ಗೋಕಾಕ:ಬಂದ್ ಮಾಡುವಲ್ಲಿ ತೋರಿಸುವ ಧೈರ್ಯವನ್ನು ಹಗಲು ದರೋಡೆ ಮಾಡುತ್ತಿರುವ ಮೇಲೆ ತೋರಿಸಲಿ
ಬಂದ್ ಮಾಡುವಲ್ಲಿ ತೋರಿಸುವ ಧೈರ್ಯವನ್ನು ಹಗಲು ದರೋಡೆ ಮಾಡುತ್ತಿರುವ ಮೇಲೆ ತೋರಿಸಲಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 10 :
ಕಳೆದ 10 ದಿನಗಳಿಂದ ರಾಜ್ಯಾದ್ಯಂತ ಜನತಾ ಕರ್ಪ್ಯೂ ಜಾರಿಯಲ್ಲಿದ್ದು, ಸೋಮವಾರದಿಂದ ಸೆಮಿ ಲಾಕಡೌನ ಜಾರಿಯಾಗಿದ್ದು ಸಾರ್ವಜನಿಕರು ರಾಜ್ಯದಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಅವಶ್ಯಕ ವಸ್ತುಗಳ ವ್ಯಾಪಾರ ವಹಿವಾಟು ಮಾಡಲು ಸರಕಾರ ವಿಧಿಸಿರುವ ಸಯಮದಲ್ಲಿ ಕೆಲಹೊತ್ತು ಆಗುವ ಹೆಚ್ಚು ಕಡಿಮೆ ಹೊರೆತು ಪಡೆಸಿ ಸಾರ್ವಜನಿಕರು ಸರಕಾರ ಮತ್ತು ಸ್ಥಳೀಯ ಟಾಸ್ಕ ಪೋರ್ಸ ಸಮಿತಿಗೆ ಸಹಕಾರ ನೀಡುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು .
ಇದು ಕರೋನಾ ಜನಾತಾ ಕರ್ಪ್ಯೂ ( ಸೆಮಿ ಲಾಕಡೌನ) ಒಂದು ಭಾಗವಷ್ಟೆ ಇದನ್ನೇ ದೊಡ್ಡ ಕೆಲಸ ಎಂದು ಬೆನ್ನತ್ತಿರುವ ತಹಶೀಲ್ದಾರ ನೇತೃತ್ವದ ಟಾಸ್ಕ್ ಪೋರ್ಸ್ ಸಮಿತಿಯು ಸಾರ್ವಜನಿಕರ ಒಡಾಟದ ಮೇಲೆ, ಅವಶ್ಯಕ ವಸ್ತುಗಳ ಮಾರಾಟಗಾರರ ಮೇಲೆ, ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಅನಗತ್ಯವಾಗಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಮೂಗುದಾರ ಹಾಕುವ ಭರದಲ್ಲಿ ತಾವು ಮಾಡಬೇಕಾದ ನಿಜವಾದ ಕರ್ತವ್ಯವನ್ನು ಮರೆತು ಬಿಟ್ಟಿದ್ದಾರೆ. ಜನತಾ ಕರ್ಪ್ಯೂ ಘೋಷಣೆಯಾಗುವ ಸಂಕೇತ ಸಿಕ್ಕಾಗಲೇ ಸಾರ್ವಜನಿಕರಿಗೆ ಟೋಪಿ ಹಾಕಲು ವ್ಯವಸ್ಥಿತವಾಗಿ ರೇಡಿಯಾದ ಹಗಲು ದರೋಡೆಕೋರರು ಕರೋನಾದಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಂದ ಸಿಕ್ಕಾಪಟ್ಟೆ ಹಣ ದೊಚುತ್ತಿದ್ದಾರೆ. ಇಂತಹ ಮಾಫಿಯಾಗಳಿಗೆ ಸರಿಯಾಗಿ ಬುದ್ದಿ ಕಲಿಸಿ ಸಾರ್ವಜನಿಕರ ಪಾಲಿನ ಆಶ್ರಯದಾತರಾಗ
ಬೇಕಾಗಿರುವ ತಾಲೂಕಾ ಟಾಸ್ಕ್ ಪೋರ್ಸ್ ಸಮಿತಿಯ ಜವಾಬ್ದಾರಿಯುತ್ತ ಅಧಿಕಾರಿಗಳು ಇದು ನಮಗೆ ಸಂಬಂಧವಿಲ್ಲ ,ನಮ್ಮ ಕೆಲಸ ಬರೀ ಸಾರ್ವಜನಿಕರು ಹೊರ ಬರದಂತೆ ಹೆದರಿಸುವುದು, ಅಂಗಡಿಕಾರರನ್ನು ಹೆದರಿಸಿ ಬೇಗ ಅಂಗಡಿ ಬಂದ್ ಮಾಡಿಸುವುದು, ಮುಂಜಾನೆ ಒಂದು ಸಾರಿ ಮತ್ತು ಸಾಯಂಕಾಲ ಒಂದು ಸಾರಿ ನಗರದ ಯಾವುದಾದರೂ ಒಂದು ಸ್ಥಳದಲ್ಲಿ ನಿಲ್ಲುವದು. ಎರೆಡಮೂರು ದಿನಕ್ಕೊಮ್ಮೆ ಸಭೆ ನಡೆಸುವುದು ಎಂದು ಭಾವಿಸಿದ್ದಾರೆ ಅನಿಸುತ್ತದೆ. ಕರೋನಾ ಪಿಡಿತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಅವರ ಮೆಚ್ಚುಗೆ ಗಳಿಸಿಕೊಳ್ಳಬೇಕಾದ ಟಾಸ್ಕ್ ಪೋರ್ಸ್ ಸಮಿತಿಯಲ್ಲಿರುವ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಇವರ ಈ ನಿರ್ಲಕ್ಷ್ಯದ ಲಾಭವನ್ನು ಪಡೆದಿರುವ ಗೋಕಾಕ ನಗರದ ಖಾಸಗಿ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರಗಳು, ಆಕ್ಸಿಜನ್ ಪೂರೈಕೆ ಮಾಡುವವರು, ದಿನಸಿ ವ್ಯಾಪಾರಸ್ಥರು ಹಾಗೂ ಪಾನ ಮಸಾಲಾ ವ್ಯಾಪಾರಸ್ಥರು ಸಾರ್ವಜನಿಕರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡಿ ಹಗಲು ದರೋಡೆಗೆ ಇಳಿದಿದ್ದಾರೆ.
ಮೊದಲೇ ಜನತಾ ಕರ್ಪ್ಯೂ ಹಾಗೂ ಲಾಕಡೌನ ದಂತಹ ಕಠಿಣ ನಿಯಮಗಳಿಗೆ ಕೆಲಸ ವಿಲ್ಲದೆ, ಕೈಯಲ್ಲಿ ಕಾಸು ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಜನರು ತಮ್ಮ ದೈನಂದಿನ ಅಗತ್ಯ ವಸ್ತು ಹಾಗೂ ಇತರೇ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳಬೇಕೆಂದರೆ ನಗರದಲ್ಲಿ ಸಂಚು ರೂಪಿಸಿಕೊಂಡಿರುವ ಮನುಷ್ಯತ್ವ ಇಲ್ಲದ ಹೋಲಸೇಲ್ ವ್ಯಾಪಾರಸ್ಥರು ಹಾಗೂ ಆಸ್ಪತ್ರೆಯವರು ಇದೇ ನಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಸಮಯವೆಂದು ತಿಳಿದು ನಮಗೆ ಹೇಳುವವರಿಲ್ಲ, ಕೇಳುವವರಿಲ್ಲ ಎಂದು ಭಾವಿಸಿ ಹಗಲು ದರೋಡೆ ನಡೆಸುತ್ತಿದ್ದಾರೆ.
ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ಸರಕಾರ ತಹಶೀಲ್ದಾರ್ ಅವರನ್ನು ನೋಡಲ್ ಅಧಿಕಾರಿ ಎಂದು ನೇಮಿಸಿ ಅವರ ನೇತೃತ್ವದಲ್ಲಿ ಟಾಸ್ಕ ಪೋರ್ಸ ಸಮಿತಿ ರಚಿಸಿದೆ ಇದರಲ್ಲಿ ತಾಲೂಕಾ ಆರೋಗ್ಯಧಿಕಾರಿ , ಮುಖ್ಯವೈದ್ಯಾಧಿಕಾರಿ, ಡಿ.ವಾಯ್.ಎಸ್.ಪಿ , ಸೇರಿದಂತೆ ಇತರ ಅಧಿಕಾರಿಗಳನ್ನು ಸರಕಾರ ನೇಮಿಸಿದೆ. ಈ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸಮಿತಿಯು ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕ ಕಣ್ಣೀರು ಒರೆಸುವ ಕಾರ್ಯಮಾಡಿ ಜನರ ಆಪ್ತಭಾಂಧವ ಆಗಬೇಕು ಆದರೆ ಇಲ್ಲಿ ಸೀನ್ ಬೇರೆನೆ ಆಗಿದೆ.
ನಗರದಲ್ಲಿ ಹೋಲಸೇಲ್ ವ್ಯಾಪಾರಸ್ಥರು ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿದ್ದಾರೆ, ಖಾಸಗಿ ಆಸ್ಪತ್ರೆಯವರು ಸಹ ಕರೋನಾ ರೋಗಿಗಳಿಂದ ಸಾಕಷ್ಟು ಹಣ ದೋಚುತ್ತಿದ್ದಾರೆ,ಸ್ಕ್ಯಾನಿಂಗ್ ಸೆಂಟರದಲ್ಲಿಯೂ ಸಹ ಮನಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಇವರನ್ನು ಕೇಳುವ ಧೈರ್ಯ ಮಾಡುತ್ತಿಲ್ಲ ಅದರಲ್ಲೂ ತಾಲೂಕು ಆರೋಗ್ಯಾಧಿಕಾರಿ ಯವರು ಇಂತಹ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರಗಳ ಮೇಲೆ ದಾಳಿ ನಡೆಸಿ ಅವರನ್ನು ಶಿಕ್ಷೆಗೆ ಒಳಪಡಿಸುವ ಕಾರ್ಯಕ್ಕೆ ಕೈ ಹಾಕದಿರುವದು ಸಾಕಷ್ಟು ಸಂಶಯಕ್ಕೆ ಇಡು ಮಾಡಿದೆ .
ಸೆಮಿ ಲಾಕಡೌನ ಸಂಧರ್ಭದ 14 ದಿನಗಳ ಅವಧಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಹೊತ್ತಿರುವ ಟಾಸ್ಕ ಪೋರ್ಸ ಸಮಿತಿಯು ಕುಟುಂಬದ ಹಿರಿಯಣ್ಣನಂತೆ ಕಾರ್ಯನಿರ್ವಹಿಸಿ, ಲಾಕಡೌನ ,ಜನತಾ ಕರ್ಪ್ಯೂ ಹೆಸರಲ್ಲಿ ನಗರದಲ್ಲಿ ಹಗಲು ದರೋಡೆಗೆ ಇಳಿದಿರುವ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್, ದಿನಸಿ,ಪಾನ ಮಸಾಲ ಮಾಫಿಯಾ ಮಟ್ಟಹಾಕಲು ಧೈರ್ಯ ತೋರಲಿ ಎಂಬುವುದೆ ಸಾರ್ವಜನಿಕರ ಕೂಗಾಗಿದೆ.