RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ ಎಸೆದು ಆಕ್ರೋಶ

ಬೆಳಗಾವಿ:ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ ಎಸೆದು ಆಕ್ರೋಶ 

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ ಎಸೆದು ಆಕ್ರೋಶ

 

ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ ಮಾ 28 :

 

ಶಾಸಕ ರಮೇಶ ಜಾರಕಿಹೊಳಿ ನಕಲಿ ಸಿಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕೈವಾಡವಿದೆ ಎಂದು ಆರೋಪಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ರವಿವಾರದಂದು ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾಣ ನಿಲ್ದಾಣ ದಾರಿಯಲ್ಲಿ ಡಿಕಶಿ ಕಾರಿ ಅಡಗಟ್ಟಿ , ಕಪ್ಪು ಬಟ್ಟೆ ಪ್ರದರ್ಶಿಸಿ , ಕಾರಿ ಬಾಟಲಿ, ಚಪ್ಪಲಿ ಎಸೆದು ಭಾರಿ ಪ್ರತಿಭಟನೆ ನಡೆಯಿಸಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ನಾಮಪತ್ರ ಸಲ್ಲಿಸಲು ಬೆಳಗಾವಿಗೆ ಆಗಮಿಸುತ್ತಿರುವ ಮಾಹಿತಿ ತಿಳಿದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೃಹತ್ ಪ್ರಮಾಣದಲ್ಲಿ ಆಗಮಿಸಿದ್ದ ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳಿಗೆ ಪೊಲೀಸರು ನಿಲ್ದಾಣದ ಒಳಗೆ ಪ್ರವೇಶಿಸಲು ಬಿಡದೆ ಮಾರ್ಗ ಮಧ್ಯದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದ್ದರು ಡಿಕಶಿ ಕಾರಿನಲ್ಲಿ ಬರುತ್ತಿರುವ ಸಂಧರ್ಭದಲ್ಲಿ ಪೋಲೀಸರ ಕಣ್ಣು ತಪ್ಪಿಸಿ ರಸ್ತೆ ಮಧ್ಯೆ ಜಮಾಯಿಸಿದ ಅಭಿಮಾನಿಗಳು ಡಿಕಶಿ ಕಾರಿಗೆ ಚಪ್ಪಲಿ, ಬಾಟಲಿ ಎಸೆದು ಡಿಕಶಿಗೆ ಧಿಕ್ಕಾರ ಕೂಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಬೆಂಬಲಿಗರ ತಳಾಟ ಜಗ್ಗಾಟದ ಮಧ್ಯೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರ ಕಾರಿ ಗಾಜು ಒಡೆದ ಘಟನೆ ಇದೇ ಸಂದರ್ಭದಲ್ಲಿ ಜರುಗಿತ್ತು.
ಒಟ್ಟಾರೆ ಡಿಕಶಿಗೆ ಬೆಳಗಾವಿ ಭೇಟಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಾಗಲಕೋಟ ಬೆಳಗಾವಿ ರಾಜ್ಯ ಹೆದ್ದಾರಿ ಮಧ್ಯೆ ಸಂಚರಿಸುವ ಪ್ರಾಯಾಣಿಕರು ತೊಂದರೆಯನ್ನು ಅನುಭವಿಸಿದರು.

Related posts: