ಗೋಕಾಕ:ಮಂಗಲಾ ಅಂಗಡಿ ಅವರಿಗೆ ಮತ ನೀಡಿ, ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ : ಮುಖ್ಯಮಂತ್ರಿ ಮನವಿ
ಮಂಗಲಾ ಅಂಗಡಿ ಅವರಿಗೆ ಮತ ನೀಡಿ, ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ : ಮುಖ್ಯಮಂತ್ರಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 14 :
ದಿ. ಸುರೇಶ ಅಂಗಡಿಯವರು ಕೋವಿಡ್‌ಗೆ ಬಲಿಯಾದ ಪರಿಣಾಮ ಅವರ ಪತ್ನಿ ಮಂಗಲಾ ಸುರೇಶ ಅಂಗಡಿಯವರನ್ನು ಲೋಕಸಭಾ ಉಪ ಚುನಾವಣೆಗೆ ನಿಲ್ಲಿಸಿದ್ದು ಮತದಾರರು ಆಶಿರ್ವಧಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮನವಿ ಮಾಡಿದರು.
ಬುಧವಾರದದಂದು ಸಾಯಂಕಾಲ ನಗರದ ಕೊಳವಿ ಮಾರುತಿ ದೇವಸ್ಥಾನದಿಂದ ಸಂಗೋಳ್ಳಿ ರಾಯಣ್ಣ ವೃತ್ತದ ವರೆಗೆ ಬಿಜೆಪಿ ಅಭ್ಯರ್ಥಿಯ ಪರ
ರೋಡ ಶೋ ಮೂಲಕ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ
25 ಸ್ಥಾನ ಬಿಜೆಪಿ ಗೆಲುವು ಸಾಧಿಸಿ, ಒಂದೆ ಒಂದು ಸ್ಥಾನ ಕಾಂಗ್ರೇಸ್ ಪಡೆದುಕೊಂಡಿತ್ತು. ವಿಧಾನಸಭೆ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ 13 ಕ್ಷೇತ್ರಗಳಲ್ಲಿ ವಿಜಯಸಾಧಿಸಿದೆ. ಪದವಿಧರ ಶಿಕ್ಷಕರ ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವೆ. ಈಗ
ಬದಲಾವಣೆಯ ಗಾಳಿ ಬಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕ. ಈ ವಿಶೇಷ
ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರಿಗೆ ಮತ ನೀಡಿ ಲೋಕಸಭೆಗೆ ಕಳಿಸುವ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಲೋಕಸಭೆಗೆ ಗೆದ್ದ ಮೇಲೆ ದಿ. ಸುರೇಶ ಅಂಗಡಿಯವರು
ಪೂರ್ಣಗೊಳಿಸಲಾಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮತ್ತು ನಮ್ಮ ಅಭ್ಯರ್ಥಿ ಸೇರಿ ಮಾಡುತ್ತೆವೆ ಎಂದು ಭರವಸೆ ನೀಡಿದರು. ಪಕ್ಷದ ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ, ಮತಾದನ ಮಾಡುವಂತೆ ತಿಳಿಸಿ, ದಿ.17 ರಂದು ಬೆಳಿಗ್ಗೆ ಮತದಾನ
ಮಾಡುವ ಪ್ರಮಾಣ ಶೇಕಡಾ 85 ರಿಂದ 90% ರಷ್ಟು ಮತದಾನ ಮಾಡಬೇಕು ಎಂದು ವಿನಂತಿಸಿದರು.
ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾವು ವ್ಯಕ್ತಿಯನ್ನು ವಿರೋಧಿಸುತ್ತಿಲ್ಲ ಕಾಂಗ್ರೇಸ್ ಪಕ್ಷವನ್ನು ವಿರೋಧಿಸುತ್ತಿದ್ದೆವೆ. ಇದನ್ನು ಮತದಾರರು ಗಮನಿಸಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗೆ
ಕಳೆದ ಬಾರಿಗಿಂತ 75 ಸಾವಿರಕ್ಕೂ ಹೆಚ್ಚಿನ ಮತ ನೀಡಿ
ಲೋಕಸಭೆಗೆ ಕಳುಹಿಸುವಂತೆ ಮತದಾರರಲ್ಲಿ ಮನವಿ
ಮಾಡಿದ ಅವರು ಮಾಜಿ ರೈಲ್ವೇ ರಾಜ್ಯ ಮಂತ್ರಿ ದಿ. ಸುರೇಶ ಅಂಗಡಿ ಅತ್ಯಲ್ಪಅವಧಿಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ದಿ. ಸುರೇಶ ಅಂಗಡಿ ಶಾಂತ
ಸ್ವಭಾವದವರು. ಗೋಕಾಕ ತಾಲೂಕಿನ ಮನೆಮಗಳು
ಮಂಗಲಾ ಅಂಗಡಿ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗೋಕಾಕ ತಾಲೂಕಿನ ಅಳಿಯ ಎಂದು ಭಾವಿಸಿ ನಮ್ಮ ಯಜಮಾನ್ರಿಗೆ ಮತವನ್ನು ನೀಡಿ ಲೋಕಸಭೆಗೆ ಕಳುಹಿಸಿದ್ದಿರಿ. ಅವರು ನಮ್ಮನ್ನು ಅಗಲಿದ ಹಿನ್ನಲೆ ಪಕ್ಷ ನನಗೆ ಅವಕಾಶ ನೀಡಿದ್ದು, ನಿಮ್ಮ ಮಗಳನ್ನು ಆಶೀರ್ವಧಿಸುವಂತೆ ಭಾವುಕರಾದರು.
ಸಚಿವ ಜಗದೀಶ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.