RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ:ಸತೀಶ ಜಾರಕಿಹೊಳಿ ಕೈ ತಪ್ಪಿದ ಕುಂದಾ : ಸೋಲಿಲ್ಲದ ಸರದಾರ ಮಾಸ್ಟರ್ ಮೈಂಡ್ ಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮಂಗಳಾ

ಬೆಳಗಾವಿ:ಸತೀಶ ಜಾರಕಿಹೊಳಿ ಕೈ ತಪ್ಪಿದ ಕುಂದಾ : ಸೋಲಿಲ್ಲದ ಸರದಾರ ಮಾಸ್ಟರ್ ಮೈಂಡ್ ಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮಂಗಳಾ 

ಸತೀಶ ಜಾರಕಿಹೊಳಿ ಕೈ ತಪ್ಪಿದ ಕುಂದಾ : ಸೋಲಿಲ್ಲದ ಸರದಾರ ಮಾಸ್ಟರ್ ಮೈಂಡ್ ಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮಂಗಳಾ

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ  ಮೇ 2 :

 

ಬೆಳ್ಳಗೆಯಿಂದ ಭಾರಿ ಕುತೂಹಲ ಕೆರಳಿಸಿದ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಂಗಳಾ ಸುರೇಶ್ ಅಂಗಡಿ  2903 ಮತಗಳ ಅಂತರದಿಂದ ಸೋಲ್ಲಿಲದ ಸರದಾರ ಮಾಸ್ಟರ್ ಮೈಂಡ್  ಎಂಬ ಖ್ಯಾತಿಗೆ ಭಾಜಿನರಾಗಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸೋಲಿನ ರುಚಿ ತೋರಿಸಿರುವ ಮುಖೇನ ದೆಹಲಿಯ ಸಂ‌ಸತ ಭವನ ಪ್ರವೆಶಿಸಿ ಬೆಳಗಾವಿ ಲೋಕಸಭೆಗೆ  ಆಯ್ಕೆಯಾದ ಮೊದಲ ಮಹಿಳೆ ಎಂಬ ಇತಿಹಾಸವನ್ನು ಬರೆದಿದ್ದಾರೆ.

ಮೊದಲ 30 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿಯ ಮಂಗಳಾ ಅಂಗಡಿ 31 ನೇ ಸುತ್ತಿನಿಂದ 84ನೇ ಸುತ್ತಿನವರೆಗೆ ಹಿನ್ನಡೆಯ ಅನುಭವಿಸಿದ ಮಂಗಳಾ ಅವರು 84ನೇ ಸುತ್ತಿನಲ್ಲಿ 2941 ಮತಗಳ ಅಂತರವನ್ನು ಸಾಧಿಸಿ ಸತೀಶ ಜಾರಕಿಹೊಳಿ ಅವರಿಗೆ ಭಾರಿ ಪೈಪೋಟಿ ನೀಡಿದರು. ಅಲ್ಲಿಂದ ಹಿಂತಿರುಗಿ ನೋಡದ ಮಂಗಳಾ ಅಂಗಡಿ ಅವರು  435202 ಮತಗಳನ್ನು ಪಡೆದು ಕೇವಲ 2903 ಮತಗಳ ಅಂತರದಿಂದ ಸತೀಶ ಜಾರಕಿಹೊಳಿ ಅವರ ದೆಹಲಿ ಕನಸನ್ನು ನುಚ್ಚನೂರ ಮಾಡಿ ಜಾರಕಿಹೊಳಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

Related posts: