ಗೋಕಾಕ:ಉಪ ಚುನಾವಣೆ : ಕೊರೋನಾ ಭೀತಿ ಮತದಾನಕ್ಕೆ ಮುಂದಾಗದ ಮತದಾರರು
ಉಪ ಚುನಾವಣೆ : ಕೊರೋನಾ ಭೀತಿ ಮತದಾನಕ್ಕೆ ಮುಂದಾಗದ ಮತದಾರರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 17 :
ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗೋಕಾಕ್ನಲ್ಲಿ ಮತದಾನ ಮಾಡಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 100 ಹಾಗೂ 101 ರಲ್ಲಿ ಮತದಾನ ಮಾಡಲು ಯಾರು ಮುಂದಾಗುತ್ತಿಲ್ಲ. ಹೀಗಾಗಿ ಮತಗಟ್ಟೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೆನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಮತದಾರರನ್ನು ಮತಗಟ್ಟೆಗೆ ಕಳಿಸಲಾಗುತ್ತಿದೆ.