ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ : ಎರೆಡು ವಾರಗಳ ಕಾಲ ಹೋಂ ಕ್ವಾರಂಟೈನಗೆ ವೈದ್ಯರ ಸೂಚನೆ
ಶಾಸಕ ರಮೇಶ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ : ಎರೆಡು ವಾರಗಳ ಕಾಲ ಹೋಂ ಕ್ವಾರಂಟೈನಗೆ ವೈದ್ಯರ ಸೂಚನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 7 :
ಕೊರೋನಾ ಸೋಂಕು ದೃಢಪಟ್ಟಿದ ಹಿನ್ನಲೆಯಲ್ಲಿ ಗೋಕಾಕ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ರಮೇಶ್ ಜಾರಕಿಹೊಳಿ ಬುಧವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಎರಡುವಾರಗಳ ಕಾಲ ಮನೆಯಲ್ಲಿಯೇ ಹೋಮ್ ಕ್ವಾರೈಂಟೈನಲ್ಲಿರಬೇಕು ಎಂದು ಆಸ್ಪತ್ರೆಯ ವೈದರು ತಿಳಿಸಿದ್ದಾರೆ
ಎ. 1 ರಂದು ರಮೇಶ್ ಜಾರಕಿಹೊಳಿಯವರಿಗೆ ಕೊರೋನಾ ಸೋಂಕು ದೃಢವಾಗಿತ್ತು. ಎ. 4ರಂದು ರಾತ್ರಿ ಉಸಿರಾಟದ ಸಮಸ್ಯೆ ಕಂಡುಬಂದು ಹಿನ್ನಲೆಯಲ್ಲಿ ಅವರು ಗೋಕಾಕಕಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಎ .5 ರಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರು ಎಸ್ ಐಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇದೆ ಎಂದು ಹೇಳಲಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಅವರು ಪಿಪಿಇ ಕಿಟ್ ಧರಿಸಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋವನ್ನು ಅಲ್ಲಿನ ವೈದ್ಯರು ವೈರಲ್ ಮಾಡಿ ಖಚಿತಪಡಿಸಿದ್ದರು .
ಎ.17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಶಾಸಕ ರಮೇಶ್ ಜಾರಕಿಹೊಳಿಯವರು ಬರುವ ಎರೆಡು ವಾರಗಳ ಕಾಲ ಹೋಮ್ ಕ್ವಾರೈಂಟೈನ ಇರಬೇಕಾಗಿದ್ದ ಪರಿಣಾಮ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.