಬಿಡುಗಡೆ ಮಾಡಲು 15 ಕೋಟಿ ರೂ ಖರ್ಚು: ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಂಗಳೂರು ಮಾ 7 :
ರಷ್ಯಾದಲ್ಲಿ 17 ಸರ್ವಗಳನ್ನು ಬಳಸಿಕೊಂಡು ನಕಲಿ ವಿಡಿಯೋ ಬಿಡುಗಡೆ ಮಾಡಲು 15 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು
ರವಿವಾರದಂದು ಸಾಯಂಕಾಲ ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮದವರಿಗೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ ಸಿಡಿಯಲ್ಲಿರುವ ಮಹಿಳೆ ಸಂತ್ರಸ್ತ ಮಹಿಳೆ ಎಂದು ದಯವಿಟ್ಟು ಹೇಳಬೇಡಿ. ಯಾಕೆಂದರೆ ಇದರಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಮಹಿಳೆಯ ಹಿಂದೆ ಇನ್ನೂ ಮೂರು ಜನರಿದ್ದಾರೆ ಒಂದು ಟೀಂ ಆಗಿ ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ ಎಂದರು .
ದೂರು ನೀಡುವ ಮುನ್ನವೇ ದೃಶ್ಯ ಯೂಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ದಯವಿಟ್ಟು ಮನೆಯಿಂದ ಹೊರಗೆ ಬಂದು ರಾಜ್ಯದ ಜನತೆಗೆ ಮಾಹಿತಿ ನೀಡಲಿ. ಸಿಡಿ ಪ್ರಕರಣದ ವಿರುದ್ಧ ದೂರು ನೀಡಲಿ ಎಂದು ಹೇಳಿದರು.
ದಿನೇಶ್ ಕಲ್ಲಹಳ್ಳಿ, ಸಿಡಿ ಬಿಡುಗಡೆ ಮಾಡಿ ದೂರು ನೀಡುವ ಮೊದಲೇ ರಷ್ಯಾದಿಂದ ಯೂಟೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಕಲ್ಲಹಳ್ಳಿ ಅವರನ್ನೂ ಯಾರೋ ಮಿಸ್ ಗೈಡ್ ಮಾಡಿರಬಹುದು. ಒಟ್ಟಾರೆ ಇಡೀ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಪಂಚ ರಾಜ್ಯ ಚುನಾವಣೆ, ಬೆಳಗಾವಿ ಲೋಕಸಭಾ ಉಪಚುನಾವಣೆ ಇದರ ಬೆನ್ನಲ್ಲೇ ಜಾರಕಿಹೊಳಿ ಕುಟುಂಬದ ತೇಜೋವಧೆ ಮಾಡಬೇಕು ಹಾಗೂ ರಮೇಶ್ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಕು ಎಂಬ ಉದ್ದೇಶಕ್ಕೆ ಈ ನಕಲಿ ವಿಡಿಯೋ ಸೃಷ್ಟಿ ಮಾಡಲಾಗಿದೆ. ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ತಿಳಿಸಿದರು.