ಗೋಕಾಕ:ಕೊರೋನಾದಿಂದ ಶಾಸಕ ರಮೇಶ ಶೀಘ್ರ ಗುಣಮುಖರಾಗಲೆಂದು ದೇವರ ಮೋರೆ ಹೋದ ಅಭಿಮಾನಿಗಳು
ಕೊರೋನಾದಿಂದ ಶಾಸಕ ರಮೇಶ ಶೀಘ್ರ ಗುಣಮುಖರಾಗಲೆಂದು ದೇವರ ಮೋರೆ ಹೋದ ಅಭಿಮಾನಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 6 :
ಗೋಕಾಕ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿ ಕಷ್ಟದಲ್ಲಿಯೂ ದೇವರ ಮೋರೆ ಹೋಗುವದು ಸಾಮಾನ್ಯ ಈಗ ರಮೇಶ ಜಾರಕಿಹೊಳಿ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನಲೆ ಅಭಿಮಾನಿಗಳು ಸಹ ದೇವರ ಮೊರೆ ಹೋಗಿದ್ದಾರೆ.
ಕರೋನಾ ಸೋಂಕಿನಿಂದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿ ಬರಲೆಂದು ಹಾರೈಸಿ ಅಭಿಮಾನಿಗಳು ಮಂಗಳವಾರದಂದು ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ನಗರಸಭೆ ಸದಸ್ಯರಾದ ಬಾಬು ಮುಳಗುಂದ, ಪ್ರಕಾಶ ಮುರಾರಿ, ಯೂಸುಪ ಅಂಕಲಗಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಅಬ್ಬಾಸ ದೇಸಾಯಿ, ಮುಖಂಡರುಗಳಾದ ಶಿವಾನಂದ ಹತ್ತಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಲಕ್ಷ್ಮಣ ಖಡಕಬಾಂವಿ, ಕಿರಣ ಡಮಾಮಗರ, ವಿಜಯ ಜತ್ತಿ, ಮುತ್ತು ಜಮಖಂಡಿ, ಲಕ್ಷ್ಮಣ ತಳ್ಳಿ, ಅನೀಲ ತುರಾಯಿದಾರ, ಮಂಜು ಮಾವರಕರ, ಸಚೀನ ಕಮಟೇಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ವಡೆಯರ, ಮಲ್ಲಿಕಜಾನ ತಳವಾರ, ಸುಧೀರ ಜೋಗೊಜಿ, ವಿರೇಂದ್ರ ಎಕ್ಕೇರಿಮಠ, ಪುನೀತ ಸೇರಿದಂತೆ ಅಭಿಮಾನಿಗಳು ಇದ್ದರು.
ಬಾಕ್ಸ್: “ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಮುಂದಾಗಿದ್ದಾಗ ರಮೇಶ ಜಾರಕಿಹೊಳಿ ಶಾಸಕತ್ವ ಸ್ಥಾನ ಅಮಾನತುಗೊಂಡ ಸಂದರ್ಭದಲ್ಲಿ ಸಹ ರಮೇಶ ಜಾರಕಿಹೊಳಿ ಅಭಿಮಾನಿಗಳು ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಇಲ್ಲಿ ಸ್ಮರಿಸಬಹುದು.”