RNI NO. KARKAN/2006/27779|Thursday, April 17, 2025
You are here: Home » breaking news » ಗೋಕಾಕ:ಕೊರೋನಾ ಹೆಸರಿನಲ್ಲಿ ಮೆಡಿಕಲ್ ಸ್ಟೋರ ಹಾಗೂ ವಿತರಕರ ಕಳ್ಳಾಟ : ಸೋಂಕಿತರಿಂದ ಔಷಧಿ ಹೆಸರಿನಲ್ಲಿ ಸುಲಿಗೆ

ಗೋಕಾಕ:ಕೊರೋನಾ ಹೆಸರಿನಲ್ಲಿ ಮೆಡಿಕಲ್ ಸ್ಟೋರ ಹಾಗೂ ವಿತರಕರ ಕಳ್ಳಾಟ : ಸೋಂಕಿತರಿಂದ ಔಷಧಿ ಹೆಸರಿನಲ್ಲಿ ಸುಲಿಗೆ 

ಕೊರೋನಾ ಹೆಸರಿನಲ್ಲಿ ಮೆಡಿಕಲ್ ಸ್ಟೋರ ಹಾಗೂ ವಿತರಕರ ಕಳ್ಳಾಟ : ಸೋಂಕಿತರಿಂದ ಔಷಧಿ ಹೆಸರಿನಲ್ಲಿ ಸುಲಿಗೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 25 :

 
ಕೊರೋನಾ ಮಹಾಮಾರಿ ಸೋಂಕು ಬಡವ , ಶ್ರೀಮಂತ ದಿನ , ದಲಿತ ಎಂಬ ಭೇದವಿಲ್ಲದೆ ತನ್ನ ಸರ್ಪದಿಗೆ ಬಂದ ಎಲ್ಲರನ್ನು ಆವರಿಸಿಕೊಂಡು ತನ್ನ ರುದ್ರ ನರ್ತನ ತೊರಿಸಿ ಇಡೀ ರಾಜ್ಯವನ್ನು ಬೆಚ್ಚಿ ಬಿಳಿಸಿದೆ .
ಸರಕಾರ ,ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಗಳು ಕೊರೋನಾ ಸೋಂಕು ಹರಡದಂತೆ ತಮ್ಮ ಶಕ್ತಿಮಿರಿ ಪ್ರಯತ್ನಿಸುತ್ತಿವೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಬಂದು ತಮ್ಮ ಅವಶ್ಯಕತೆಗಳನ್ನು ಇಡೆರಿಸಿಕೊಂಡು ಸ್ಥಳೀಯ ಆಡಳಿತಕ್ಕೆ ಕೊರೋನಾ ತಡೆಗಟ್ಟಲು ಸಹಕಾರ ನೀಡುತ್ತಿದ್ದಾರೆ. ಆದರೆ ಇದೇ ಸೂಕ್ತ ಸಮಯ ಎಂದು ಭಾವಿಸಿಕೊಂಡಿರುವ ಔಷಧಿ ವಿತಕರು ಹಾಗೂ ಮಾರಾಟಗಾರರು ಕೊರೋನಾ ಸೋಂಕಿತರಿಗೆ ಬೇಕಾಗುವ ಅಗತ್ಯ ಔಷಧಿಗಳನ್ನು ಹಾಗೂ ಇನ್ನೀತರ ಔಷಧಿಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಒಂದು ಕಡೆ ಬೆಡ್ ಇಲ್ಲದೆ, ಆಕ್ಸಿಜನ ಇಲ್ಲದೆ ಕೊರೋನಾ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾದರೆ
ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ನಿಗದಿತ ದರಕ್ಕೆ ಔಷಧಿಗಳು ದೊರೆಯದಿರುವದರಿಂದ ಹೈರಾಣಾಗಿದ್ದಾರೆ. ಇದಲ್ಲದೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸಾಗಿಸಲು ಎಲ್ಲಿಲದ ಬೇಡಿಕೆ ಬಂದಿದ್ದು, ನಿಗದಿ ದರಕ್ಕಿಂತ ಐದಾರು ಪಟ್ಟು ದರ ವಸೂಲಿ ಮಾಡುವಲ್ಲಿ ಆಂಬುಲೆನ್ಸ್ ಚಾಲಕರು , ಮಾಲೀಕರು ನಿರತರಾಗಿದ್ದಾರೆ. ಕೊರೋನಾ ಮಹಾಮಾರಿ ತನ್ನ ರುದ್ರ ನರ್ತನ ನಡೆಸಿ ರಾಜ್ಯವನ್ನು ಬೆಚ್ಚಿ ಬಿಳಿಸುತ್ತಿರುವ ಇಂತಹ ತುರ್ತು ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಔಷಧಿ ಹಾಗೂ ಆಂಬುಲೆನ್ಸ್ ಮಾಲೀಕರು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಲಕ್ಷ ,ಲಕ್ಷ ಹಣ ಮಾಡುವುದರಲ್ಲಿ ಬ್ಯೂಜಿಯಾಗಿದ್ದಾರೆ ಎಂದು ಇದಕ್ಕೆ ಗುರಿಯಾಗುತ್ತಿರುವ ನಗರದ ಸಾರ್ವಜನಿಕರು ಆರೋಪಿಸಿದ್ದಾರೆ. ಪಾಪ ಇಂತಹ ತುರ್ತು ಕೊರೋನಾ ಪರಿಸ್ಥಿತಿಯಲ್ಲಿ ಹಣ ಮತ್ತು ಜೀವ ಎರೆಡು ಕಳೆದುಕೊಂಡು ಕಂಗಾಲಾಗುತ್ತಿರುವವರ ಪರಿಸ್ಥಿತಿ ” ಹಣ ನಮಗೆ ಹೆಣೆ ನಿಮಗೆ ” ಎಂಬತಾಗಿದೆ ಎಂದು ನಗರದ ಸಾರ್ವಜನಿಕರು ಗೇಲಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ನಗರದಲ್ಲಿ ಕಂಡು ಬರೀತ್ತಿವೆ. ಇಂತವರ ಗೋಳು ಕೇಳು ಬೇಕಾದ ಅಧಿಕಾರಿ ವರ್ಗದವರು ಈ ವಿಷಯ ನಮಗೆ ಸಂಬಂಧ ಪಡುವದಿಲ್ಲ , ಆ ವಿಷಯ ನಮಗೆ ಸಂಬಂಧ ಪಡುವದಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯವನ್ನೇ ಶ್ರೀರಕ್ಷೆಯಾಗಿಸಿಕೊಂಡಿರುವ ನಗರದ ಆಂಬುಲೆನ್ಸ್ ಹಾಗೂ ಔಷಧಿ ವಿತರಕರು ಹಾಗೂ ಅಂಗಡಿಕಾರರು ಕೊರೋನಾ ಸೋಂಕಿತ ಔಷಧಿಗಳಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ.

ರೆಮಡಿಸಿವಿರ್ ಇಂಜೆಕ್ಷನ್ ದರ 3200, 4800 ರ ಆಸುಪಾಸು ಇದ್ದರೆ ಔಷಧಿ ವಿತರಕರು ಸೋಂಕಿತರಿಂದ 1ಲಕ್ಷಕ್ಕೆ 3 , 1 ಲಕ್ಷಕ್ಕೆ 4 ರಂತೆ ಮಾರಾಟ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋಕಾಕ ನಗರದ ವೈದ್ಯರ ಸಂಬಂಧಿಕರೊಬ್ಬರು ಕೊರೋನಾ ಸೋಂಕಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ವೈದ್ಯರಿಗೆ ರಇಲಾಖೆಯವರುಿರ್ ಇಂಜೆಕ್ಷನ್ ಸಿಗದ ಪರಿಸ್ಥಿತಿಯಲ್ಲಿ ಔಷಧಿ ವಿತರಕರಿಂದ 1 ಲಕ್ಷ ಹಣ ನೀಡಿ 3 ರೆಮಿಡಿಸಿವಿರ್ ಇಂಜೆಕ್ಷನ್ ಪಡೆದಿದ್ದಾರೆ. ವೈದ್ಯರ ಪರಿಸ್ಥಿತಿ ಹೀಗಾದರೆ ಇನ್ನು ಉಳಿದವರ ಪರಿಸ್ಥಿತಿ ಆ ದೇವರೆ ಕಾಪಾಟಬೇಕಷ್ಟೇ.

ಇದು ಇಂಜೆಕ್ಷನ್ ಕಥೆಯಾದರೆ ಔಷಧಿ ಸುಲಿಗೆಯಲ್ಲಿಯೂ ಔಷಧಿ ವಿತರಕರು , ಅಂಗಡಿಯವರು ಹಿಂದೆ ಬಿದ್ದಿಲ್ಲ ಕೊರೋನಾ ಸೋಂಕಿತರಿಗೆ ನೀಡಲಾಗುವ ಐವರ್ ಮ್ಯಾಕ್ಟಿನ್ ಮಾತ್ರೆಗಳು 10 ಕ್ಕೆ 217 , 220.ರ ಆಸುಪಾಸು ದರ ಇದ್ದರೆ ಬಹಳಷ್ಟು ಔಷಧಿ ಅಂಗಡಿಯಲ್ಲಿ 300 ರಿಂದ 400 ರೂ ವರೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು 1,200 ರೂ ಗೆ ಮಾರಾಟ ವಾಗುವ ಫ್ಯ್ಲೂವೀರ ಮಾತ್ರೆಗಳನ್ನು 1.500 ರೂ ರಿಂದ 1.800 ರೂವರೆಗೆ ಮಾರಾಟ ಮಾಡಲಾಗುತ್ತಿದೆ‌.
ಉಸಿರಾಟ ಪರಿಕ್ಷಿಸುವ ಆಕ್ಸಿಮೀಟರ್ ಆಗಲಿ , ಆಕ್ಸಿಜನ ಸಿಲಿಂಡರ್ ನಿಂದ ಕೊರೋನಾ ರೋಗಿಗಳಿಗೆ ಆಕ್ಸಿಜನ ಪೂರೈಕೆಗೆ ಬಳಸುವ ಆಕ್ಸಿಜನ ಪ್ಲೋ ಮೀಟರಗಳ ಬೆಲೆಯೂ ಸಹ ಗಗನಕ್ಕೆರಿದೆ. ಕೊರೋನಾ ಹರಡುವ ಮುನ್ನಾ 600 ರೂ ರಿಂದ 700 ರೂಗೆ ಸಿಗುತ್ತದ ಆಕ್ಸಿಮೀಟರ್ ಗಳ ದರ ಈಗ 1,500 ರಿಂದ 2,000 ರೂ ಎಂ.ಆರ್.ಪಿ ದರ ಇದ್ದರೂ ಸಹ ಔಟ್ ಆಫ್ ಸ್ಟಾಕ್ ಹೆಸರಿನಲ್ಲಿ 2,500 ರೂ ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 2,500 ರೂಗೆ ಮಾರಟವಾಗುತ್ತಿದ್ದ ಆಕ್ಸಿಜನ ಪ್ಲೋ ಮೀಟರ್ 3,500 ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಇದನ್ನು ತಡೆಯಲು ಮನಸ್ಸು ಮಾಡಬೇಕಾಗಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನಾದ್ಯಂತ ತಿರುಗಾಡಿ ಇಂತಹ ಸಂದಿಗ್ಧ ಪರಿಸ್ಥಿತಿ ರೋಗಿಗಳನ್ನು ತಪಾಸಣೆ ಮಾಡುತ್ತಿರುವ ವೈದ್ಯರುಗಳಿಗೆ ನೋಟಿಸ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘನತೆವೆತ್ತ ಜವಾಬ್ದಾರಿಯನ್ನು ಹೊತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಔಷಧಿ ನಿಯಂತ್ರಣ ಇಲಾಖೆಯವರು ನಗರದಾದ್ಯಂತ ತಿರುಗಾಡಿ ಔಷಧಿ ಮಾರಾಟ ಮಾಡುವ ವಿತರಕರಿಗೆ ಮತ್ತು ಔಷಧಿ ಅಂಗಡಿಗಳಿಗೆ ಬೇಟಿ ನೀಡಿ ದುಬಾರಿ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡರೆ ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಇದಕ್ಕೆ ಇಲ್ಲಿನ ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ .ಎಸ್.ಕೊಪ್ಪದ ಅವರು ಯಾವ ಕ್ರಮ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ..
ಹೆಚ್ಚಿನ ಬೆಲೆಗೆ ಮಾರಟಾವಾಗುತ್ತಿರುವ ಅಗತ್ಯ ಔಷಧಿಗಳು : ಸೇಪೋಡೋಕ್ಸಿಮ್, ಸೆಪ್ಟ್ರ್ ಜೋನ್, ಇವೆರ್ಮಾಕ್ಟಿನ್,ಡೋಕ್ಸಿಸಿಲಿನ, ಫ್ಯಾವಿಪಿರವೇರ್, ಹಿಪಾರೇನ್, ಸೇಪೋ ಟ್ಯಾಕ್ಸಿಮ್, ಪಿಪೇರಸಿಲೆನ್, ಮೆರೋಪಿನಿಯಂ,ಮಿಟೈಲ್ಪ್ರೆಡ್ನೋಸೋಲೊನ್,ವಿಟಮಿನ್ ಸಿ, ಜಿಂಕ್ , ಸೇರಿದಂತೆ ಎಲ್ಲ ತರಹದ ಮಲ್ಟಿವಿಟಮಿನ್ ಮಾತ್ರೆಗಳು ಮತ್ತು ಮಧುಮೇಹಕ್ಕೆ ಅಗತ್ಯವಿರುವ ಎಲ್ಲಾ ಔಷಧಿಗಳ ದರ ಹೆಚ್ಚಾಗಿದೆ. ಈ ಎಲ್ಲಾ ಅಗತ್ಯ ಔಷಧಿಗಳ ಕಚ್ಚಾವಸ್ತುಗಳ ಮೇಲಿನ ಜೆ. ಎಸ್.ಟಿ ದರವನ್ನು ಕೇಂದ್ರ ಸರಕಾರ ಹೆಚ್ಚಿಸಿದ್ದರಿಂದ ಮೇಲೆ ನಮೂದಿಸಿದ ಔಷಧಿಗಳನ್ನು ರೋಗಿಗಳು ಮೊದಲಿಗಿಂತ ದರಕ್ಕಿಂತ ಹೆಚ್ಚಿನ ಬೆಲೆಗೆ ಪಡೆದುಕೊಳ್ಳುವ ಪರಿಸ್ಥಿತಿ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಎದುರಾಗಿದೆ.
” ಔಷಧಿಗಳ ಮಾರಟವು ಔಷಧಿ ನಿಯಂತ್ರಣ ಇಲಾಖೆಗೆ ಸಂಬಂಧ ಪಟ್ಟಿದ್ದರಿಂದ ಬೆಳಗಾವಿ ಔಷಧಿ ನಿಂಯತ್ರಣ ಅಧಿಕಾರಿಗಳ ಗಮನಕ್ಕೆ ತಂದು ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು”.
– ಡಾ.ಮುತ್ತಣ್ಣ ಕೋಪ್ಪದ ತಾಲೂಕಾ ಆರೋಗ್ಯಧಿಕಾರಿಗಳು ಗೋಕಾಕ

” ಗೋಕಾಕ ನಗರದ ಎಲ್ಲಾ ಔಷಧಿ ವಿತರಕರು ಹಾಗೂ ಔಷಧಿ ಅಂಗಡಿಗಳಿಗೆ ಹೆಚ್ಚಿನ ದರ ಪಡೆದು ಔಷಧಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುವದು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ರಶೀದ್ ಪಡೆದು ದೂರು ನೀಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು”.
– ರಘರಾಮ ಸಹಾಯಕ ಔಷಧಿ ನಿಂಯತ್ರಕರು
ಔಷಧ ನಿಂಯತ್ರಣ ಇಲಾಖೆ ಬೆಳಗಾವಿ

Related posts: