RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ

ಗೋಕಾಕ:ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ 

ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ
ಗೋಕಾಕ ಸೆ 12 : ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಗೋಕಾಕ ತಾಲೂಕಾ ಘಟಕದ ವತಿಯಿಂದ ಮಂಗಳವಾದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗೌರಿ ಲಂಕೇಶ ಅವರು ಕರ್ನಾಟಕ ರಾಜ್ಯವಲ್ಲ ಇಡೀ ದೇಶದ ಕೋಮುವಾದಿ ಶಕ್ತಿಗಳನ್ನು ಯಾವುದೇ ಮೂಲಾಜಿಲ್ಲದೇ ನೇರವಾಗಿ ಟೀಕಿಸುತ್ತಿದ್ದರು. ಖ್ಯಾತ ಲೇಖಕ, ಪತ್ರಕರ್ತ ಲಂಕೇಶ ಪುತ್ರಿಯಾಗಿದ್ದ ಗೌರಿ ಲಂಕೇಶ ಶೋಷಿತರ ಪರ ಧ್ವನಿಯಾಗಿದ್ದರು. ದಲಿತ, ರೈತ ಹಾಗೂ ಮಹಿಳಾ ಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಪ್ರಯತ್ನವನ್ನು ನಡೆಸಿದ್ದರು .

ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ತಕ್ಷಣದಲ್ಲಿ ಗೌರಿ ಲಂಕೇಶ ಅವರನ್ನು ಹತ್ಯಗೈದವರನ್ನು ಬಂಧಿಸಬೇಕು . ಕಳೆದ ಎರಡು ವರ್ಷದ ಹಿಂದೆ ಹಿರಿಯ ಸಾಹಿತಿ ಡಾ| ಎಂ.ಎಂ.ಕಲಬುರ್ಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಇನ್ನೂವರೆಗೆ ಬಂಧಿಸಿಲ್ಲ ಆದಷ್ಟು ಬೇಗ ಇವರನ್ನು ಹತ್ಯೆ ಗೈದ ಹಂತಕರನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು . ವಿಚಾರವಾದಿಗಳ ಜೀವಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಈ ಹತ್ಯಾ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ .

ಈ ಸಂದರ್ಭದಲ್ಲಿ ಆಸೀಪಖಾನ ಫನಿಬಂದ , ಮೈನೋದ್ದಿನ ಪೀರಜಾದೆ , ದಾದಾಪೀರ ಇಮಾರತವಾಲೇ , ಶಾಹನೂರ ಸೌದಾಗರ , ಅಜ್ಜರೂದ್ದಿನ ಕಲ್ಲೋಳಿ , ಎ . ಘೋಡಗೇರಿ , ಶಬ್ಬೀರ ಮುಧೋಳ , ರಮಜಾನ ಗೈಬಿ , ಬಾಬಾಜಾನ ನಗಾರಚಿ , ಸಧಾಫ ಖಾಗಜಿ , ಪೈಯಜಾನ ತರನಘರ , ಅಬ್ಬು ಪಠಾಣ , ಆರೀಪ ಫನಿಬಂದ , ಮುಲ್ತಾನಿ ಚಾಂದಖಾನ , ಲತೀಫ ಮುಲ್ಲಾ ,ಇಮ್ರಾನ ಒಂಟಮೂರಿ , ಮೈಹಬೂಬ ಶೇಖ ಸೇರಿದಂತೆ ಪಿಎಫ್ಐ ಕಾರ್ಯಕರ್ತರು ಉಪಸ್ಥಿತರಿದ್ದರು

Related posts: