RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಫ್ರಂಟ್ ಲೈನ್ ವಾರಿಯರ್ಸ್ಗ ಗೆ ಅವಮಾನ : ಸಿಪಿಐ ಮುರನಾಳ ಮೇಲೆ ಸೂಕ್ತ ಕ್ರಮಕ್ಕೆ ಗೋಕಾಕ ಪತ್ರಕರ್ತರ ಆಗ್ರಹ

ಗೋಕಾಕ:ಫ್ರಂಟ್ ಲೈನ್ ವಾರಿಯರ್ಸ್ಗ ಗೆ ಅವಮಾನ : ಸಿಪಿಐ ಮುರನಾಳ ಮೇಲೆ ಸೂಕ್ತ ಕ್ರಮಕ್ಕೆ ಗೋಕಾಕ ಪತ್ರಕರ್ತರ ಆಗ್ರಹ 

ಫ್ರಂಟ್ ಲೈನ್ ವಾರಿಯರ್ಸ್ಗ ಗೆ ಅವಮಾನ : ಸಿಪಿಐ ಮುರನಾಳ ಮೇಲೆ ಸೂಕ್ತ ಕ್ರಮಕ್ಕೆ ಗೋಕಾಕ ಪತ್ರಕರ್ತರ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಮೇ 15 :

 

ಕಳೆದ ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಇತನು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಥಳಿಸಿರುವುದನ್ನು ಖಂಡಸಿ ಇಲ್ಲಿನ ಪ್ರತಕರ್ತ ಬಳಗದವರು ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.

ಶನಿವಾರದಂದು ನಗರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರನ್ನು ಭೇಟಿಯಾದ ಪತ್ರಕರ್ತರು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಅರ್ಪಿಸಿದರು.

ಪತ್ರಕರ್ತರನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದೆ. ಸಮಾಜದ ಅಂಡುಡೊಕುಗಳನ್ನು ತಿದ್ದುವ ಸಮಾಜದಲ್ಲಿ ನಡೆಯುವ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೆಯ ಮೂಲಕ ಬಿತ್ತರಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವ ಪರ್ತಕರ್ತರ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಸಹ ಮಾಡಿದ್ದು ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂಬ ಆದೇಶ ಹೊರಡಿಸಿದ್ದರೂ ಮೂಡಲಗಿ ಸಿಪಿಐ ಮುರನಾಳ ಸರ್ಕಾರದ ಆದೇಶ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಪೊಲೀಸ್ ಇಲಾಖೆಗೆ ಚ್ಯುತಿತರುವಂತಹದ್ದು,

ಪತ್ರಕರ್ತ ತನ್ನ ಗುರುತಿನ ಚೀಟಿ ತೋರಿಸಿದರೂ ಸಿಪಿಐ ಅವರು ನೀನು ಪತ್ರಕರ್ತನಾದರೆ ನನಗೆ ಏನು ನನ್ನ ಮೇಲೆ ದೂರು ದಾಖಲು ಮಾಡು ಎಂದು ದರ್ಪದ ಮಾತನಾಡಿರುವುದು ಸರಿಯಲ್ಲ ಹಾಗೂ ಪೋಲಿಸ ಪೇದೆ ದುಂಡಪ್ಪ ಕೊಣ್ಣೂರ ಇವರ ದೌರ್ಜನ್ಯ ಮೂಡಲಗಿ ಪಟ್ಟಣದಲ್ಲಿ ಹೆಚ್ಚಾಗಿದ್ದು ಇವರಿಬ್ಬರ ಉದ್ದಾಟತನವ ಅತಿಯಾಗಿದ್ದು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರಿಬ್ಬರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ರಾಜ್ಯ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಹೋರಾಟ ನಡೆಸಲಾಗುವುದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರತಕರ್ತರಾದ ಎಸ್.ಬಿ ಧಾರವಾಡಕರ, ಭೀಮಶಿ ಭರಮನ್ನವರ, ಪಿ. ಪ್ರಭಾಕರ ಸಾದಿಕ ಹಲ್ಯಾಳ, , ಬಸವರಾಜ ದೇಶನೂರ, ಮನೋಹರ ಮ್ಯಾಗೇರಿ , ಕಿರಣ ಢಮಾಮಗರ, ಮಹಾನಿಂಗ ಕೆಂಚನ್ನವರ, ಉಮೇಶ ನಂದಗಾವ, ಜೇಮ್ಸ್ ವರ್ಗಿಸ, ಜಾಫರ್ ಶಾಬಾಶಖಾನ, ವಿಠಲ ಕುಂಬಾರ, ಶೆಟ್ಟೆಪ್ಪಾ ಹರಿಜನ, ಚೇತನ ಖಡಕಭಾಂವಿ, ಸಂತೋಷ ನೊಗಿನಾಳ,ರಾಮು ಖೋಣಿ ,ಕೃಷ್ಣಾ ಕರಗುಪ್ಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: