ಗೋಕಾಕ:ಶಿಕ್ಷಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಬಸವರಾಜ ಸಾವಕಾರ ಕುಮಸಗಿ
ಶಿಕ್ಷಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಬಸವರಾಜ ಸಾವಕಾರ ಕುಮಸಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 2 :
ಮಕ್ಕಳಿಗೆ ತಾಯಿಯ ನಂತರ ಸ್ಥಾನದಲ್ಲಿ ಶಿಕ್ಷಕರಿದ್ದು, ಅವರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಕರ್ನಾಟಕ ವಿದ್ಯಾವರ್ಧಕ ಸಂಘಟದ ಅಧ್ಯಕ್ಷ ಬಸವರಾಜ ಸಾವುಕಾರ ಎನ್.ಕುಮಸಗಿ ಹೇಳಿದರು.
ಅವರು ಬುಧವಾರದಂದು ನಗರದ ಹಿಲ್ ಗಾರ್ಡನಲ್ಲಿ ಗೋಕಾಕ ತಾಲೂಕಿನ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ 410 ಶಿಕ್ಷಕರಿಗೆ ಎನ್.95 ಮಾಸ್ಕಗಳನ್ನು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ ಅವರಿಗೆ ವಿತರಿಸಿ ಮಾತನಾಡುತ್ತಾ ಎಲ್ಲರೂ ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿ ಕೊರೋನಾ ವೈರಸ್ ನಿರ್ಮೂಲನಾ ಕಾರ್ಯಕ್ಕೆ ಸಹಕರಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಿಗೂ ಮಾಸ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ, ಶ್ರೀಶೈಲ ಪಾಟೀಲ, ರಾಯಗೊಂಡ ಬಿರಾದಾರ ಸೇರಿದಂತೆ ಅನೇಕರು ಇದ್ದರು.