RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಶಾಂತಿ-ನೆಮ್ಮದಿ ದೊರೆಯುವುದು ಆಧ್ಯಾತ್ಮದ ಮೊರೆ ಹೋದಾಗ ಮಾತ್ರ : ಮುರುಘರಾಜೇಂದ್ರ ಶ್ರೀ

ಗೋಕಾಕ:ಶಾಂತಿ-ನೆಮ್ಮದಿ ದೊರೆಯುವುದು ಆಧ್ಯಾತ್ಮದ ಮೊರೆ ಹೋದಾಗ ಮಾತ್ರ : ಮುರುಘರಾಜೇಂದ್ರ ಶ್ರೀ 

ಶಾಂತಿ-ನೆಮ್ಮದಿ ದೊರೆಯುವುದು ಆಧ್ಯಾತ್ಮದ ಮೊರೆ ಹೋದಾಗ ಮಾತ್ರ : ಮುರುಘರಾಜೇಂದ್ರ ಶ್ರೀ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 12 :

 

ಇಂದಿನ ತಾಂತ್ರಿಕ ಯುಗದಲ್ಲಿ ಮಾನವ ಎಷ್ಟೇ ಮುಂದುವರೆದರೂ ಶಾಂತಿ-ನೆಮ್ಮದಿ ದೊರೆಯುವುದು ಆಧ್ಯಾತ್ಮದ ಮೊರೆ ಹೋದಾಗ ಮಾತ್ರ ಎಂದು ಇಲ್ಲಿಯ ಶೂನ್ಯ ಸಂಪದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ಇಲ್ಲಿಯ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ 13ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಾಣುವುದೆಲ್ಲ ಸತ್ಯವಲ್ಲ, ಕಾಣದಿರುವುದೇ ಸತ್ಯವಾಗಿದ್ದು, ಅದೇ ಶಾಶ್ವತ, ಜ್ಞಾನರತ್ನವಾಗಿದ್ದು, ಅದನ್ನು ಸಂಪಾದಿಸಿ ಭಗವಂತನ ಸನ್ನಿಧಿಯಲ್ಲಿ ಶ್ರೀಮಂತರೆನ್ನಿಕೊಳ್ಳಿಸಿರೆಂದು ತಿಳಿಸಿದರು.
ಪ್ರಾಥನೆಯಿಂದ ಭಗವಂತನ ಸಾನಿಧ್ಯದಲ್ಲಿ ವಾಸವಾಗಿರುವುದೇ ಉಪವಾಸ. ಶಿವಭಕ್ತಿ, ಶಿವಧ್ಯಾನ ಮಾನವರಿಗೆ ಇರಲೇಬೇಕು. ದೇವರ ಉಪಾಸಣೆಯೊಂದಿಗೆ ದಿನ ದಲಿತರ ಹಿಂದುಳಿದ ಜನರ ದು:ಖದಲ್ಲಿ ಪಾಲ್ಗೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡಬೇಕು. ಧಾರ್ಮಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇವರ ಅನುಗ್ರಹಕ್ಕೂ ಪಾತ್ರರಾಗಿರಿರೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯ ಅಧ್ಯಕ್ಷ ಬಿ.ಬಿ.ಕಾಪಸಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹೂಲಿಕಟ್ಟಿಯ ಶ್ರೀ ಕುಮಾರ ದೇವರು, ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ನಗರಸಭೆ ಸದಸ್ಯರಾದ ಶ್ರೀಶೈಲ ಯಕ್ಕುಂಡಿ, ಭಾರತಿ ಹತ್ತಿ, ಗಣ್ಯರಾದ ಎಮ್.ಎಸ್.ವಾಲಿ, ಶ್ರವಣ ಮನ್ನಿಕೇರಿ, ಗಂಗಾ ಕೊಲ್ಹಾಪೂರೆ, ಸಮಿತಿಯ ಪದಾಧಿಕಾರಿಗಳಾದ ಜೀವಪ್ಪ ಬಡಿಗೇರ, ವೀರಭದ್ರ ಶೇಬಣ್ಣವರ, ಅಶೋಕ ಗೋಣಿ, ಉದಯ ಬನ್ನಿಶೆಟ್ಟಿ, ಈಶ್ವರ ಪಾಟೀಲ, ಸುನಂದಾ ಮನ್ನಿಕೇರಿ, ಜಗದೇವಿ ಬೋಸಗಾ, ಲಕಪ್ಪ ಕೊತ್ತಲ, ಬಾಳೇಶ ಕರಿಗಾರ, ಸಿದ್ದಲಿಂಗಪ್ಪ ದಾಸಪ್ಪನ್ನವರ, ಅಮರಗೊಂಡ ಬಿಜ್ಜಳ, ಭೀಮಪ್ಪ ಗೋಲಭಾಂವಿ, ಉಮಾದೇವಿ ಹಿರೇಮಠ, ಪ್ರೇಮಲತಾ ಕಡಗದ ಸೇರಿದಂತೆ ಅನೇಕರು ಇದ್ದರು.

Related posts: