RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಹಣಕ್ಕಾಗಿ ಇಲಾಖೆಯ ಮಾನ ಹರಾಜ ಹಾಕಿದ ಪೊಲೀಸರು

ಗೋಕಾಕ:ಹಣಕ್ಕಾಗಿ ಇಲಾಖೆಯ ಮಾನ ಹರಾಜ ಹಾಕಿದ ಪೊಲೀಸರು 

ಹಣಕ್ಕಾಗಿ ಇಲಾಖೆಯ ಮಾನ ಹರಾಜ ಹಾಕಿದ ಪೊಲೀಸರು

ಗೋಕಾಕ ಸೆ 14 : ತಾಲೂಕಿನ ನಾಗನೂರ ಪಟ್ಟಣದ ಬಳಿ ಅಕ್ರಮ ಹಣ ವಸೂಲಿ ಮಾಡುತ್ತಿದ್ದ  ಪೋಲಿಸರಿಗೆ  ಪ್ರಯಾಣಿಕರು  ಧರ್ಮದೇಟು ಕೊಟ್ಟಿರುವ  ಘಟನೆ  ಬುಧವಾರ ನಡೆದಿದೆ

ಗೋಕಾಕದಿಂದ ಬರುತ್ತಿರು ಕಾರೊಂದು ಅಡಗಟ್ಟಿ 100-200 ರೂ. ಮಾಮುಲಿ  ವಸೂಲಿ  ಮಾಡುತ್ತಿದ್ದ ಎಸ್ ಐ ಹೊಸಮನಿ ಹಾಗೂ ಇನ್ನೊಬ್ಬ ಕಾನ್ಸಟೇಬಲ್ ರಸ್ತೆಯ ಮಧ್ಯದಲ್ಲಿ ಕಾರ ನಿಲ್ಲಿಸಿ ಕೆಳಗೆ ಇಳಿದು ಅನಾವಶ್ಯಕ ತಗಾದೆ ತೆಗೆದು ಕಾರಿನ ಚಾಲಕನಿಗೆ ದುಡ್ಡು ಕೊಡುವಂತೆ ಆವಾಜ್ ಮಾಡಿ ಖಾಕಿ ದರ್ಬಾರ ನಡೆಸಿದ್ದಾರೆ.

ವಾಹನದ ಎಲ್ಲಾ ಕಾಗದು ಹಾಗೂ ಲೈಸೆನ್ಸ್ ಇದ್ದರು ಕೂಡ ಕಿರಿಕಿರಿ ಮಾಡಿ  ಮಾಮೂಲಿ ನೀಡಿದರೆ ಸರಿ,  ಇಲ್ಲದಿದ್ದರೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕದ್ದಾರೆ. ಅಲ್ಲದೇ ಚಾಲಕನ ತಾಯಿಗೆ ಆವಾಜ್ ಹಾಕಿದ ಎಸ್.ಐ ಹೊಸಮನಿಯ ಈ ಕೃತ್ಯವನ್ನು ವಿರೋಧಿಸಿ ದುಡ್ಡು ನೀಡಲು ನಿರಾಕರಿಸಿದ್ದರಿಂದ  ಚಾಲಕನ ತಾಯಿಗೆ ಏಟು ನೀಡಲು ಹೋಗಿ ತಿರುಗೇಟು ಹೊಡೆಸಿಕೊಂಡಿದ್ದಾನೆ. 

ಈ ಮಧ್ಯೆ ಪೊಲೀಸ ಮತ್ತು ಚಾಲಕನ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿವರೆಗೂ ಹೋಗಿ ಕೊನೆಗೆ ಎಸ್ ಐ ಮೈ ಮೇಲಿನ ಬಟ್ಟೆ ಹರಿಸಿಕೊಂಡು ರಸ್ತೆ ಮಧ್ಯೆದಲ್ಲಿ ಎತ್ತರ ಧ್ವನಿಯಲ್ಲಿ ಕೂಗಾಡಿ ಅಲ್ಲಿ ನೆರೆದ ಜನರಿಗೆ ಮನರಂಜನೆ ನೀಡಿದ್ದಾನೆ. ನಡುರಸ್ತೆಯಲ್ಲಿ ಮಾಮುಲಿಗಾಗಿ ಪೊಲೀಸರ ಈ ದಬ್ಬಾಳಿಕೆಯನ್ನು ಕಂಡು ಜನರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪೊಲೀಸರ ಅರ್ನುಜಿತ ವರ್ತನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದೆ . ಹೀಗೆ ಬೀಡಿಗಾಸಿಗಾಗಿ ನಡು ರಸ್ತೆಯಲ್ಲಿ ಇಲಾಖೆಯ ಮಾನ ಹರಾಜ ಹಾಕಿದ ನಾಲಾಯಕ ಪೊಲೀಸರಿಗೆ ಇಲಾಖೆಯ ಉನ್ನತಾಧಿಕಾರಿಗಳು ಶಿಸ್ತಿನ ಗೂಸಾ ನೀಡಿ ಕಾನೂನು ಕ್ರಮ ಜರುಗಿಸಬೇಕಾಗಿದೆ

Related posts: