ಗೋಕಾಕ:ಟಾಸ್ಕ್ ಪೋರ್ಸ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ : ಗೊಂದಲದಲ್ಲಿ ನಗರದ ಸಾರ್ವಜನಿಕರು
ಟಾಸ್ಕ್ ಪೋರ್ಸ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ : ಗೊಂದಲದಲ್ಲಿ ನಗರದ ಸಾರ್ವಜನಿಕರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 27 :
ನಾಳೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಜನತಾ ಕರ್ಪ್ಯೂ ಜಾರಿಯಲ್ಲಿರಲ್ಲಿದ್ದು ಅಗತ್ಯ ವಸ್ತುಗಳು ,ಸರಕು ಸಾಗಾಣಿಕೆಯನ್ನು ಹೊರೆತು ಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ .
ಸರಕಾರದ ಈ ನೂತನ ಆದೇಶವನ್ನು ಪಾಲಿಸಲು ತಾಲೂಕಿನ ಟಾಸ್ಕ ಪೋರ್ಸ ತಂಡ ಸಕಲ ರೀತಿಯಲ್ಲಿ ಸನ್ನದ್ಧವಾಗಿ ಸರಕಾರದ ಆದೇಶವನ್ನು ಪಾಲಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೋಳ್ಳುವ ಬಹುದೊಡ್ಡ ಜವಾಬ್ದಾರಿ ಸರಕಾರ ಸ್ಥಳೀಯ ತಾಲೂಕಾಡಳಿತದ ಎಲ್ಲ ಅಧಿಕಾರಿಗಳಿಗೆ ನೀಡಿದೆ.
ಈ ಅವಧಿಯಲ್ಲಿ ಟಾಸ್ಕ ಪೋರ್ಸ ತಂಡದ ಎಲ್ಲ ಅಧಿಕಾರಿಗಳು ಸಾರ್ವಜನಿಕರ ಆಪ್ತ ರಕ್ಷಕವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಬೇಕು ಆದರೆ ಇಲ್ಲಿನ ಟಾಸ್ಕ ಪೋರ್ಸ ಅಧಿಕಾರಿಗಳು ಭಾಗಶಃ ಗೋಕಾಕ ನಗರಕ್ಕೆ ಹೊಸಬರು ಆದ ಪರಿಣಾಮವೇನೋ ಅಧಿಕಾರಗಳ ನಿರ್ಧಾರಗಳು , ಸರಕಾರದ ಮಾರ್ಗಸೂಚಿ ಪಾಲಿಸುವಲ್ಲಿ ಇಲ್ಲಿನ ಅಧಿಕಾರಿಗಳ ಹೇಳಿಕೆಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಸ್ಥಳೀಯ ತಹಶೀಲ್ದಾರ್ ಅವರನ್ನು ಸರಕಾರ ಕೊರೋನಾ ನೋಡಲ್ ಅಧಿಕಾರಿ ಎಂದು ನೇಮಕ ಮಾಡಿದೆ. ಇವರು ಇತರೆ ಎಲ್ಲ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಯಿಸಿ ಸರಕಾರ ಹಾಗೂ ಜಿಲ್ಲಾಡಳಿತ ನೀಡುವ ನಿರ್ದಶನಗಳನ್ನು ಪಾಲಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುವದು ಆದರೆ ಅಧಿಕಾರಗಳಲ್ಲಿಯ ಸಮನ್ವಯ ಕೊರೆತೆಯಿಂದ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದಾರೆ.
ನಾಳೆಯಿಂದ ಬೆಳ್ಳಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳು ಮಾರಾಟ ಇರಲಿದೆ ಎಂದು ತಹಶೀಲ್ದಾರ ಹೇಳಿದರೆ, ಡಿ.ವಾಯ್.ಎಸ್.ಪಿ ಅವರು ಬೆಳಿಗ್ಗೆ 7 ರಿಂದ 1 ಗಂಟೆಯವರೆಗೆ ಅಗತ್ಯ ವಸ್ತುಗಳು ಮಾರಾಟ ಇರಲಿದೆ ಎಂದು ಹೇಳುತ್ತಾರೆ. ಇದನ್ನು ಹೊರತು ಪಡೆಸಿ ನಗರಸಭೆಯ ಅಧಿಕಾರಿಗಳು ತಮ್ಮದೇ ಆದ ನಿಲುವಿನಲ್ಲಿ ಸಾಯಂಕಾಲ ಬೈಕ ಹತ್ತಿಕೊಂಡು ಬೇರೆ ಸಮಯವನ್ನೇ ಸಾರ್ವಜನಿಕರಿಗೆ ತಿಳಿಸುತ್ತಾರೆ. ಇದರಿಂದ ಯಾರ ಹೇಳಿಕೆ ಪಾಲಿಸಬೇಕು ಎಂಬ ಗೊಂದಲದಲ್ಲಿ ಗೋಕಾಕ ಸಾರ್ವಜನಿಕರು ಇದ್ದಾರೆ. ಒಂದು ಕಡೆ ಈಗಷ್ಟೇ ಸುಗಮ ಹಾದಿ ಹಿಡಿದಿದ್ದ ಜನರು ಮತ್ತೆ ಜನತಾ ಕರ್ಪ್ಯೂ ಗೆ ಬೇಚ್ಚಿ ಬಿದ್ದಿದ್ದಾರೆ ಮತ್ತೊಂದು ಕಡೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ಗೋಕಾಕ ಟಾಸ್ಕ ಪೋರ್ಸನ ಹಿರಿಯ ಅಧಿಕಾರಗಳ ಹೇಳಿಕೆಯಿಂದ ಕಂಗಾಲಾಗಿದ್ದಾರೆ.