RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಸರಕಾರದ ನೀಡಿದ ಪ್ಯಾಕೇಜ್ ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ : ಅಶೋಕ ಪೂಜಾರಿ

ಗೋಕಾಕ:ಸರಕಾರದ ನೀಡಿದ ಪ್ಯಾಕೇಜ್ ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ : ಅಶೋಕ ಪೂಜಾರಿ 

ಸರಕಾರದ ನೀಡಿದ ಪ್ಯಾಕೇಜ್ ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ : ಅಶೋಕ ಪೂಜಾರಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :

 

ಪಡಂಭೂತವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿರುವ ಕರೋನಾ ಮಹಾ ಮಾರಿಗೆ ಇಡೀ ರಾಜ್ಯ ಮತ್ತು ರಾಷ್ಟ್ರದ ಜನತೆ ತತ್ತರಿಸಿರುವ ಈ ಸಂದರ್ಭದಲ್ಲಿ ರಾಜ್ಯ ಸರಕಾರ ದುಡಿಯುವ ವರ್ಗಕ್ಕೆ ಘೋಷಿಸಿರುವ ಆರ್ಥಿಕ ನೆರವಿನ ಪ್ಯಾಕೇಜ್ ಸ್ವಾಗತಾರ್ಹವಾಗಿದ್ದರೂ ಸಹ ಈ ಘೋಷಿಸಿರುವ ಸಹಾಯಧನ ಅತ್ಯಲ್ಪಮಟ್ಟದಾಗಿದ್ದು, ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ರಾಜಕೀಯ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು ಪ್ರತಿಯೊಬ್ಬರಿಗೂ ಕನಿಷ್ಠ 10,000/- ರೂಗಳ ಆರ್ಥಿಕ ಸಹಾಯಧನ ದೊರೆಯಬಹುದೆಂದು ನಿರೀಕ್ಷಿಸಿದ್ದ ಫಲಾನುಭವಿಗಳು ಇದರಿಂದ ತೀವ್ರ ಹತಾಶಯಗೊಂಡಿದ್ದಾರೆ. ಅದರ ಜೊತೆಗೆ ಸಮಾಜದಲ್ಲಿ ಸಹಾಯಧನ ಅಪೇಕ್ಷಿಸಿದ್ದ ಕೆಲವು ದುಡಿಯುವ ವರ್ಗಗಳನ್ನು ಕಡೆಗಣಿಸಿರುವದು ಸಹ ಖೇಧದ ಸಂಗತಿಯಾಗಿದೆ. ವಿಶೇಷವಾಗಿ ಒಕ್ಕಲುತನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೃಷಿ ಕೂಲಿಕಾರರು ಹಾಗೂ ದಿನನಿತ್ಯದ ಜೀವನಕ್ಕೆ ಅವಶ್ಯಕವಿರುವ ಕೆಲವು ವಾಣಿಜ್ಯ ವ್ಯವಹಾರುಗಳ ಅಂಗಡಿಗಳನ್ನು ಹೊರತುಪಡಿಸಿ ಒಟ್ಟಾರೆಯಾಗಿ ಉಳಿದೆಲ್ಲ ವ್ಯಾಪಾರಗಳ ವಹಿವಾಟ ಬಂದಾಗಿದ್ದು, ಬಟ್ಟೆ ಅಂಗಡಿ, ಸ್ಟೇಶನರಿ ಅಂಗಡಿ ಮುಂತಾದ ಬಹುತೇಕ ಇನ್ನುಳಿದ ಅಂಗಡಿಗಳಲ್ಲಿ ಕಾರ್ಯ ಮಾಡುತ್ತಿರುವ ನೌಕರರಿಗೂ ಸಹ ಸಹಾಯಧನ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.

Related posts: