ಘಟಪ್ರಭಾ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42.71ಲಕ್ಷ ಹಣ ಪತ್ತೆ : ಸಂಕೇಶ್ವರ – ಗೋಕಾಕ ರಾಜ್ಯ ಹೆದ್ದಾರಿಯ ಚೆಕ್‍ಪೋಸ್ಟದಲ್ಲಿ ಘಟನೆ
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42.71ಲಕ್ಷ ಹಣ ಪತ್ತೆ : ಸಂಕೇಶ್ವರ – ಗೋಕಾಕ ರಾಜ್ಯ ಹೆದ್ದಾರಿಯ ಚೆಕ್‍ಪೋಸ್ಟದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 31 :
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಲುವಾಗಿ ಚುನಾವಣೆ ಅಯೋಗ ಚುನಾವಣೆ ಅಕ್ರಮ ತಡೆಯಲು ನಿರ್ಮಿಸಿದ ಸ್ಥಳೀಯ ಜೆ.ಜಿ.ಸಹಕಾರಿ ಆಸ್ಪತ್ರೆ ಹತ್ತಿರವಿರುವ ಸಂಕೇಶ್ವರ – ಗೋಕಾಕ ರಾಜ್ಯ ಹೆದ್ದಾರಿಯ ಚೆಕ್‍ಪೋಸ್ಟದಲ್ಲಿ ಬುಧವಾರ ಮಧ್ಯಾಹ್ನ ಸರಿಯಾದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42.71ಲಕ್ಷ ಹಣ ಪತ್ತೆಯಾಗಿದೆ.
ಚೆಕ್‍ಪೋಸ್ಟ್‍ನಲ್ಲಿ ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿಗಳು ಹಾಗೂ ಪೊಲೀಸರು ಬರುವ ವಾಹನಗಳನ್ನು ತಪಾಸಣೆ ಮಾಡುವಾಗ ಈ ದಾಖಲೆ ಇಲ್ಲದ ಹಣ ಕಾರಿನಲ್ಲಿ ಪತ್ತೆಯಾಗಿದೆ ಅವರು ಮಹಾರಾಷ್ಟ್ರ ಗಡಿಭಾಗದ ಮಂಗಸೂಳಿಯಿಂದ ಮುನ್ನೋಳಿಗೆ ಜಮೀನಿನ ವ್ಯವಹಾರದ ಸಂಬಂಧವಾಗಿ ಅವರಿಗೆ ತಲುಪಿಸಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಣವನ್ನು ತಾಲೂಕಾ ಖಜಾನೆಗೆ ಒಪ್ಪಿಸಲಾಗಿದೆ. ಐಟಿ ಇಲಾಖೆ ಹಾಗೂ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಈ ಅಕ್ರಮ ಹಣದ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ದಂಡಾಧಿಕಾರಿ ನವೀನ.ವಿ. ಹುಳ್ಳೂರು, ತಾಲೂಕಾ ನೀತಿ ಸಂಯುಕ್ತೆ ಅಧಿಕಾರಿ ಪಿ.ಕೆ ಗಣೇಶಕರ್, ಘಟಪ್ರಭಾ ಪೊಲೀಸ್ ಠಾಣಾ ಇನ್ಸ್‍ಪೆಕ್ಟರ ಶ್ರೀಶೈಲ ಬ್ಯಾಕೂಡ, ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿ ಉಮೇಶ ಮನಗೂಳಿ ಹಾಗೂ ಸಿಬ್ಬಂದಿ ಇದ್ದರು.