ಗೋಕಾಕ :ಮಾಸ್ಕ್ ಇಲ್ಲದೆ ತಿರುಗಾಡಿದ 3 ಸಾವಿರ ಜನರ ಮೇಲೆ ಕೇಸ್ : 2 ಲಕ್ಷ 73 ಸಾವಿರ ದಂಡ ವಸೂಲಿ : ಡಿ.ವಾಯ್.ಎಸ್.ಪಿ ಜಾವೇದ ಮಾಹಿತಿ
ಮಾಸ್ಕ್ ಇಲ್ಲದೆ ತಿರುಗಾಡಿದ 3 ಸಾವಿರ ಜನರ ಮೇಲೆ ಕೇಸ್ : 2 ಲಕ್ಷ 73 ಸಾವಿರ ದಂಡ ವಸೂಲಿ : ಡಿ.ವಾಯ್.ಎಸ್.ಪಿ ಜಾವೇದ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 9 :
ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಮಾಸ್ಕ ಧರಿಸಿದೆ ತಿರುಗಾಡಿ ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದ 3 ಸಾವಿರ ಜನರಿಂದ ಒಟ್ಟು 2 ಲಕ್ಷ 73 ಸಾವಿರ ದಂಡ ವಿಧಿಸಿಲಾಗಿದೆ ಎಂದು ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಹೇಳಿದರು
ರವಿವಾರದಂದು ಸಾಯಂಕಾಲ ಡಿ.ವಾಯ್.ಎಸ್.ಪಿ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೋಕಾಕ ಉಪ ವಿಭಾಗದಲ್ಲಿ ಇಲ್ಲಿಯವರೆಗೆ 830 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದ್ದು 35 ಕೇಸಗಳನ್ನು ದಾಖಲಿಸಿಲಾಗಿದೆ ಎಂದ ಅವರು ಬೆಂಗಳೂರಿನಿಂದ ಗೋಕಾಕ ನಗರಕ್ಕೆ ಆಗಮಿಸಿದ 316 ಪ್ರಯಾಣಿಕರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿ ಅದರಲ್ಲಿ 80 ಜನರಿಗೆ ಕೊರೋನಾ ಪಾಜಿಟಿವ ವರದಿ ಬಂದಿದ್ದು ಎಲ್ಲ ಕೊರೋನಾ ಪಾಜಿಟಿವ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ .
ನಾಳೆಯಿಂದ ಮೇ 24ರ ವರೆಗೆ ಸಿಮೀ ಲಾಕಡೌನ ವಿಧಿಸಲಾಗಿದ್ದು, ಮುಂಜಾನೆ 6 ರಿಂದ 10 ಘಂಟೆಯವರೆಗೆ ದಿನಸಿ ವ್ಯಾಪಾರಸ್ಥರಿಗೆ ಅನುಮತಿ ನೀಡಿದ್ದು, ಉಳಿದ ಎಲ್ಲ ಅಂಗಡಿಗಳು ಸಂಪೂರ್ಣ ಬಂದ ವಿರಲಿದ್ದು ಸಾರ್ವಜನಿಕರು ತಮಗೆ ವಿಧಸಿದ ಸಮಯದಲ್ಲಿ ಕಾಳನಡಿಗೆಯಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿಬಹುದು. 10 ನಂತರ ಸಂಪೂರ್ಣ ವ್ಯಾಪಾರ ವಹಿವಾಟಿಗಳಿಗೆ ನಿರ್ಬಂಧ ವಿಧಿಸಿಲಾಗಿದ್ದು ವಿನಾ ಕಾರಣ ತಿರುಗಾಡುವವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ ಇಲಾಖೆಯೊಂದಿಗೆ ಸಹಕರಿಸ ಕೊರೋನಾ ನಿಯಂತ್ರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ದ್ವಿಚಕ್ರ ವಾಹನ ಸವಾರರ ಮೆಲೆ ಕಠಿಣ ಕ್ರಮ : ನಾಳೆಯಿಂದ ಮೇ 24 ರವರೆಗೆ ನಗರದಲ್ಲಿ ತಿರುಗಾಡುವ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗುವುದು. ಜಾಷಧಿ, ಬ್ಯಾಂಕ , ಹಾಲು, ಆಸ್ಪತ್ರೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಸಲುವಾಗಿ ಹೊರಗಡೆ ಬರುವವರು ಕಾಲನಡಿಗೆ ಮುಖಾಂತರ ಬರಬೇಕು ಎಂದು ಜಾವೇದ ಇನಾಂದಾರ ಹೇಳಿದರು.
ತರಕಾರಿ ಮಾರಾಟಕ್ಕೆ ತಳ್ಳುವ ಗಾಡಿಯಲ್ಲಿ ಅನುಮತಿ :
ತರಕಾರಿ ಮಾರಾಟ ಮಾಡುವವರು ತಳ್ಳುವ ಗಾಡಿಯಲ್ಲಿ ಮುಂಜಾನೆ 6 ಘಂಟೆಯಿಂದ ಸಾಯಂಕಾಲ 6 ಘಂಟೆಯವರೆಗೆ ಅನುಮತಿ ಇದ್ದು, ಓಣಿಗಳಲ್ಲಿ ತಳ್ಳುಗಾಡಿಯ ಮುಖಾಂತರ ತರಕಾರಿ ಮಾರಾಟ ಮಾಡಬಹುದು
ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ : ದಿನಸಿ ಹಾಗೂ ಇತರೇ ವಸ್ತುಗಳನ್ನು ನಿಗದಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಅಂತಹ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಾವೇದ ಇನಾಂದಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಪಿಎಸ್ಐ ಖಿಲಾರಿ ಉಪಸ್ಥಿತರಿದ್ದರು