RNI NO. KARKAN/2006/27779|Monday, December 23, 2024
You are here: Home » ಬೆಳಗಾವಿ ಗ್ರಾಮೀಣ » ಗೋಕಾಕ:ಕರೋನಾ ಚೈನ ಮುರಿಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ : ಸುರೇಶ ಸನದಿ

ಗೋಕಾಕ:ಕರೋನಾ ಚೈನ ಮುರಿಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ : ಸುರೇಶ ಸನದಿ 

ಕರೋನಾ ಚೈನ ಮುರಿಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ : ಸುರೇಶ ಸನದಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 30 :

 

ಕರೋನಾ ಚೈನ ಮುರಿಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಹೇಳಿದರು

ರವಿವಾರದಂದು ಇಲ್ಲಿನ ನಮ್ಮ ಬೆಳಗಾವಿ ಗೆಳೆಯ ಬಳಗ ಮನೆಯೇ ಮಂತ್ರಾಲಯ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಗೀತೆಗಳ ನೇರ ಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೋನಾ ಲಾಕಡೌನ ಸಂಧರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದು ಕೋರೋನಾ ಸೋಂಕನ್ನು ಹರಡದಂತೆ ಸಹಕರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅರಿತು ಇಲ್ಲಿನ ನಮ್ಮ ಬೆಳಗಾವಿ ಗೆಳೆಯರ ಬಳಗ ಪೇಸ್ ಬುಕ್ಕ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡು . ಸಾರ್ವಜನಿಕರಲ್ಲಿ ಕೊರೋನಾ ಜಾಗೃತಿ ಮೂಡಿಸುತ್ತಿರುವ ಕಾರ್ಯ ಮಾದರಿಯಾಗಿದೆ. ಶಾಸಕ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಗೋಕಾಕ ಮತಕ್ಷೇತ್ರದಾದ್ಯಂತ ಕೊರೋನಾ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಮನೆಯಲ್ಲಿದ್ದು ಕೊರೋನಾ ಸೋಲಿಸಲು ಫನತೊಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಮ್ಮ ಬೆಳಗಾವಿ ಗೆಳೆಯರ ಬಳಗದ ವತಿಯಿಂದ ಸುರೇಶ ಸನದಿ ಅವರನ್ನು ಗೌರವಿಸಿ ಸತಾಕರಿಸಲಾಯಿತು.
ನಂತರ ನಗರದ ಯುವ ಗಾಯಕರಾದ ಕಾಶಿನಾಥ್ ಸಂವಸುದ್ದಿ ಹಾಗೂ ಮಹಾಂತೇಶ ಬಳಿಗಾರ ಹಂಸಲೇಖ ಅವರು ನಿರ್ದೇಶಿಸಿದ ಚಿತ್ರ ಗೀತೆಗಳು ಹಾಡಿ ನೇರ ಪ್ರಸಾರದಲ್ಲಿ ಮನೆಯಿಂದನೆ ಭಾಗವಹಿದ್ದ ನೂರಾರು ವಿಕ್ಷೀಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನನ್ನವರ, ನಮ್ಮ ಬೆಳಗಾವಿ ಗೆಳೆಯರ ಬಳಗದ ಅಬ್ಬಾಸ ಕೆ ದೇಸಾಯಿ, ಸಾದಿಕ ಹಲ್ಯಾಳ, ಮುಗುಟ ಪೈಲವಾನ, ಖಾಜಾ ಮತ್ತೆ, ಮೋಸಿನ ಮಕಾಂದಾರ, ಇಮ್ರಾನ್ ಗೋಟೆದ, ಮಹಾಂತೇಶ ದಾಸಪ್ಪಗೋಳ ಇದ್ದರು.

ಕಾರ್ಯಕ್ರಮವನ್ನು ಬಳಗದ ಸದಸ್ಯ ಶಿವಾನಂದ ಪೂಜೇರಿ ನಿರ್ವಹಿಸಿದರು.

Related posts: