RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ನಗರಸಭೆ ಉಪಚುನಾವಣೆ : 2 ವಾರ್ಡ ಸೇರಿ ಶೇ 59.7 ಮತದಾನ

ಗೋಕಾಕ:ನಗರಸಭೆ ಉಪಚುನಾವಣೆ : 2 ವಾರ್ಡ ಸೇರಿ ಶೇ 59.7 ಮತದಾನ 

ನಗರಸಭೆ ಉಪಚುನಾವಣೆ : 2 ವಾರ್ಡ ಸೇರಿ ಶೇ 59.7 ಮತದಾನ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 :

ನಗರಸಭೆಯ ಸದಸ್ಯರಿಬ್ಬರ ಅಕಾಲಿಕ ನಿಧನದಿಂದ  ತೆರವಾಗಿದ್ದ  ವಾರ್ಡ್ ನಂ 13 ಮತ್ತು 26 ನೇ ವಾರ್ಡಿಗೆ ಸೋಮವಾರದಂದು  ಉಪಚುನಾವಣೆಯ ನಡೆದಿದ್ದು, ಶೇ 59.7 ರಷ್ಟು ಮತದಾನವಾಗಿದೆ.

ನಗರದ ಬಸವ ನಗರದ ಸರಕಾರಿ ಶಾಲೆಯಲ್ಲಿ  ಸ್ಥಾಪಿಸಲಾದ ಮೂರು ಮತಗಟ್ಟೆ ಗಳಿಗೆ   ಮತ್ತು  ನಗರದ ಕುರುಬರ ಫೂಲ್ ಬಳಿ ಇರುವ  ಸರಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಎರೆಡು ಮತಗಟ್ಟೆಗಳಿಗೆ ಮತದಾರರು ಬೆಳಿಗ್ಗೆಯಿಂದಲೇ ಮತ ಚಲಾಯಿಸಲು ಮತ ಕೇಂದ್ರಕ್ಕೆ ಆಗಮಿಸುತ್ತಿದ್ದುದು ಸಾಮಾನ್ಯವಾಗಿತ್ತು. ಸಣ್ಣಪುಟ್ಟ ಅಡತಡೆಗಳನ್ನು  ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮಹಿಳೆಯರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದು ವಿಶೇಷವಾಗಿತ್ತು.

ವಾರ್ಡ ಸಂಖ್ಯೆ 13ರ ಒಟ್ಟು  2580 ಮತದಾರರ ಪೈಕಿ 1404 ಮತದಾರರು ಮತ ಚಲಾಯಿಸಿದ್ದು, ವಾರ್ಡ ಸಂಖ್ಯೆ 26ರ ಒಟ್ಟು 2342 ಮತದಾರರ ಪೈಕಿ 1536 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇ.59.7 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳದ್ದೆ ಸದ್ದು ಜೋರಾಗಿದ್ದ ಪರಿಣಾಮ ತೀವ್ರ ಪೈಪೋಟಿ ಏರ್ಪಟ್ಟಿದೆ.

ವಾರ್ಡ ಸಂಖ್ಯೆ 13 ರ ಚುನಾವಣಾ ಕಣದಲ್ಲಿ  ಪ್ರವಿಣ ಚುನಮರಿ , ವಿಷ್ಣುಗೌಡಾ ಪಾಟೀಲ, ಅಭಿಷೇಕ ದಳವಾಯಿ, ಜ್ಯೋತಿ ಕೋಲಾರ, ರಮೇಶ ಮುರಗುಂಡಿ, ಅರುಣ ಕರಣಿ ಸ್ವರ್ಧಿಸಿದ್ದು, ವಾರ್ಡ ಸಂಖ್ಯೆ 26 ರಲ್ಲಿ ಇಮಾಮ ಪಾಜನಿಗರ ಮತ್ತು ಬಾಬು ಮುಳಗುಂದ ಸ್ಪರ್ಧಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.  ಮತ ಎಣಿಕೆ ಮಾ 31 ರಂದು ನಡೆಯಲಿದೆ.

Related posts: