ಗೋಕಾಕ:ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಡಾ.ಉಮಾ ಸಾಲಿಗೌಡ್ರ
ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಡಾ.ಉಮಾ ಸಾಲಿಗೌಡ್ರ
ನಮ್ಮ ಬೆಳಗಾವಿ ಗೋಕಾಕ ಮಾ 23 :
ಪ್ರತಿಯೊಬ್ಬರು ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರಯತ್ನಿಸಬೇಕು. ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಬೇಡ, ಉನ್ನತ ಶಿಕ್ಷಣ ಕೂಡಿಸಲು ಇಂದು ಪ್ರತಿಯೊಬ್ಬ ತಂದೆ, ತಾಯಿ ಪ್ರಯತ್ನಿಸಬೇಕು. ಎಲ್ಲಾ ರಂಗದಲ್ಲಿ ಪುರುಷ ಪ್ರಧಾನಕ್ಕೆ ಸ್ತ್ರೀ ಸಮಾನಳಾಗಿದ್ದಾಳೆ ಎಂದು ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡ್ರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೇ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಮಾ.24ರಂದು ನಡೆದ ಮಾತೆಯರ ಸಮಾಗಮ ಬಾಲ್ಯ ವಿವಾಹ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಿಳೆ ಯಾವಾಗಲೂ ಅಬಲೆ ಅಲ್ಲಾ, ಸಬಲೆಯಾಗಿದ್ದಾಳೆ ಎಂದು ಹೆಣ್ಣು ಮಕ್ಕಳ ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಸಾಧನೆ, ಬದುಕು-ಬರಹದ ಕುರಿತು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ, ಗೋಕಾಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಎಸ್.ಎಚ್.ದೇಸಾಯಿ ಅತಿಥಿಗಳಾಗಿ ಮಾತನಾಡಿದರು. ಅತಿಥಿಗಳು, ಸಾಧನೆಗೈದ ಹೆಣ್ಣು ಮಕ್ಕಳನ್ನು ಶಾಲೆಯ ಪರವಾಗಿ ಸತ್ಕರಿಸಲಾಯಿತು.
ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ಎ.ಬಿ.ತಾಂವಶಿ, ಲಲಿತಾ ಪಟಗಾರ, ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಾಯಂದಿರು, ಪಾಲಕರು, ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಇತರರು ಇದ್ದರು.