ಗೋಕಾಕ:ಕಸಾಪ ಚುನಾವಣೆ : ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿ ಪರಿರ್ವತಿಸಲು ಪ್ರಯತ್ನ : ಖಾನಪ್ಪನವರ
ಕಸಾಪ ಚುನಾವಣೆ : ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿ ಪರಿರ್ವತಿಸಲು ಪ್ರಯತ್ನ : ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 13 :
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ ಆಗಿ ಪರಿರ್ವತಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಬಸವರಾಜ ಖಾನಪ್ಪನವರ ಹೇಳಿದರು
ಮಂಗಳವಾರದಂದು ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಕಸಾಪ ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡಿ ನೇಸರಗಿ ಮಲ್ಲಾಪೂರದ ಗಾಳೇಶ್ವರ ಮಠದ ಸದ್ಗುರು ಶ್ರೀ ಚಿದಾನಂದ ಮಹಾಸ್ವಾಮಿಗಳು ಆರ್ಶಿವಾದ ಪಡೆದು ಅವರು ಮಾತನಾಡಿದರು.
ಕಸಾಪವನ್ನು ನಿಜವಾದ ಸಾಹಿತಿಗಳ ಕಡೆಗೆ ಒಯ್ಯುವ ಮಹತ್ತರ ವಿಚಾರದಿಂದ ಚುನಾವಣೆಯನ್ನು ಸ್ವರ್ಧಿಸಿದ್ದು, ಎಲ್ಲ ಕನ್ನಡದ ಮನಸ್ಸುಗಳು ಈ ಬಾರಿ ನನ್ನನ್ನು ಆಯ್ಕೆ ಮಾಡುವ ಮುಖೇನ ಪರಿಷತ್ತನ್ನು ಗಟ್ಟಿಗೊಳಿಸುವ ಮುಂದಾಗಬೇಕು ಎಂದರಲ್ಲದೆ ಮೇ 9 ರಂದು ಜರಗುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಕೇಂದ್ರಗಳಿಗೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಒಬ್ಬ ಕನ್ನಡಪರ ಹೋರಾಟಗಾರನಿಗೆ ನೀಡುವುದರ ಮುಖೇನ ಕನ್ನಡದ ತೇರನ್ನು ಎಳೆಯಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜ ಹತ್ತರಕ್ಕಿ, ರಾಜೇಂದ್ರ ಕೆಂಚನಗುಡ್ಡ, ಬಾಹುಬಲಿ ಖಾರೇಪಠಾಣ, ಅಂಬಾಸೆ ವಾಗುಲೆ, ರಾಜೇಶ ಹುಳ್ಳಿ ಸೇರಿದಂತೆ ಇತರರು ಇದ್ದರು.