ಗೋಕಾಕ:ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಾ ಬಂದಿದೆ : ಮಾಜಿ ಸಂಸದೆ ತೇಜಸ್ವಿನಿ ರಮೇಶ
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಾ ಬಂದಿದೆ : ಮಾಜಿ ಸಂಸದೆ ತೇಜಸ್ವಿನಿ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 12 : ನಯೀ ರೋಶನಿ , ನಯೀ ಮಂಜಿಲ ಯೋಜನೆಯಡಿ ಮೋದಿ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಆಧಾರ ಸ್ತಂಭವಾಗಿದೆ ಎಂದು ಮಾಜಿ ಸಂಸದೆ ಶ್ರೀಮತಿ ತೇಜಸ್ವಿನಿ ರಮೇಶ ಹೇಳಿದರು. ಸೋಮವಾರದಂದು ನಗರದ ಲಕ್ಕಡಗಲ್ಲಿ ಶಾದಿ ಮಹಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಬೆಳಗಾವಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಶ್ರೀಮತಿ ಮಂಗಳಾ ಅಂಗಡಿ ಅವರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮ ಎಲ್ಲರಿಗೂ ದೊಡ್ಡದು, ಕಾಂಗ್ರೆಸ್ ಪಕ್ಷ ಅದನ್ನು ರಾಜಕೀಯವಾಗಿ ಬಳಿಸಿಕೊಂಡು ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ಆಡಳಿತ ನಡೆಸಿದರು ಸಹ ಅಲ್ಪಸಂಖ್ಯಾತ ಸಮುದಾಯದ ಬಡವರು ಬಡವರಾಗಿ ಉಳಿದಿದ್ದಾರೆ. ಹಜ್ ಭವನ , ಅಲ್ಪಸಂಖ್ಯಾತ ಇಲಾಖೆ ಯಿಂದ ಸಮುದಾಯದ ಜನರಿಗೆ ರೂ 500 ಕೋಟಿ ಹಣ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕಾಯ್ದಿರಿಸಲಾಗಿದೆ. ಮೌಲಾನ ಆಜಾದ, ಎಪಿಜೆ ಅಬ್ದುಲ್ ಕಲಾಮ್ ಸೇರಿದಂತೆ ಇತರ ಅಲ್ಪಸಂಖ್ಯಾತರ ಸಮುದಾಯದ ನೇತಾರರು ನಮಗೂ ಕೂಡಾ ನಾಯಕರು, ಅಲ್ಪಸಂಖ್ಯಾತರು ಇಂದು ಜಾಣರಾಗಿದ್ದಾರೆ ಈಗ ಕಾಂಗ್ರೆಸ್ ಆಟ ನಡೆಯುವುದಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರದಲ್ಲಿ ಮೋದಿ ಅವರು ಅಲ್ಪಸಂಖ್ಯಾತರ ಏಳ್ಗೆಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಸಿಡಿ ಪ್ರಕರಣ ಪ್ರಸ್ಥಾಪಿಸಿದ ಮಾಜಿ ಸಂಸದೆ ತೇಜಸ್ವಿನಿ ಅವರು ಕಾಂಗ್ರೆಸ್ ದವರ ಸಿಡಿ ಷಡ್ಯಂತ್ರ ನಡೆಯುವದಿಲ್ಲ ಅದೇನಿದ್ದರೂ ಈಗ ಹಳೆ ಪೀಚ್ಚರ್. ಇಗೆನಿದ್ದರು ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ , ಇಂತಹ 100 ಸಿಡಿ ಬಂದರು ನಾವು ಹೆದರುವುದಿಲ್ಲ ಎಂದು ಸಂಸದೆ ತೇಜಸ್ವಿನಿ ರಮೇಶ ಸಿ.ಡಿ ಷಡ್ಯಂತ್ರಕ್ಕೆ ತಿರುಗೇಟು ನೀಡಿದರು. ಇದೇ ದಿನಾಂಕ ಎಪ್ರಿಲ್ 17 ತಾರೀಖನ ದಿನ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಎಲ್ಲ ಅಲ್ಪಸಂಖ್ಯಾತ ಭಾಂಧವರು ಮಂಗಳಾ ಅಂಗಡಿ ಅವರಿಗೆ ಮತ ನೀಡುವ ಮೂಲಕ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಕೆಎಂಡಿಸಿ ಅಧ್ಯಕ್ಷ ಮುಕ್ತಾರ ಪಠಾಣ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ,ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಮುಜಿಂ ಬಾಬು , ರಾಜ್ಯ ಕಾರ್ಯದರ್ಶಿ ಸೈಯದ ಸಲ್ಲಾಂ, ಅಲ್ಪಸಂಖ್ಯಾತ ರಾಜ್ಯ ಕಾರ್ಯಕಾರಣಿ ಸದಸ್ಯ ಶಕೀಲ ಧಾರವಾಡಕರ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಶಫೀ ಜಮಾದಾರ, ದಾವುಲ ಚಪ್ಪಿ, ಭೀಮಶಿ ಭರಮನ್ನವರ, ಮುಖಂಡರುಗಳಾದ ಅಬ್ಬಾಸ ದೇಸಾಯಿ, ಮೋಸಿನ ಖೋಜಾ, ರಾಜು ಮುನ್ನೋಳಿ, ಕುತಬುದ್ದೀನ ಗೋಕಾಕ,ಜಾವೇದ ಗೋಕಾಕ,ರಾಜೇಂದ್ರ ಗೌಡಪ್ಪಗೋಳ, ಸುಭಾಷ ಪಾಟೀಲ್,ಮೊಹಮ್ಮದ್ ರಪೀಕ ಪೀರಜಾದೆ, ನಜೀರ ಪಾಶಾ, ಜಗದೀಶ ಹಿರೇಮನಿ, ಸಿರಾಜುದ್ದೀನ , ಹುಸೇನಭಾಷಾ ಕುರಕುಂಡ, ಮಲ್ಲಿಕಾಜನ ತಲವಾರ, ಅಬ್ದುಲ್ಲವಹಾಬ ಜಮಾದಾರ, ಯೂಸುಫ್ ಅಂಕಲಗಿ, ಕಾಸೀಮ ಖಲೀಫ, ದಾದಾಪೀರ ಶಾಬಾಶಖಾನ , ಅಬ್ದುಲ್ಲಸತ್ತಾರ ಶಾಬಾಶಖಾನ, ಬಸವರಾಜ ಹಿರೇಮಠ ಸೇರಿದಂತೆ ಇತರರು ಇದ್ದರು.