RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ

ಗೋಕಾಕ:ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ 

ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 :
ಮನುಷ್ಯ ಯಾವುದೇ ವಿಷಯದಲ್ಲಿ ಆಳವಾದ ಆಸಕ್ತಿ ಹಾಗೂ ಜ್ಞಾನ ಸಂಪಾದನೆಗೆ ಹೆಚ್ಚಿನ ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ರಾಷ್ರ್ಟಪ್ರಶಸ್ತಿ ವಿಭೂಷಿತ, ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ದಿ ಪಡೆದ ಅಥಣಿಯ ಬಸವರಾಜ ಉಮರಾಣಿ ಹೇಳಿದರು.

ನಗರದ ಹೊರ ವಲಯದಲ್ಲಿರುವ ಪ್ರಭಾ ನಗರದ ಪ್ರೀಯದರ್ಶಿನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ರೆಡಿ ಟು ವೀನ್ ಪ್ರೇರಣಾದಾಯಕ ಮಾತುಗಳು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿಸಿ, ಸನ್ಮಾನಿತರಾಗಿ ಅವರು ಮಾತನಾಡಿದರು.

ಇಂದು ನಾವೇಲ್ಲರೂ ಅಧುನಿಕತೆಗೆ ಮಾರುಹೋಗಿದ್ದವೆ. ಜೀವನದಲ್ಲಿ ಏಕಾಗ್ರತೆ ಬಹಳ ಮುಖ್ಯ. ಜೀವನದಲ್ಲಿ ಏಕಾಗ್ರತೆ ಹೆಚ್ಚಾಗಬೇಕೆಂದರೆ ಎಲ್ಲರೂ ಯೋಗ, ಧ್ಯಾನಗಳ ಮೊರೆ ಹೋಗಬೇಕು ಅಂದಾಗ ಜೀವನ ಸುಂದರಮಯವಾಗುವುದು.
ಹುಟ್ಟುತ್ತಲೇ ಬುದ್ದಿವಂತರು ಯಾರೂ ಇರೋದಿಲ್ಲ. ಕಲಿಯುತ್ತ ಹೋದದಂತೆ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ಕಲಿಕೆ ಮತ್ತು ಜ್ಞಾನವೊಂದೇ ನಮ್ಮನ್ನು ಮುನ್ನಡೆಸುವ ಗುರು. ಆದ್ದರಿಂದ ಪ್ರತಿಯೊಬ್ಬರು ಜ್ಞಾನ ಬೆಳೆಸಿಕೊಳ್ಳಬೇಕು. ಆ ಮೂಲಕ ತಮ್ಮ ಸಾಧನೆ ಮೆರೆಯಲು ವೇದಿಕೆಗಳನ್ನು ರೂಪಿಸಿಕೊಳ್ಳಬೇಕು.
ಸಾಧನೆ ಮಾಡಲು ಕಠಿಣ ಪರಿಶ್ರಮ ಅಗತ್ಯವಾಗಿದೆ. ನಮ್ಮ ನ್ಯೂನತೆಗಳೇ ನಮ್ಮ ಸಾಧನೆಗಳಿಗೆ ಮೆಟ್ಟಿಲಾಗಬೇಕು.ಸಮಸ್ಯೆ ಎಲ್ಲರಿಗೂ ಬರುತ್ತವೆ.ಸಮಸ್ಯೆಗಳ ಕುರಿತು ಯೋಚನೆ ಮಾಡದೇ ಅವಕ್ಕೆ ಪರಿಹಾರ ಯಾವ ರೀತಿ ಕಂಡುಕೊಳ್ಳಬೇಕು ಎಂಬುದು ಯಾರೂ ವಿಚಾರ ಮಾಡುತ್ತಾರೋ ಅವರು ಸಾಧಕರಾಗುತ್ತಾರೆ ಎಂದರು.
ಮಾನವ ಕಂಪ್ಯೂಟರ್ ಬಸವರಾಜ ಉಮರಾಣಿ, ನೆರೆದಿದ್ದ ಜನರು ತಮ್ಮ ಜನ್ಮ ದಿನಾಂಕ ಹೇಳಿದ ತಕ್ಷಣವೇ, ಹುಟ್ಟಿದ ವಾರ, ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದರೆ ಗಡಿಯಾರದ ಸಹಾಯವಿಲ್ಲದೆ ನಿಖರವಾಗಿ ಸಮಯ ಹೇಳುವ, ಬೋರ್ಡ್ ಮೇಲೆ ಎಂಥದೇ ಕಠಿಣ ಲೆಕ್ಕ ಹಾಕಿದರೂ ತಕ್ಷಣವೇ ಉತ್ತರ ಹೇಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು.

ಇದೇ ಸಂಧರ್ಭದಲ್ಲಿ ಗೋಕಾಕ ವಲಯದ ಎಲ್ಲ ಶಾಲೆಗಳ ಪರವಾಗಿ ಬಸವರಾಜ ಉಮರಾಣಿ ಅವರನ್ನು ಸತ್ಕರಿಸಿ,ಗೌರವಿಸಲಾಯಿತು

ಸಂವಾದ ಕಾರ್ಯಕ್ರಮದಲ್ಲಿ ಗೋಕಾಕ ವಲಯದ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ಸುಮಾರು 1500 ವಿದ್ಯಾರ್ಥಿ/ ವಿದ್ಯಾರ್ಥಿನೀಯರು ಭಾಗವಹಿಸಿ ಗಣಿತ ವಿಷಯದ ಬಗ್ಗೆ ಇದ್ದ ಹಲವಾರು ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡರು

ಈ ಸಂದರ್ಭದಲ್ಲಿ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ್, ಗೋಪಾಲ ಮಾಳಗಿ, ಅಶೋಕ ತೊಟಗಿ, ವಾಯ್.ಎಚ್.ಭಜಂತ್ರಿ, ಲಗಮಪ್ಪಗೋಳ, ಚೇತನ ಜೋಗನ್ನವರ ಹಾಗೂ ಮತ್ತಿತರರು ಇದ್ದರು.

Related posts: