RNI NO. KARKAN/2006/27779|Saturday, January 11, 2025
You are here: Home » breaking news » ಬೆಳಗಾವಿ:ಕಸಾಪ ಚುನಾವಣೆ : ಬಸವರಾಜ ಖಾನಪ್ಪನ್ನವರ ಅವರನ್ನು ಬೆಂಬಲಿಸಿ : ಕರವೇ ಜಿಲ್ಲಾಧ್ಯಕ್ಷ ದೀಪಕ ಮನವಿ

ಬೆಳಗಾವಿ:ಕಸಾಪ ಚುನಾವಣೆ : ಬಸವರಾಜ ಖಾನಪ್ಪನ್ನವರ ಅವರನ್ನು ಬೆಂಬಲಿಸಿ : ಕರವೇ ಜಿಲ್ಲಾಧ್ಯಕ್ಷ ದೀಪಕ ಮನವಿ 

ಕಸಾಪ ಚುನಾವಣೆ : ಬಸವರಾಜ ಖಾನಪ್ಪನ್ನವರ ಅವರನ್ನು ಬೆಂಬಲಿಸಿ : ಕರವೇ ಜಿಲ್ಲಾಧ್ಯಕ್ಷ ದೀಪಕ ಮನವಿ

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಏ 6 :

 

ಕನ್ನಡಪರ ಹೋರಾಟಗಾರ ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನ್ನವರ ಅವರಿಗೆ ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಿಸಿ ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಕಲ್ಪಿಸಕೊಡಬೇಕೆಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ವಿನಂತಿಸಿದರು.

ಸೋಮವಾರದಂದು ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ ಅಭ್ಯರ್ಥಿ ಬಸವರಾಜ ಖಾನಪ್ಪನ್ನವರ ಅವರೊಂದಿಗೆ ನಗರದ ನಾಗನೂರ ರುದ್ರಾಕ್ಷಿ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ ಅಲ್ಲಂಪ್ರಭು ಮಹಾಸ್ವಾಮಿಗಳು ಆರ್ಶಿವಾದ ಪಡೆದು ಮತನಾಡಿದರು

ಕನ್ನಡ ನಾಡು,ನುಡಿ,ನೆಲ,ಜಲ ಭಾಷೆಯ ವಿಷಯ ಬಂದಾಗ ಮುಂಚೂಣಿಯಲ್ಲಿದ್ದುಕೊಂಡು ಹೋರಾಟ ಮಾಡಿ ಕನ್ನಡವನ್ನು ಗಟ್ಟಿಗೋಳಿಸುತ್ತಿರುವ ಬಸವರಾಜ ಖಾನಪ್ಪನ್ನವರ ಅವರು ಕಸಾಪ ಚುನಾವಣೆಗೆ ಸ್ವರ್ಧಿಸಿದ್ದು, ಕರವೇ ಕಾರ್ಯಕರ್ತರಲ್ಲಿ ಹೋಸ ಹುಮ್ಮಸ್ಸು ಮುಡಿಸಿದೆ. ಜಿಲ್ಲೆಯ ಎಲ್ಲಾ ಕಾರ್ಯಕರ್ತರು ತನು,ಮನದಿಂದ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿರುವ ಬಸವರಾಜ ಖಾನಪ್ಪನ್ನವರ ಅವರಿಗೆ ಶ್ರೀಗಳು ಆರ್ಶಿವದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜನಪದ ವಿದ್ವಾಂಸ ಹಿರಿಯ ಸಾಹಿತಿ ಡಾ‌.ಸಿ.ಕೆ‌.ನಾವಲಗಿ, ಸಾಹಿತಿ ಜಯಾನಂದ ಮಾದರ, ಕರ್ನಾಟಕ ಸರಕಾರಿ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಸವರಾಜ ಮುರಗೋಡ, ಕರವೇ ರಾಜ್ಯ ರೈತ ಘಟಕದ ಸಂಚಾಲಕ ಸುರೇಶ ಗವ್ವನ್ನವರ, ಮುಖಂಡರಾದ ಹೋಳೆಪ್ಪ ಸುಲದಾಳ, ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನ್ನವರ, ಮಹಾಂತೇಶ ಹಿರೇಮಠ, ಮುಗುಟ ಪೈಲವಾನ, ಲಕ್ಷ್ಮಣ ಯಮಕನಮರಡಿ, ನಿಜಾಮ ನಧಾಪ ಸೇರಿದಂತೆ ಇತರರು ಇದ್ದರು.

Related posts: