RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ

ಗೋಕಾಕ:ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ 

.
ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 :

 
ಕ್ರೀಡೆ ಎಂಬುವುದು ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹಾಂತೇಶ ತಾವಂಶಿ ಹೇಳಿದರು.

ಶನಿವಾರದಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನದೀಪ ಸ್ವತಂತ್ರ ಪದವಿ ಪೂರ್ಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಹ್ಯಾಂಡಬಾಲ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಕಾರಣವಾದಂತೆ ಶಾರೀರಿಕ ಬೆಳವಣಿಗೆಗೆ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣ ಮತ್ತು ಕ್ರೀಡೆ ಒಂದೆ ನ್ಯಾಣದ ಎರಡು ಮುಖಗಳು ಇದ್ದಂತೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡಿ ಪ್ರತಿಭ್ವಾನಿತರಾಗಿರೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಕಡಕೋಳ, ನಿರ್ದೇಶಕ ಎ.ಎಸ್.ಜಾಧವ್, ಪ್ರಾಚಾರ್ಯ ಆರ್.ಜಿ.ಭರಭರಿ, ಉಪನ್ಯಾಸಕರಾದ ಜಿ.ವ್ಹಿ.ಮಳಗಿ, ಎಸ್.ಎಸ್.ಸುಭಂಜಿ,ಐ.ಎಂ.ಸರಕಾರ, ಕೆಎಲ್ಇ ಶಾಲೆಯ ಪ್ರಾಚಾರ್ಯ ಅನುಪಾ ಕೌಶಿಕ್, ವಿದ್ಯಾರ್ಥಿ ಪ್ರತಿನಿಧಿ ಪ್ರಜ್ವಲಕುಮಾರ್ ಪೂಜಾರಿ ಇದ್ದರು.

Related posts: