RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ನಗರಸಭೆ ಉಪಚುನಾವಣೆ : ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ

ಗೋಕಾಕ:ನಗರಸಭೆ ಉಪಚುನಾವಣೆ : ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ 

ನಗರಸಭೆ ಉಪಚುನಾವಣೆ : ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ

 

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಮಾ 29 :
ನಗರಸಭೆಯ ವಾರ್ಡ್ ಸಂಖ್ಯೆ 13 ಮತ್ತು 26 ರ ಸದಸ್ಯರ ನಿಧನವಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಗಳಿಗೆ ಸೋಮವಾರ ಉಪ ಚುನಾವಣೆ ನಡೆಯುತ್ತಿದೆ. 

ನಗರದ ವಾರ್ಡ ನಂ 13 ಮತ್ತು 26ರಲ್ಲಿರುವ ಸರಕಾರಿ ಶಾಲೆಯಲ್ಲಿ ಮತದಾನ ನಡೆಯುತ್ತಿದೆ.

ಮತದಾನ ಮಂದಗತಿಯಲ್ಲಿ ಸಾಗಿದೆ. ಹೋಳಿ ಹಬ್ಬದ ಆಚರಣೆಯಿಂದ ಮತದಾರರು ನಿರೀಕ್ಷೆಯಂತೆ ಮತಗಟ್ಟೆ ಕೇಂದ್ರಗಳಿಗೆ ಆಗಮಿಸುತ್ತಿಲ್ಲ.

ಚುನಾವಣೆಯಲ್ಲಿ ವಾರ್ಡ್ ನಂ 26 ಕ್ಕೆ ಇಬ್ಬರು ಅಭ್ಯರ್ಥಿಗಳು ಸ್ವರ್ಧಿಸಿದ್ದರಿಂದ ನೇರ ಸ್ವರ್ಧೆ ಏರ್ಪಟ್ಟಿದ್ದು, ವಾರ್ಡ್ ನಂ 13 ಕ್ಕೆ 6 ಜನ ಸ್ವರ್ಧಿಸಿದ್ದು ತೀವ್ರ ಪೈಪೋಟಿ ಎದುರಾಗಿದೆ.

ಆಯಾ ಅಭ್ಯರ್ಥಿ ಪರ ಮುಖಂಡರ ಮತಗಟ್ಟೆ ಹೊರಗಡೆ ಕುಳಿತು ಮತದಾರರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 31 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.

Related posts: