RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಕನ್ನಡಕ್ಕಾಗಿ ದುಡಿಯುತ್ತಿರುವ ಕನ್ನಡಪರ ಹೋರಾಟಗಾರ ಖಾನಪ್ಪನವರಗೆ ಆಯ್ಕೆ ಮಾಡಿ : ಮಲ್ಲಿಕಾರ್ಜುನ ಶ್ರೀ

ಘಟಪ್ರಭಾ:ಕನ್ನಡಕ್ಕಾಗಿ ದುಡಿಯುತ್ತಿರುವ ಕನ್ನಡಪರ ಹೋರಾಟಗಾರ ಖಾನಪ್ಪನವರಗೆ ಆಯ್ಕೆ ಮಾಡಿ : ಮಲ್ಲಿಕಾರ್ಜುನ ಶ್ರೀ 

ಕನ್ನಡಕ್ಕಾಗಿ ದುಡಿಯುತ್ತಿರುವ ಕನ್ನಡಪರ ಹೋರಾಟಗಾರ ಖಾನಪ್ಪನವರಗೆ ಆಯ್ಕೆ ಮಾಡಿ : ಮಲ್ಲಿಕಾರ್ಜುನ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಏ 25 :

 

ಕಳೆದ 16 ವರ್ಷಗಳಿಂದ ಕನ್ನಡಕ್ಕಾಗಿ ದುಡಿಯುತ್ತಿರುವ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನವರ ಅವರಿಗೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಸಾಪ ಸದಸ್ಯರು ತಮ್ಮ ಮತಗಳನ್ನು ನೀಡಿ ಆಯ್ಕೆ ಮಾಡಬೇಕೆಂದು ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮನವಿ ಮಾಡಿದರು.
ಶನಿವಾರದಂದು ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿಮಠಕ್ಕೆ ಭೇಟಿ ನೀಡಿದ ಕಸಾಪ ಚುನಾವಣಾ ಅಭ್ಯರ್ಥಿ ಬಸವರಾಜ ಖಾನಪ್ಪನವರ ಅವರಿಗೆ ಶ್ರೀಮಠದಿಂದ ಸತ್ಕರಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಕುತ್ತು ಬಂದಾಗ ಮುಂಚೂಣಿಯಲ್ಲಿ ಇದ್ದು ಹೋರಾಟಗಳನ್ನು ಸಂಘಟಿಸುವ ಮೂಲಕ ತಾಲೂಕಿನಲ್ಲಿ ಕನ್ನಡದ ಜಾಗೃತಿ ಮೂಡಿಸುವಲ್ಲಿ ಇವರ ಪಾತ್ರ ಹಿರಿಯದಾಗಿದೆ. ಗೋಕಾಕಕಿನ ಶೂನ್ಯ ಸಂಪಾದನ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಕನ್ನಡದ ಬಗ್ಗೆ ಹಲವಾರು ಕ್ರಿಯಾತ್ಮಕ ಕಾರ್ಯಗಳನ್ನು ಮಾಡುತ್ತಿರುವ ಇವರು ಮುರುಘರಾಜೇಂದ್ರ ಮಹಾಸ್ವಾಮಿಗಳ ಆರ್ಶಿವಾದದಿಂದ ಕಸಾಪ ಚುನಾವಣೆ ಸ್ವರ್ಧಿಸಿದ್ದು, ಇಲ್ಲ ಕನ್ನಡದ ಮನಸುಗಳು ಇವರನ್ನು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಇನ್ನೂ ಹೆಚ್ಚಿನ ಸೇವೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ನಂತರ ಮಲ್ಲಾಪೂರ ಪಿ.ಜಿ ಪಟ್ಟಣ, ಅರಭಾವಿ , ಕೊಣ್ಣೂರ, ದೂಪದಾಳ, ನವಿಲಮಾಳ, ಗೋಕಾಕ ಫಾಲ್ಸ್ ಗ್ರಾಮಗಳಲ್ಲಿ ಕಸಾಪ ಸದಸ್ಯರ ಮನೆ ಮನೆಗೆ ತೆರಳಿ ಖಾನಪ್ಪನವರ ಮತಯಾಚನೆ ಮಾಡಿದರು

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ದೀಪಕ ಹಂಜಿ, ಬಸವರಾಜ ಹಂಜಿ, ರಾಮ ಕುಡ್ಡೆಮ್ಮಿ , ರಾಮ ಕಮತಿ, ರಾಮ ಕೊಂಗನೋಳ್ಳಿ , ನೂರ ಮೋಮಿನ ,ಯಾಸೀನ ಮುಲ್ಲಾ, ಭರ್ಮಪ್ಪ ಪೂಜೇರಿ, ಇದ್ದರು.

Related posts: