ಗೋಕಾಕ:ದಿ.4 ರಿಂದ ದಿ.7 ರ ಸಂಪೂರ್ಣ ಲಾಕಡೌನಗೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ : ಪಿಎಸ್ಐ ಕೆ.ವಾಲಿಕರ ಮನವಿ
ದಿ.4 ರಿಂದ ದಿ.7 ರ ಸಂಪೂರ್ಣ ಲಾಕಡೌನಗೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ : ಪಿಎಸ್ಐ ಕೆ.ವಾಲಿಕರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 2 :
ಕೊರೋನಾ ಸರಪಳಿ ಮುರಿಯಲು ಜಿಲ್ಲಾಡಳಿತ ಶುಕ್ರವಾರದಿಂದ ಸೋಮವಾರ ಮುಂಜಾನೆ 6 ಘಂಟೆವರೆಗೆ ಸಂಪೂರ್ಣ ಲಾಕಡೌನ ಘೋಷಿಸಿದ್ದು, ಯಾರು ಕೂಡಾ ಅನಾವಶ್ಯಕವಾಗಿ ಹೊರಗಡೆ ಬಾರದೆ ಸಹಕರಿಸವಂತೆ ನಗರ ಠಾಣೆ ಪಿಎಸ್ಐ ಕೆ.ವಾಲಿಕರ ಹೇಳಿದರು
ಬುಧವಾರದಂದು ಇಲ್ಲಿನ ನಮ್ಮ ಬೆಳಗಾವಿ ಗೆಳೆಯರ ಬಳಗ ಆಯೋಜಿಸಿದ್ದ ಮನೆಯೇ ಮಂತ್ರಾಲಯ ಫೇಸಬುಕ್ಕ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿದರು.
ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ ಪೊಲೀಸ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ನಿಯಂತ್ರಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರು ಸಹ ಪೊಲೀಸ ಇಲಾಖೆಯೊಂದಿಗೆ ಸಹಕಾರ ನೀಡಿ ಕೊರೋನಾ ಹರಡದಂತೆ ಸಹಕರಿಸಬೇಕು. ದಿ. 4 ಶುಕ್ರವಾರದಿಂದ ದಿ.7 ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ನಗರದಾದ್ಯಂತ ಸಂಪೂರ್ಣ ಲಾಕಡೌನ ಇರುವಜರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದೆ ಸಹಕರಿಸಬೇಕು. ಅನಗತ್ಯ ಹೊರಗಡೆ ಬಂದರೆ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಿಎಸ್ಐ ಕೆ.ವಾಲಿಕರ ಅವರಿಗೆ ನಮ್ಮ ಬೆಳಗಾವಿ ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ , ಗೌರವಿಸಲಾಯಿತು.
ನಂತರ ನಗರದ ಗಾಯಕರಾದ ಶಿವಾನಂದ ಪೂಜೇರಿ ಹಾಗೂ ಮಯೂರ ಕೇಳಗಿನಮಠ ಅವರು ಸುಪ್ರಸಿದ್ಧ ಕನ್ನಡ ಚಿತ್ರ ಗೀತೆಗಳು ಹಾಡಿ ನೇರ ಪ್ರಸಾರದಲ್ಲಿ ಮನೆಯಿದ್ದ ನೂರಾರು ವಿಕ್ಷೀಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ, ಮುಸ್ತಾಕ ಖಂಡಾಯತ, ನಮ್ಮ ಬೆಳಗಾವಿ ಗೆಳೆಯರ ಬಳಗದ ಅಬ್ಬಾಸ ಕೆ ದೇಸಾಯಿ, ಸಾದಿಕ ಹಲ್ಯಾಳ, ಮಹಾಂತೇಶ ದಾಸಪ್ಪಗೋಳ, ಖಾಜಾ ಮತ್ತೆ, ಮುಗುಟ ಪೈಲವಾನ, ಮಹಾಂತೇಶ ಬಳಿಗಾರ , ಯಾಕುಬ ಮುಜಾವರ ಇದ್ದರು.