ಗೋಕಾಕ:ರಂಜಾನ್ ಹಬ್ಬದ ಅಂಗವಾಗಿ ಅಂಜುಮನ್ – ಏ – ಇಸ್ಲಾಂ ಕಮಿಟಿಯಿಂದ ನಿರ್ಗತಿಕರಿಗೆ ಅನ್ನಸಂತರ್ಪಣೆ
ರಂಜಾನ್ ಹಬ್ಬದ ಅಂಗವಾಗಿ ಅಂಜುಮನ್ – ಏ – ಇಸ್ಲಾಂ ಕಮಿಟಿಯಿಂದ ನಿರ್ಗತಿಕರಿಗೆ ಅನ್ನಸಂತರ್ಪಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 14 :
ತ್ಯಾಗ ಹಾಗೂ ದಾನದ ಪ್ರತೀಕವಾಗಿರುವ (ಈದುಲ್ ಪೀತರ ) ರಂಜಾನ್ ಹಬ್ಬದ ನಿಮಿತ್ತ ಶುಕ್ರವಾರದಂದು ಅಂಜುಮನ್ – ಏ – ಇಸ್ಲಾಂ ಕಮಿಟಿ ಅವರು ನಗರದಲ್ಲಿ ವಾಸವಾಗಿರುವ ಬಡವರಿಗೆ, ದುರ್ಭಲರಿಗೆ ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡಿದರು.
ಮನೆಗಳಲ್ಲಿಯೇ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ನಿರ್ಗತಿಕರು ವಾಸವಿರುವ ಪ್ರದೇಶಗಳಿಗೆ ತೆರಳಿದ ಅಂಜುಮನ್ – ಏ – ಇಸ್ಲಾಂ ಕಮಿಟಿಯ ಸದಸ್ಯರು ಅಲ್ಲಿನ ಜನರಿಗೆ ಆಹಾರ ಪ್ಯಾಕೆಟಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ ಕೊರೋನಾ ಮಹಾಮಾರಿ ಜನರ ಎಲ್ಲ ಧಾರ್ಮಿಕ ಆಚರಣೆಗಳನ್ನು ಕಸಿದುಕೊಂಡಿದೆ. ಯಾರು ಎದೆಗುಂದದೆ,ಧೈರ್ಯದಿಂದ ಕೊರೋನಾ ಮಹಾಮಾರಿಯನ್ನು ಎದುರಿಸಿ ಅದನ್ನು ಸೋಲಿಸಬೇಕಾಗಿದೆ. ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಎಲ್ಲರು ಶ್ರಮಿಸಿಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ , ಇಸ್ಮಾಯಿಲ್ ಗೋಕಾಕ, ಇಸ್ಮಾಯಿಲ್ ಜಮಾದಾರ, ಕುಯ್ಯೂಮ ಖೈರದಿ, ಸಲ್ಲಿಂ ಮುಲ್ಲಾ ಸೇರಿದಂತೆ ಇತರರು ಇದ್ದರು.