RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಛಲಗಾರ ಅಭಿನಂದನ ಗ್ರಂಥ ಸಂಪಾದಕರಿಗೆ ಸನ್ಮಾನ

ಗೋಕಾಕ:ಛಲಗಾರ ಅಭಿನಂದನ ಗ್ರಂಥ ಸಂಪಾದಕರಿಗೆ ಸನ್ಮಾನ 

ಛಲಗಾರ ಅಭಿನಂದನ ಗ್ರಂಥ ಸಂಪಾದಕರಿಗೆ ಸನ್ಮಾನ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 7 :

 
ಪತ್ರಕರ್ತ ಸಾದಿಕ ಹಲ್ಯಾಳ ಅವರ ಸಾಹಿತ್ಯ ಕೃಷಿಯಿಂದ ಇನ್ನಷ್ಟು ಮೌಲಿಕ ಗ್ರಂಥಗಳು ಸಾಹಿತ್ಯ ಲೋಕಕ್ಕೆ ದೊರೆಯಲ್ಲಿ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಮುರಗೋಡ ಆಶಿಸಿದರು.

ಮಂಗಳವಾರದಂದು ಸಾಯಂಕಾಲ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಳಗಾರ ಅವರ ಗೃಹ ಕಛೇರಿಯಲ್ಲಿ “ಛಲಗಾರ” ಅಭಿನಂದನ ಗ್ರಂಥ ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯಗಳಿಗೆ ಸರಬರಾಜು ಮಾಡಲಿಕ್ಕೆ ಆಯ್ಕೆಯಾದ ಪ್ರಯುಕ್ತ ಗ್ರಂಥದ ಸಂಪಾದಕ ಸಾದಿಕ ಹಲ್ಯಾಳ ಅವರಿಗೆ ಸತ್ಕರಿಸಿ ಅವರು ಮಾತನಾಡಿದರು.

ಕಳೆದ 15 ವರ್ಷಗಳಿಂದ ಪತ್ರಿಕೋದ್ಯಮದೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಯವರೆಗೆ 5 ಮೌಲಿಕ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಸಾದಿಕ ಅವರು ಸಂಪಾದಿಸಿದ ಛಲಗಾರ ಅಭಿನಂದನ ಗ್ರಂಥವು ಸರಕಾರ ಮಟ್ಟದಲ್ಲಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಇವರಿಂದ ಇನ್ನಷ್ಟು ಗ್ರಂಥಗಳು ಹೊರಬಂದು ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜಿ.ಪಿ.ಯು.ಸಿ ಉಪ ಪ್ರಾಚಾರ್ಯರಾದ ಜಿ.ಆರ್.ಮಾಳಗಿ, ಪದಾಧಿಕಾರಿಗಳಾದ ಕೃಷ್ಣಕುಮಾರ್ ಎಸ್.ಕೆ , ಆರ್.ಎಂ ಅಗಳನ್ನವರ, ಎಮ್.ಎಸ್.ಬಿರಾದರಗೌಡರ, ಎನ್‌.ಪಿ ಬಡವಣಿ, ಎಸ್.ಎಸ್.ಮಾಳಗಿ,ಮುಖಂಡರಾದ ಮುಗುಟ ಪೈಲವಾನ ಇದ್ದರು.

Related posts: