ಬೆಳಗಾವಿ:ಬೆಳಗಾವಿ , ಗೋಕಾಕ ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ
ಬೆಳಗಾವಿ , ಗೋಕಾಕ ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ
ಬೆಳಗಾವಿ ಸೆ 13 : ಮೋಡಬಿತ್ತನೆಯ ಹತ್ತನೇ ದಿನವಾದ ಮಂಗಳವಾರವೂ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಿದ್ದು ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮೋಡಬಿತ್ತನೆ ಮಾಡಿವೆ.
ಹುಬ್ಬಳ್ಳಿ ನಿಲ್ದಾಣದಿಂದ ಮೊದಲ ವಿಮಾನ ಸಂಜೆ 4 ಗಂಟೆಗೆ ಹಾಗೂ ಎರಡನೇ ವಿಮಾನ 4.31ಕ್ಕೆ ಹಾರಾಟ ಪ್ರಾರಂಭಿಸಿದವು. ಮೊದಲನೇ ವಿಮಾನ ಬೆಳಗಾವಿ ಜಿಲ್ಲೆಯ ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಕಿತ್ತೂರು ತಾಲೂಕುಗಳಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 16 ಫ್ಲಯರ್ಸ್ ಉರಿಸಿ, ಸಂಜೆ 6 ಗಂಟೆಗೆ ಮರಳಿತು.
2ನೇ ವಿಮಾನ ಧಾರವಾಡ, ಉತ್ತರಕನ್ನಡ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯಚರಣೆ ನಡೆಸಿ, ಒಟ್ಟು 12 ಫ್ಲಯರ್ಸ್ ಉರಿಸಿ, ಸಂಜೆ 6.36ಕ್ಕೆ ಮರಳಿತು. ಮೋಡಬಿತ್ತನೆ ನಡೆಸಿದ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಗೋಕಾಕ್, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ, ಯಲ್ಲಾಪುರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸುತ್ತಮುತ್ತ ಮಳೆಯಾಗಿಧೆ