RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಏಕತಾ ಅನ್ನದಾಸೋಹ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನಸಂತರ್ಪಣೆ

ಗೋಕಾಕ:ಏಕತಾ ಅನ್ನದಾಸೋಹ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನಸಂತರ್ಪಣೆ 

ಏಕತಾ ಅನ್ನದಾಸೋಹ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನಸಂತರ್ಪಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21:

 

ಇಲ್ಲಿಯ ಏಕತಾ ಅನ್ನದಾಸೋಹ ಸಮಿತಿ ಅವರು ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅವರು ಸಹಾಯಕರಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ ಅನ್ನಸಂತರ್ಪಣೆಯನ್ನು ಕೊರೋನಾ ಸಂಕಷ್ಟದ ದಿನಗಳಲ್ಲಿಯೂ ಸಹ ಈ ಶುಕ್ರವಾರದಂದು ಹಮ್ಮಿಕೊಂಡಿದ್ದರು.

ಈ ಸಮಿತಿಯು ಅವರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿದ್ದು ಈ ಅನ್ನಸಂತರ್ಪಣೆಯೂ ಸತತವಾಗಿ ಮೂರು ವರ್ಷಗಳಿಂದ ಮಾಡುವುದರೊಂದಿಗೆ ತಮ್ಮ ಮಾನವಿಯತೆಯನ್ನು ತೋರಿಸಿದ್ದಾರೆ.

ಸಮಿತಿಯ ಮುಖಂಡರುಗಳಾದ ಅಜರ ಮುಜಾವರ,ಹಾರುಣ ಮತ್ತೆ, ಮೋಸಿನ ಬುಡನ್ನವರ,ಸದ್ದಾಂ ಸೌದಾಗರ,ರಿಯಾಜ ಅಂಕಲಗಿ,ರೋಶನ ಜಮಾದಾರ,ಆಸೀಮ ಮುಲ್ಲಾ ಸೇರಿದಂತೆ ಇನ್ನೂ ಅನೇಕ ಗೆಳೆಯರಗಳು ತನು ಮನ ಧನದಿಂದ ಮಾಡುತ್ತಿರುವ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Related posts: