RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಅಂಬ್ಯುಲೆನ್ಸ್ ಉಚಿತ ಸೇವೆಗೆ ಎಮ್.ಡಿ.ಚುನಮರಿ ಚಾಲನೆ

ಗೋಕಾಕ:ಅಂಬ್ಯುಲೆನ್ಸ್ ಉಚಿತ ಸೇವೆಗೆ ಎಮ್.ಡಿ.ಚುನಮರಿ ಚಾಲನೆ 

ಅಂಬ್ಯುಲೆನ್ಸ್ ಉಚಿತ ಸೇವೆಗೆ ಎಮ್.ಡಿ.ಚುನಮರಿ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 29 :

 

ಕೊರೋನಾ 2ನೇ ಅಲೆಯು ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರಿಂದ ಪ್ರಾರಂಭಿಸಲಾದ ಅಂಬ್ಯುಲೆನ್ಸ್ ಉಚಿತ ಸೇವೆಗೆ ಆರ್‍ಎಸ್‍ಎಸ್‍ನ ಬೆಳಗಾವಿ ವಿಭಾಗ ಸಂಚಾಲಕ ಎಮ್.ಡಿ.ಚುನಮರಿ ಅವರು ಶನಿವಾರದಂದು ನಗರದ ಪಟಗುಂದಿ ಮಾರುತಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.
ಭಜರಂಗದಳದ ಬೆಳಗಾವಿ ವಿಭಾಗೀಯ ಸಂಯೋಜಕ ಸದಾಶಿವ ಗುದಗಗೋಳ ಅವರು ಮಾತನಾಡಿ, ಜನತೆ ಧೈರ್ಯದಿಂದ ಈ ಕೊರೋನಾ ವೈರಸ್‍ನ್ನು ಎದುರಿಸಿ, ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ಸಂಘಟನೆಯಿಂದ ಸೋಂಕಿತರ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ನೀಡುತ್ತಿರುವ ಎರಡನೇ ವಾಹನವಾಗಿದೆ. ಅಂಬ್ಯುಲೆನ್ಸ್ ಸೇವೆಗಾಗಿ ಪುರಷೋತ್ತಮ ಮೊ. ನಂ 8970843771 ಹಾಗೂ ಸೋಮು 8970790276 ಇವರ ನಂಬರಗಳಿಗೆ ಕರೆಯನ್ನು ಮಾಡುವ ಮೂಲಕ ಸೇವೆಯನ್ನು ಪಡೆಯವಂತೆ ಕೋರಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಬೆಳಗಾವಿ ವಿಭಾಗೀಯ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ, , ಪಿಎಸ್‍ಐ ಅನಿಲ ಅಮ್ಮಿನಭಾಂವಿ, ಎಎಸ್‍ಐ ಸಿ.ಪಿ.ಜೆನಕಟ್ಟಿ, ಜಿಲ್ಲಾ ಸಂಯೋಜಕ ಲಕ್ಷ್ಮಣ ಮಿಶಾಳೆ, ವಿಶ್ವ ಹಿಂದೂ ಪರಿಷತ್ತಿನ ತಾಲೂಕಾಧ್ಯಕ್ಷ ಕೃಷ್ಣಾ ಕುರಬಗಟ್ಟಿ, ಕಾರ್ಯದರ್ಶಿ ಸಾಯಿಕುಮಾರ ನಾಯಿಕ, ದೇವಸ್ಥಾನದ ಅರ್ಚಕ ಕೃಷ್ಣಾ ಹೊನ್ನತ್ತಿ ಸೇರಿದಂತೆ ಅನೇಕರು ಇದ್ದರು.

Related posts: